ಚಿತ್ರದುರ್ಗ: ಅ.14: ಜಿಲ್ಲಾ ಆಯುಷ್ ಅಧಿಕಾರಿಗಳು ಹಾಗು ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಂಡಳಿ ಕೆ.ಪಿ.ಎಂ.ಇ.ಎ ಸದಸ್ಯರೂ ಆದ ಡಾ.ಚಂದ್ರಕಾಂತ್ ನಾಗಸಮುದ್ರ ಇಂದು ಹೊಸದುರ್ಗ ತಾಲ್ಲೂಕಿನ ಆಯುರ್ವೇದ ಕ್ಲಿನಿಕ್ ಗಳಿಗೆ ಭೇಟಿ ನೀಡಿ ಪರೀಶೀಲಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ಆಸ್ಪತ್ರೆಗಳು ಆರೋಗ್ಯ ನೀಡುವ ತಾಣಗಳಾದ ಕಾರಣ ಸ್ವಚ್ಛತೆಗೆ ಆದ್ಯತೆಬೇಕು. ಆಸ್ಪತ್ರೆಯ ತ್ಯಾಜ್ಯವು ಸೋಂಕುಹರಡುವಲ್ಲಿ ಸಹಕಾರಿಯಾಗ ಬಹುದು ಆದಕಾರಣ ನಿಗದಿತ ಸಂಸ್ಥೆಗಳಿಗೇ ತ್ಯಾಜ್ಯವಿಲೇವಾರಿಮಾಡಬೇಕು. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು,ವಿಶ್ರಾಂತಿ ಸ್ಥಳ ಇತ್ಯಾದಿ ಸ್ಥಳಾವಕಾಶವಿರಲಿ, ಲಭ್ಯ ಸೇವೆಗಳಿಗೆ ದರಪಟ್ಟಿ ಪ್ರದರ್ಶಿಸುವುದು ಕಡ್ಡಾಯ ಹಾಗು ಕ್ಲಿನಿಕ್ ಗಳಿಗೆ ಪರಿಸರಮಂಡಳಿಯ ಅನುಮೋದನೆ ಪಡೆದಿರಬೇಕು. ಎಂದು ಸೂಚಿಸಿದರು.
ಕೆ.ಪಿ.ಎಂ.ಇ.ಎ ಕಾಯ್ದೆಯ ಅನುಸಾರ ಈ ಮೇಲ್ಕಂಡ ಎಲ್ಲಾ ನಿಯಮಗಳನ್ನು ಈಗಾಗಲೇ ಚಾಲ್ತಿಯಲ್ಲಿರುವ ಹಾಗು ಹೊಸದಾಗಿ ಆರಂಭಿಸುವ ಎಲ್ಲಾ ಆಯುಷ್ ಕ್ಲಿನಿಕ್ ಗಳು ಪಾಲಿಸಬೇಕಾಗುತ್ತದೆ. ವೈದ್ಯಕೀಯ ಸೇವೆ ನೀಡುವ ಎಲ್ಲ ಕ್ಲಿನಿಕ್,ಅಸ್ಪತ್ರೆ ಇತ್ಯಾದಿ ಸಂಸ್ಥೆಗಳು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುವ ನಿಯಂತ್ರಣಾ ಪ್ರಾಧಿಕಾರವಾದ ಕೆ.ಪಿ.ಎಂ.ಇ.ಎ ಮಂಡಳಿಯಲ್ಲಿ ನೋಂದಾಯಿಸುವುದು ಹಾಗು ಕಾಲಕಾಲಕ್ಕೆ ನವೀಕರಿಸುವುದು ಕಡ್ಡಾಯವಾಗಿರುತ್ತದೆ ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.