ದೇವರಾಜ್ ಅರಸ್ ವಿದ್ಯಾಸಂಸ್ಥೆಯಿಂದ ಉಪನ್ಯಾಸಕರ ನೇಮಕಾತಿ: ಅರ್ಜಿ ಆಹ್ವಾನ.

  • ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ.
  • ಪಿಜಿ ಜತೆಗೆ ಬಿ.ಇಡಿ ಪಾಸ್ ಮಾಡಿರಬೇಕು.
  • ಅರ್ಜಿಗೆ 21 ದಿನ ಅವಕಾಶ.

ಚಿತ್ರದುರ್ಗದ ದೇವರಾಜ್ ಅರಸ್ ವಿದ್ಯಾಸಂಸ್ಥೆ ಅಡಿ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಅಗತ್ಯ ಉಪನ್ಯಾಸಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾನ್ಯ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಬೆಂಗಳೂರು, ಇವರ ಅನುಮತಿ ಅನ್ವಯ ಸಂಸ್ಥೆಯ ಈ ಕೆಳಕಂಡ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿನ ಉಪನ್ಯಾಸಕರ ಹುದ್ದೆಗಳನ್ನು ತುಂಬಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕಾಲೇಜಿನ ಹೆಸರುಹುದ್ದೆ ಹೆಸರುಹುದ್ದೆ ವಿಷಯಹುದ್ದೆಗಳ ಸಂಖ್ಯೆ
ಎಸ್‌.ಎಲ್‌.ಪದವಿ ಪೂರ್ವ ಕಾಲೇಜು, ಎಸ್‌.ನಿಜಲಿಂಗಪ್ಪ ಬಡಾವಣೆ, ದಾವಣಗೆರೆಉಪನ್ಯಾಸಕರುಇತಿಹಾಸ1 (ಎಸ್‌ಸಿ)
ಶ್ರೀ ಡಿ.ಮಂಜುನಾಥ ಪದವಿ ಪೂರ್ವ ಕಾಲೇಜು, ದೇವರಾಜ್ ಅರಸ್ ಬಡಾವಣೆ, ಸಿ ಬ್ಲಾಕ್‌ ದಾವಣಗೆರೆ.ಉಪನ್ಯಾಸಕರುವಾಣಿಜ್ಯಶಾಸ್ತ್ರ1 (ಸಾಮಾನ್ಯ ಕೆಟಗರಿ)

ವಿದ್ಯಾರ್ಹತೆ
ಇತಿಹಾಸ ವಿಷಯ ಉಪನ್ಯಾಸಕರ ಹುದ್ದೆಗೆ ಎಂಎ ಇತಿಹಾಸ ಶಿಕ್ಷಣದ ಜತೆಗೆ ಶೇಕಡ.55 ಅಂಕಗಳೊಂದಿಗೆ ಬಿ.ಇಡಿ ಶಿಕ್ಷಣ ಪಡೆದಿರಬೇಕು.
ವಾಣಿಜ್ಯ ವಿಷಯ ಉಪನ್ಯಾಸಕರ ಹುದ್ದೆಗೆ ಎಂ.ಕಾಂ ಜತೆಗೆ ಬಿ.ಇಡಿ ಶಿಕ್ಷಣವನ್ನು ಶೇಕಡ.55 ಅಂಕಗಳೊಂದಿಗೆ ಪಾಸಾಗಿರಬೇಕು.
ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಕರ್ನಾಟಕ ಸರ್ಕಾರದ ನಿಯಮಾನುಸಾರ ವೇತನ ನೀಡಲಾಗುತ್ತದೆ.

