ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಆ. ೭ ಕೊನೆಗೂ ಮುರುಘಾ ಶ್ರೀಗಳು ಬಿಡುಗಡೆಗೊಂಡು ದಾವಣಗೆರೆಯತ್ತ ಪ್ರಯಾಣ ಬೆಳೆಸಿದ್ದಾರೆ. ಪೋಕ್ಸೋ ಪ್ರಖರಣದಲ್ಲಿ ಮುರುಘಾ ಶ್ರೀಗಳು ಬಂಧಿಯಾಗಿದ್ದು ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು ವಿಚಾರಣೆ ಬಾಕಿ ಇದ್ದ ಹಿನ್ನೆಲೆ ವಿಚಾರಣೆ ಮುಗಿಯುವ ವರೆಗೂ ಕೂಡ ಶ್ರೀಗಳನ್ನ ಬಂಧನದಲ್ಲಿ ಇಡುವಂತೆಯೂ ಕೂಡ ಹೈಕೋರ್ಟ್ ಆದೇಶ ಹಿನ್ನೆಲೆ ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲಿ ಶ್ರೀಗಳನ್ನ ಇರಿಸಿದ್ದು ಇಂದು ಸೋಮವಾರ ಚಿತ್ರದುರ್ಗದ ೨ ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮುರುಘಾ ಶ್ರೀಗಳ ಸಾಕ್ಷ್ಯ ವಿಚಾರಣೆ ಮುಗಿಸಿ ಶ್ರೀಗಳನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಜಿಲ್ಲಾ ಕಾರಾಗೃಹಕ್ಕೆ ಹಸ್ತಾಂತರ ಮಾಡಿದ್ದು ಜಿಲ್ಲಾ ಕಾರಾಗೃಹದಲ್ಲಿ ಎಲ್ಲಾ
ನಿಯಮಾನುಸಾರ ಪರಿಶೀಲನೆ ನಡೆಸಿ ಸಂಜೆ ೪.೩೦ ಕ್ಕೆ ಶ್ರೀಗಳನ್ನ ಹೊರ ಬಿಟ್ಟಿದ್ದು ದಾವಣಗೆರೆಗೆ ಪ್ರಯಾಣ ಬೆಳೆಸಿದ್ದು ಈ ವೇಳೆ
ಮಠದ ಭಕ್ತರು ಹಾಗೂ ಶ್ರೀಗಳ ಭಕ್ತರು ಮುರುಘಾ ಶ್ರೀಗಳ ಪರ ಘೋಷಣೆಗಳನ್ನ ಕೂಗಿ ಶ್ರೀಗಳಿಗೆ ಹೂಮಾಲೆ ಹಾಕಿ ಬರಮಾಡಿಕೊಂಡು
ದಾವಣಗೆರೆ ವಿರಕ್ತ ಮಠಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಚಿತ್ರದುರ್ಗದ ಜಿಲ್ಲಾ ಕಾರಾಗೃಹ ಬಳಿ ಮುರುಘಾಶ್ರೀ ಮಾತನಾಡಿ ನಮ್ಮ ವಿರುದ್ಧದ ಪ್ರಕರಣ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ
ಸತ್ಯಕ್ಕೆ ಜಯ ಸಿಗುತ್ತದೆಂಬ ನಿರೀಕ್ಷೆ ನಮಗಿದೆ ಬಸವೇಶ ಮತ್ತು ಮುರುಘೇಶನ ಆಶೀರ್ವಾದ ಇಂದು ಬಂಧೀಖಾನೆಯಿಂದ ನಾವು
ಬಿಡುಗಡೆ ಆಗಿದ್ದೇವೆ ದಾವಣಗೆರೆಯ ಶಿವಯೋಗಿ ಆಶ್ರಮಕ್ಕೆ ಹೋಗುತ್ತೇವೆ ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ವೇಳೆ ಬಿಡುಗಡೆ
ನೋಡೋಣ ಮುಂದೆ ವಿಚಾರ ಮಾಡಿ ಹೆಜ್ಜೆ ಇಡೋಣ ಜೈಲಿನ ಅನುಭವದ ಬಗ್ಗೆ ಮುಂದೆ ಹೇಳುತ್ತೇವೆ ಇದು ಸಕಾಲ ಅಲ್ಲ, ಮೌನ
ವಹಿಸುವಂತ ಕಾಲವಿದು ಎಂದರು.
ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾದ ಮುರುಘಾಶ್ರೀಗಳನ್ನು ಕಾರಾಗೃಹ ಬಳಿ ಭಕ್ತರು ಹಾರ ಹಾಕಿ ಸ್ವಾಗತಿಸಿದರು.
ದಾವಣಗೆರೆ ವಿರಕ್ತಮಠದ ಬಸವಪ್ರಭುಶ್ರೀ ನ್ಯಾಯಾವಾಧಿಗಳಾದ ಪ್ರತಾಪ್ ಜೋಗಿ ಕೆ,ಎನ್ ವಿಶ್ವನಾಥಯ್ಯ. ಉಮೇಶ್ ಸೇರಿ ಶ್ರೀಗಳ
ಭಕ್ತರು ಉಪಸ್ಥಿತರಿದ್ದರು.