ಚಿತ್ರದುರ್ಗ ಅ. 4 : ದೇವಿ ಪುರಾಣವನ್ನು ಕೇಳುವುದರಿಂದ, ವಾಚನ ಮಾಡುವುದರಿಂದ, ಆಲಿಸುವುದರಿಂದ ನಮ್ಮಲ್ಲಿನ ಚಿಂತೆಯನ್ನು ದೂರ ಮಾಡುವ ಚಿಂತಾಮಣೆಯಾಗಿದೆ ಎಂದು ಸಾಹಿತಿಗಳು, ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಕಾರ್ಯ ದರ್ಶಿಗಳಾದ ಹುರಳಿ ಬಸವರಾಜು
ತಿಳಿಸಿದರು.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದ ಕಬೀರಾನಂದ ನಗರದಲ್ಲಿನ ಶ್ರೀ ಸದ್ಗುರು ಕಬೀರಾನಂದಾಶ್ರಮದ ಶ್ರೀ ಭಗವತಿ ಬಗಳಾಂಬಿಕಾದೇವಿ ದೇವಸ್ಥಾನದಲ್ಲಿ ಸಂಜೆಯಿಂದ ವಿಜಯದಶಮಿಯವರೆಗೆ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮಲ್ಲಿ ವಿವಿಧವಾದ ಹಬ್ಬಗಳಿಗೆ ಇದನ್ನು ನಮ್ಮ ಪೂರ್ವಜರು ಮಾಡಿದ್ದಾರೆ. ಇದನ್ನು ಮಾಡುವುದರಿಂದ ನಮ್ಮ ಮನೆ ಹಾಗೂ ಮನಗಳು ಶುದ್ದವಾಗಿ ಇರಲೆಂದು ಮಾಡಿದ್ದಾರೆ. ಕಾಲ ಕಾಲಕ್ಕೆ ಮಾನವರಾದ ನಾವುಗಳು ಮನೆಯನ್ನು ಶುಚಿ ಮಾಡಲಿ ಅದೇ ರೀತಿ ಭಗವಂತನ
ನಾಮ ಸ್ಮರಣೆಯನ್ನು ಮಾಡುವುದರ ಮೂಲಕ ನಮ್ಮ ಮನವನ್ನು ಸಹಾ ಶುಚಿಯಾಗಿ ಇಟ್ಟುಕೊಳ್ಳಲೆಂದು ಈ ರೀತಿ ಹಬ್ಬಗಳ ನೆಪದಲ್ಲಿ ಇದನ್ನು ಮಾಡಿದ್ದಾರೆ ಎಂದರು.
ಹಿಂದೂ ಧರ್ಮದಲ್ಲಿ ಹಬ್ಬಗಳಿಗೆ ಕೊರತೆ ಇಲ್ಲ ಪ್ರತಿ ದಿನವೂ ಸಹಾ ಹಬ್ಬವಾಗಿದೆ. ಇದನ್ನು ಮಾಡುವುದರಿಂದ ನಮ್ಮ ಮನಗಳು ಶುದ್ದವಾಗುವಂತೆ ಮಾಡಿದ್ದಾರೆ. ಈ ಹಬ್ಬಗಳ ನೆಪದಲ್ಲಿ ಬಂಧುಗಳ ಬಳಗದವರು ಸೇರಿಕೊಳ್ಳುವ ರೀತಿಯಲ್ಲಿ ಮಾಡಿದ್ದಾರೆ.
ಹಿಂದಿನ ಕಾಲದಲ್ಲಿ ಈ ಜಾಗ ಕರುವಿನ ಕಟ್ಟೆ ಎಂದು ಪ್ರಸಿದ್ದಿಯಾಗಿತ್ತು ಆದರೆ ಈಗ ಇದು ಕರುವಿನ ಕಟ್ಟೆಯಾಗಿ ಎಲ್ಲರಿಗೂ ಅರಿವನ್ನು ನೀಡುವಂತ ಕಟ್ಟೆಯಾಗಿದೆ. ಕಬೀರಾನಂದ ಆಶ್ರಮವೂ ಶಿವರಾತ್ರಿ ಮಹೋತ್ಸವದಡಿಯಲ್ಲಿ ಏಳು ದಿನಗಳ ಕಾಲ ವಿವಿಧ ವಿದ್ವಾಂಸರಿಂದ ಪಂಡಿತರಿಂದ ಸಾಹಿತಿಗಳಿಂದ ಜ್ಞಾನದ ದಾಸೋಹವನ್ನು ನೀಡುತ್ತಾರೆ ಅದೇ ರೀತಿ ಈ ನವರಾತ್ರಿಯ 10 ದಿನಗಳ ಕಾಲ ದೇವಿಯ ಪುರಾಣವನ್ನು ವಾಚನ ಮಾಡಿಸುವುದರ ಮೂಲಕ ಭಕ್ತಾಧಿಗಳಿಗೆ ದೇವಿಯ ಸ್ಮರಣೆಯನ್ನು ಮಾಡಿಸುತ್ತಾರೆ. ಇದರಿಂದ ಕರುವಿನಕಟ್ಟೆ ಇಂದು ಎಲ್ಲರ ಅರಿವಿನ ಕಟ್ಟೆಯಾಗಿದೆ ಎಂದು ತಿಳಿಸಿದರು.
