
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಅ. 3: ಮನೆಗಳಿಗೆ ಅತಿಥಿಗಳು ಬರುವಂತೆ ಇದೇ ತಿಂಗಳ 12 ರಿಂದ 27 ರವರೆಗೆ ಅಟ್ಲಾಸ್ ಎಂಬ ಧೂಮಕೇತು ಬರಿಗಣ್ಣಿಗೆ
ಗೋಚರವಾಗಲಿದೆ. 2023 ರ ಜನವರಿ ತಿಂಗಳಲ್ಲಿ ದೂರದರ್ಶಕದಿಂದ ನೋಡಿದಾಗ ಭೂಮಿಯಿಂದ 100 ಕೋಟಿ ಕಿ. ಮೀ
ದೂರದಲ್ಲಿತ್ತು. ಇದೀಗ ಸೂರ್ಯನನ್ನು ಸುತ್ತು ಹಾಕಿ ಭೂಮಿಯ ಸಮೀಪ ಬರುತ್ತಿದೆ. ಭೂಮಿಯ ಕಕ್ಷೆಯಲ್ಲಿ ಸುಮಾರು 17 ದಿನಗಳ
ಕಾಲ ಇದ್ದು, ತನ್ನ ಸ್ವಸ್ಥಾನಕ್ಕೆ ಹಿಂದಿರುಗುತ್ತದೆ. ಹೀಗೆ ಬರುತ್ತಿರುವ ಅಟ್ಲಾಸ್ ಧೂಮಕೇತುವನ್ನು ಪ್ರತಿಯೊಬ್ಬರೂ ಬರಿಗಣ್ಣಿನಿಂದ
ನೋಡಬಹುದಾಗಿದೆ. ಇದೇ ಅಕ್ಟೋಬರ್ 12 ರಂದು ಸಂಜೆ ವೇಳೆ ಪಶ್ಚಿಮದಲ್ಲಿ ಉರಗದರ ಎಂಬ ನಕ್ಷತ್ರಪುಂಜದ ಬಳಿ ಬರಿಗಣ್ಣಿಗೆ
ಕಾಣಿಸಲಿದೆ. ಇದರಿಂದ ಭೂಮಿಗಾಗಲೀ, ಪಶು ಪಕ್ಷಿ ಪ್ರಾಣಿಗಳಿಗಾಗಲೀ ಯಾವುದೇ ರೀತಿಯ ತೊಂದರೆಯಿಲ್ಲ. ಯಾರೂ ಭಯ,
ಆತಂಕಪಡುವ ಅಗತ್ಯವಿಲ್ಲ. ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿರುವ ಈ ಧೂಮಕೇತುವನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳಬೇಡಿ
ಎಂದು ಚಿತ್ರದುರ್ಗದ ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪರ್ಕಕ್ಕಾಗಿ 9448565534
Views: 0