ಉಪನ್ಯಾಸಕರ ಹುದ್ದೆಗೆ ವೇತನ ಶ್ರೇಣಿ: ರೂ.69,250- 1,34,200.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಪೂರ್ಣ ಮಾಹಿತಿ ಹಾಗೂ ದೃಢೀಕೃತ ದಾಖಲೆಗಳೊಂದಿಗೆ ಅರ್ಜಿಯನ್ನು ದಿನಾಂಕ 17-10-2024 ರಿಂದ 21 ದಿನಗಳ ಒಳಗಾಗಿ ಈ ಕೆಳಕಾಣಿಸಿದ ವಿಳಾಸಕ್ಕೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ
ಅರ್ಜಿಯ ಒಂದು ಪ್ರತಿಯನ್ನು – ಮಾನ್ಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಜಿಲ್ಲಾಡಳಿತ ಭವನ, ದಾವಣಗೆರೆ, ಇವರಿಗೆ ಸಲ್ಲಿಸತಕ್ಕದ್ದು.
ಅರ್ಜಿಯ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು.

ಅರ್ಜಿಯೊಂದಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.1000 ಹಾಗೂ ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಗಳು ರೂ.500 ಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಡಿ.ಡಿ. ಅನ್ನು ‘ಕಾರ್ಯದರ್ಶಿ, ಶ್ರೀ ದೇವರಾಜ್ ಅರಸ್ ವಿದ್ಯಾಸಂಸ್ಥೆ (ರಿ), ಚಿತ್ರದುರ್ಗ’ ಇವರ ಹೆಸರಿನಲ್ಲಿ ತೆಗೆದು ಅರ್ಜಿಯನ್ನು ‘ಕಾರ್ಯದರ್ಶಿ, ಶ್ರೀ ದೇವರಾಜ್ ಅರಸ್ ವಿದ್ಯಾಸಂಸ್ಥೆ (ರಿ), ಒನಕೆ ಓಬವ್ವ ಕ್ರೀಡಾಂಗಣ ಹಿಂಭಾಗ (ಅಮೃತ ಆಯುರ್ವೆದಿಕ್ ಮೆಡಿಕಲ್ ಕಾಲೇಜ್ ಆವರಣ) ಚಿತ್ರದುರ್ಗ-577501’ ವಿಳಾಸಕ್ಕೆ ಸಲ್ಲಿಸತಕ್ಕದ್ದು.

ಮೆರಿಟ್ ಆಧಾರದ ಮೇಲೆ 1 ಹುದ್ದೆಗೆ 5 ಅಭ್ಯರ್ಥಿಗಳಿಗೆ ಮಾತ್ರ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ಸೂಚನೆಗಳು
ಅರ್ಜಿಗಳನ್ನು ನೋಂದಣಿ ಅಂಚೆಯ ಮೂಲಕವೇ ಸಂಸ್ಥೆಗೆ ಮತ್ತು ಇಲಾಖೆಗೆ ಕಳುಹಿಸುವುದು, ಖುದ್ದಾಗಿ ನೀಡುವ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿಗೆ ಫೋಟೋ ಲಗತ್ತಿಸಿ, ಅರ್ಜಿಯೊಂದಿಗೆ ಸ್ನಾತಕೋತ್ತರ ಪದವಿಯ ದೃಢೀಕೃತ ಜೆರಾಕ್ಸ್‌ ಅಂಕಪಟ್ಟಿ, ಬಿ.ಇಡಿ ಪದವಿಯ ದೃಢೀಕೃತ ಜೆರಾಕ್ಸ್‌ ಅಂಕಪಟ್ಟಿ, ಎಸ್.ಎಸ್.ಎಲ್.ಸಿ ದೃಢೀಕೃತ ಜೆರಾಕ್ಸ್‌ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರದ ದೃಢೀಕೃತ ಜೆರಾಕ್ಸ್‌ನ ಇತ್ಯಾದಿ ದಾಖಲೆಗಳನ್ನು ಲಗತ್ತಿಸುವುದು.

Source : https://vijaykarnataka.com/jobs/govt-jobs/devraj-urs-education-institutes-lecturer-recruitment-2024-apply-now/articleshow/114306053.cms

Leave a Reply

Your email address will not be published. Required fields are marked *