Entertainment: ‘Martin’ Review; ‘ಮಾರ್ಟಿನ್’ ಚಿಂದಿ ದ್ರುವ ಪರ್ಫಾರ್ಮನ್ಸ್, ಆದರೆ!!

ವರ್ಷದ ಬಹುನಿರೀಕ್ಷಿತ ಸಿನಿಮಾ ‘ಮಾರ್ಟಿನ್’ ತೆರೆಗೆ ಬಂದಿದೆ. ಆಕ್ಷನ್ ಪ್ರಿನ್ಸ್ ಆಕ್ಷನ್ ಧಮಾಕಾ ನೋಡಿದ ಸಿನಿರಸಿಕರು ಫಿದಾ ಆಗಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ಸಿನಿಮಾ ದೊಡ್ಡಮಟ್ಟದಲ್ಲಿ ತೆರೆಗಪ್ಪಳಿಸಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಉದಯ್ ಕೆ ಮೆಹ್ರಾ ಬಹುಕೋಟಿ ವೆಚ್ಚದಲ್ಲಿ ‘ಮಾರ್ಟಿನ್’ ಸಿನಿಮಾ ನಿರ್ಮಿಸಿದ್ದಾರೆ. ಹೈವೋಲ್ವೇಜ್ ಆಕ್ಷನ್ ಸೀಕ್ವೆನ್ಸ್ ಚಿತ್ರದಲ್ಲಿ ಹೈಲೆಟ್ ಆಗಿದೆ. ರಾಮ್- ಲಕ್ಷ್ಮಣ್ ಹಾಗೂ ರವಿವರ್ಮಾ ಚಿತ್ರಕ್ಕೆ ಸ್ಟಂಟ್ಸ್ ಕಂಪೋಸ್ ಮಾಡಿದ್ದಾರೆ. ಇನ್ನು ಧ್ರುವ ಸರ್ಜಾ ಪಾತ್ರಕ್ಕೆ ದೇಹ ಹುರಿಗಟ್ಟಿ ಬಹಳ ಖಡಕ್ ಆಗಿ ನಟಿಸಿದ್ದಾರೆ. ಆಕ್ಷನ್ ಸನ್ನಿವೇಶಗಳಲ್ಲಿ ಅಬ್ಬರಿಸಿ ಬೊಬ್ಬರಿದಿದ್ದಾರೆ.

ಟ್ರೈಲ‌ರ್ ಬಿಡುಗಡೆ ಮಾಡದೇ ನೇರವಾಗಿ ‘ಮಾರ್ಟಿನ್’ ಚಿತ್ರವನ್ನು ತೆರೆಗೆ ತರಲಾಗಿದೆ. ಚಿತ್ರಕ್ಕೆ ಕೊನೆ ಹಂತದಲ್ಲಿ ಪ್ರಚಾರ ಕಮ್ಮಿ ಆಯಿತು ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೂ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಮುಂದೆ ಮೌತ್ ಟಾಕ್‌ನಿಂದ ಸಿನಿಮಾ ಪ್ರೇಕ್ಷಕರನ್ನು ಸೆಳೆಯಬೇಕಿದೆ. ಈಗಾಗಲೇ ಸಿನಿಮಾ ನೋಡಿದವರು ಎಕ್ಸ್ ಖಾತೆಯಲ್ಲಿ ತಮ್ಮ ರಿವ್ಯೂ ಕೊಟ್ಟಿದ್ದಾರೆ.

ಧ್ರುವ ಪರ್ಫಾರ್ಮನ್ಸ್ ಚಿಂದಿ

ನೆಟ್ಟಿಗರೊಬ್ಬರು ಟ್ವಿಟ್ ಮಾಡಿ “ಧ್ರುವ ಸರ್ಜಾ ಬೆಂಕಿ ಪರ್ಫಾರ್ಮನ್ಸ್, ಆಕ್ಷನ್ ಸೀಕ್ವೆನ್ಸ್ ಸೂಪ‌ರ್. ವಿಎಫ್‌ಎಕ್ಸ್‌ ಹಾಗೂ ಸಾಂಗ್ಸ್ ಚೆನ್ನಾಗಿಲ್ಲ. ಸ್ಟೋರಿ ಓಕೆ, ಮೇಕಿಂಗ್ ಚೆನ್ನಾಗಿದೆ. ಬಿಜಿಎಂ ಇನ್ನು ಚೆನ್ನಾಗಿರಬೇಕಿತ್ತು. ಎಂಗೇಜ್ ಆಗಿತ್ತು, ಇರಿಟೇಟ್, ಕನ್‌ಪ್ಯೂಸ್, ಕೆಲವಡೆ ಬೋರ್ ಎನಿಸಿತು. ಒಟ್ಟಾರೆ ಮಿಶ್ರ ಅನುಭವ” ಎಂದು ಬರೆದುಕೊಂಡಿದ್ದಾರೆ.

ಒಮ್ಮೆ ನೋಡಬಹುದಾದ ಚಿತ್ರ

ಮಾರ್ಟಿನ್ ಫಸ್ಟ್ ಹಾಫ್ ಗುಡ್, ಸೆಕೆಂಡ್ ಹಾಫ್ ಆವರೇಜ್. ಕೈಮ್ಯಾಕ್ಸ್ ಫೈಟ್ ಹಾಲಿವುಡ್ ರೇಜ್‌ನಲ್ಲಿದೆ. ಧ್ರುವ ಅಭಿನಯದ ಸೂಪರ್. ಇನ್ನುಳಿದ ಪಾತ್ರಗಳು ಲೆಕ್ಕಕ್ಕಿಲ್ಲ. ಮೇಕಿಂಗ್ ಚೆನ್ನಾಗಿದೆ, ಸಾಂಗ್ಸ್ ಓಕೆ, ಬಿಜಿಎಂ ಚೆನ್ನಾಗಿದೆ. ಭಾವನಾತ್ಮಕ ಸನ್ನಿವೇಶಗಳು ಇನ್ನು ಚೆನ್ನಾಗಿ ಇರಬೇಕಿತ್ತು. ಫೈಟ್ಸ್ ಚೆನ್ನಾಗಿದೆ. ಬರವಣಿಗೆ ಇನ್ನು ಚೆನ್ನಾಗಿ ಇರಬೇಕಿತ್ತು, ಒಮ್ಮೆ ಥಿಯೇಟರ್‌ನಲ್ಲಿ ನೋಡಬಹುದಾದ ಸಿನಿಮಾ ಎನ್ನುವುದು ಮತ್ತೊಬ್ಬರ ರಿವ್ಯೂ.

Leave a Reply

Your email address will not be published. Required fields are marked *