ದೇವಿಯೂ ವಿವಿಧೆಡೆಗಳಲ್ಲಿ ವಿವಿಧ ಹೆಸರಿನಿಂದ ಭಕ್ತರಿಂದ ಪೂಜೆಯನ್ನು ಸ್ವೀಕಾರ ಮಾಡುತ್ತಾಳೆ, ಕಾಳಿ, ದುರ್ಗಾ, ಪಾರ್ವತಿ, ದೇವಿ
ಹೀಗೆ ವಿವಿಧ ಹೆಸರಿನಲ್ಲಿ ಪೂಜೆಯನ್ನು ಪಡೆಯುವ ದೇವಿಯ ಆರಾಧನೆಯನ್ನು ಈ 9 ದಿನಗಳ ಮಾಡುವುದರ ಮೂಲಕ ತಮ್ಮ
ಇಷ್ಠಾರ್ಥಗಳನ್ನು ಪಡೆಯಬಹುದಾಗಿದೆ, ಈ ದೇವಿ ಪುರಾಣವನ್ನು ಪಾರಾಯಣ ಮಾಡುವುದಿಂದ ನಮ್ಮ ಶತೃಗಳು ನಾಶವಾಗುತ್ತಾರೆ
ನಮ್ಮಲ್ಲಿನ ಭಯ ದೂರವಾಗುತ್ತದೆ. ಶಾಂತಿ ನೆಮ್ಮದಿ ಮೂಡುತ್ತದೆ. ಇದ್ದಲ್ಲದೆ ವರ್ಷ ಪೂರ್ತಿಯಾಗಿ ಈ ದೇವಿಯ ಪುರಾಣವನ್ನು ವಾಚನ
ಮಾಡುವುದರಿಂದ ಮನೆ ಹಾಗೂ ಮನದಲ್ಲಿ ನೆಮ್ಮದಿಯ ವಾತಾವರಣ ಮೂಡುತ್ತದೆ ಎಂದು ಹುರಳಿ ಬಸವರಾಜು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ವಹಿಸಿದ್ದರು.
ಗೊಲ್ಲರಹಟ್ಟಿಯ ಸಿ ಈರಣ್ಣ ಮಲ್ಲಾಪುರರವರು ದೇವಿಯ ಚರಿತ್ರೆಯನ್ನು ಪಠಿಸಿದರು, ಇವರಿಗೆ ಜಾನಪದ ಕಲಾವಿದರಾದ
ಜಿ.ಎನ್.ವಿರೂಪಾಕ್ಷಪ್ಪ ಹಾರ‍್ಮೊನಿಯಂ ನುಡಿಸಿದರೆ, ಜಿ.ಸಿ.ಯಶವಂತ ತಬಲವನ್ನು ನುಡಿಸಿ ಸಾಥ್ ನೀಡಿದರು.
ಅ. 12ರ ಸಂಜೆ 4 ಗಂಟೆಗೆ ಶ್ರೀ ಮಠದ ಕತೃಗಳಾದ ಶ್ರೀ ಸದ್ಗುರು ಕಬೀರಾನಂದ ಶ್ರೀಗಳ 118ನೇ ವರ್ಷದ ಜಯಂತ್ಯೋತ್ಸವ
ಕಾರ್ಯಕ್ರಮ ನಡೆಯಲಿದ್ದು, ಪ್ರತಿ ನಿತ್ಯ ಸಂಜೆ ಸಂಸ್ಕೃತ ಪಾಠಶಾಲೆಯ ಶಿಕ್ಷಕಿಯಾದ ಶ್ರೀಮತಿ ಬಿ.ಕೆ.ಸುಮನರವರಿಂದ ಶ್ರೀ ಲಲಿತಾ
ಸಹಸ್ರನಾಮ ಸ್ತೋತ್ರ ನಡೆಯಲಿದ್ದು, ಆ. 7ರ ಸೋಮವಾರ ಬೆಳಿಗ್ಗೆ 07.30 ರಿಂದ 10.30ರವರೆಗೆ ಶ್ರೀ ಸದ್ಗುರು
ಕಬೀರಾನಂದಸ್ವಾಮಿ ಸಂಸ್ಕೃತ ಪಾಠಶಾಲೆಯ ಶಿಕ್ಷಕರಾದ ಸುಬ್ರಾಯ ತಿಮ್ಮಣ್ಣ ಭಟ್ಟರಿಂದ ಚಂಡಿಕಾ ಹೋಮ ನಡೆಯಲಿದೆ. ಅ.12ರ
ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.