ಚಿತ್ರದುರ್ಗ: ಅ.06: ದಿನಾಂಕ 6/10/2024ರ ಭಾನುವಾರ ನಗರದ ಎಸ್ ಆರ್ ಎಸ್ ಕಾಲೇಜು ಶಿಕ್ಷಣ ಸಮೂಹ ಸಂಸ್ಥೆ ಚಿತ್ರದುರ್ಗ ವತಿಯಿಂದ ಪಿಯುಸಿ ವಿಧ್ಯಾರ್ಥಿನಿಯರ ಮನೋವಿಕಾಸ ಹಾಗೂ ನೆನೆಪಿನ ಶಕ್ತಿಯನ್ನು ವೃದ್ಧಿಸುವ ದೃಷ್ಟಿಯಿಂದ ಉಚಿತ ಯೋಗ ಪ್ರಾಣಾಯಾಮ ಧ್ಯಾನ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿ ವಿಧ್ಯಾರ್ಥಿನಿಯರಿಗೆ ಯೋಗ ತರಬೇತಿ ನೀಡುತ್ತ ಮಾತನಾಡಿದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಯೋಗ ಪ್ರಚಾರಕ ರವಿ ಕೆ.ಅಂಬೇಕರ್ ಮಾತನಾಡಿ ಶಾಲೆಯ ಒತ್ತಡ, ಬಿಡುವಿಲ್ಲದ ಪೋಷಕರು, ವಿಡಿಯೋ ಗೇಮ್‌ಗಳು, ಮಾಲಿಂಗ್ ಅಥವಾ ಸ್ಪರ್ಧಾತ್ಮಕ ಕ್ರೀಡೆಗಳಿಂದಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಜೀವನವು ಹೆಚ್ಚು ಹೆಚ್ಚು ಒತ್ತಡದಿಂದ ಕೂಡಿರುವಾಗ, ನಿತ್ಯ ಯೋಗಭ್ಯಾಸವು ಜೀವನದ ಸವಾಲುಗಳನ್ನು ಸುಲಭವಾಗಿ ಎದುರಿಸುವ ಶಕ್ತಿಯನ್ನು ವಿಧ್ಯಾರ್ಥಿಗಳಿಗೆ ನೀಡುತ್ತದೆ ಎಂದು ಅಭಿಪ್ರಾಯ ಪಟ್ಟರು.
ತರಬೇತಿಯಲ್ಲಿ ವಿಧ್ಯಾರ್ಥಿಗಳು ನಿತ್ಯ ಮಾಡಬೇಕಾದ ಯೋಗಾಸನಗಳಾದ ತಾಡಾಸನ, ವೃಕ್ಷಾಸನ, ಗರುಢಾಸನ, ಸೂರ್ಯನಮಸ್ಕಾರ ಪ್ರಾಣಾಯಾಮಗಳಲ್ಲಿ ಮುಖ್ಯವಾದ ಭಸ್ತ್ರಿಕ, ಕಪಾಲಭಾತಿ, ಭ್ರಾಹ್ಮರಿ ನಾಡಿಶುದ್ಧಿಪ್ರಾಣಾಯಾಮ ಇನ್ನು ಹಲವು ಯೋಗಭ್ಯಾಸಗಳ ಬಗ್ಗೆ ತಿಳಿಸಿಕೊಡಲಾಯಿತು. ಇವುಗಳ ಅಭ್ಯಾಸದಿಂದ ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸುವ ಮೂಲಕ ಮೆದುಳಿಗೆ ಪೋಷಣೆ ನೀಡುವುದಲ್ಲದೆ ದೇಹದಲ್ಲಿ ತ್ರಾಣ ಮತ್ತು ಸಮತೋಲನವನ್ನು ಸುಧಾರಿಸುತ್ತದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಎಸ್ ಆರ್ ಎಸ್ ಕಾಲೇಜಿನ ಛೇರ್ಮನ್ ಬಿಎ ಲಿಂಗಾರೆಡ್ಡಿ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು.