Youtube New Features: ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ YouTube ನಲ್ಲಿ ಹೊಸ ವೈಶಿಷ್ಟ್ಯಗಳು ಲಭ್ಯವಾಗಿವೆ. ಈ ವೈಶಿಷ್ಟ್ಯಗಳಿಂದ ನಿಮಗೆ ಅನೇಕ ಅನುಕೂಲಗಳಾಗಲಿವೆ. ಅದು ಯಾವರೀತಿ ಎಂಬ ಮಾಹಿತಿ ಇಲ್ಲಿದೆ..
Youtube New Features: ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಯೂಟ್ಯೂಬ್ ಬಳಕೆದಾರರನ್ನು ಆಕರ್ಷಿಸಲು ಹೊಸ ವೈಶಿಷ್ಟ್ಯಗಳನ್ನು ತಂದಿದೆ. ಇದು ಸ್ಲೀಪ್ ಟೈಮರ್, ರಿಸೈಜಬುಲ್ ಮಿನಿ ಪ್ಲೇಯರ್, ನೆಚ್ಚಿನ ಪ್ಲೇ ಪಟ್ಟಿಯಂತಹ ಅನೇಕ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಕಂಪನಿಯು ತನ್ನ ಬ್ಲಾಗ್ ಪೋಸ್ಟ್ ಮೂಲಕ ಇದನ್ನು ಬಹಿರಂಗಪಡಿಸಿದೆ. ಈ ಹೊಸ ವೈಶಿಷ್ಟ್ಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಸಹ ಇದು ವಿವರಿಸುತ್ತದೆ.
ಸ್ಲೀಪ್ ಟೈಮರ್:
- ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ನೋಡುತ್ತಾ ಅನೇಕರು ನಿದ್ರಿಸುತ್ತಾರೆ.
- ಈ ಸಮಯದಲ್ಲಿ ವಿಡಿಯೋಗಳು ಪ್ಲೇ ಆಗುತ್ತಲೇ ಇರುತ್ತವೆ.
- ಹೀಗಾಗಿ ಈ ಸಮಸ್ಯೆಯನ್ನು ಪರಿಶೀಲಿಸುತ್ತಾ YouTube ಹೊಸ ಸ್ಲೀಪ್ ಟೈಮರ್ ವೈಶಿಷ್ಟ್ಯವನ್ನು ತಂದಿದೆ.
- ಈ ಹೊಸ ವೈಶಿಷ್ಟ್ಯದ ಸಹಾಯದಿಂದ ನೀವು ಟೈಮರ್ ಅನ್ನು ಸೆಟ್ ಮಾಡಿ YouTube ನಲ್ಲಿ ವಿಡಿಯೋಗಳನ್ನು ಪ್ಲೇ ಮಾಡಬಹುದು.
- ನಿಗದಿತ ಸಮಯ ಮುಗಿದ ನಂತರ ನಾವು ವಿಡಿಯೋವನ್ನು ಆಫ್ ಮಾಡಲು ಮರೆತರೂ ಅಥವಾ ನಿದ್ರಿಸಿದರೂ ಆಗ ವಿಡಿಯೋ ಆಟೋಮೆಟಿಕ್ ಆಗಿ ಸ್ಟಾಪ್ ಆಗುತ್ತದೆ. ಇದರಿಂದ ನೀವು ಅನೇಕ ಲಾಭ ಪಡೆದಂತಾಗುತ್ತದೆ.
ಸ್ಲೀಪ್ ಟೈಮರ್ ವೈಶಿಷ್ಟ್ಯವನ್ನು ಹೇಗೆ ಸಕ್ರಿಯಗೊಳಿಸುವುದು:
- YouTube ನಲ್ಲಿ ವಿಡಿಯೋವನ್ನು ಪ್ಲೇ ಮಾಡಿದ ನಂತರ ಸ್ಕ್ರೀನ್ ಮೇಲಿನ ಸೆಟ್ಟಿಂಗ್ಗಳ ಐಕಾನ್ ಮೇಲೆ ಟ್ಯಾಪ್ ಮಾಡಿ. ಅಲ್ಲಿ ‘ಸ್ಲೀಪ್ ಟೈಮರ್’ ಆಯ್ಕೆ ಕಾಣಿಸಿಕೊಳ್ಳುತ್ತದೆ.
- ನೀವು ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ ಸಮಯವನ್ನು ಸೆಟ್ ಮಾಡಿಕೊಳ್ಳಿ.
- ಈ ಹಿಂದೆ ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಸೀಮಿತವಾಗಿದ್ದ ಈ ವೈಶಿಷ್ಟ್ಯವನ್ನು ಈಗ YouTube ಎಲ್ಲರಿಗೂ ಲಭ್ಯವಾಗುವಂತೆ ಮಾಡಿದೆ.
ಪ್ಲೇ ಲಿಸ್ಟ್ಗಾಗಿ ಥಂಬ್ನೇಲ್ಗಳು:
- YouTube ಈಗಾಗಲೇ ಪ್ಲೇ ಲಿಸ್ಟ್ ಅನ್ನು ರಚಿಸುವ ಸೌಲಭ್ಯವನ್ನು ಹೊಂದಿದೆ.
- ಪ್ರಸ್ತುತ QR ಕೋಡ್ ಸಹಾಯದಿಂದ ನಿಮ್ಮ ಆತ್ಮೀಯರಿಗೆ ಕಳುಹಿಸುವ ಆಪ್ಷನ್ ಅನ್ನು ತರಲಾಗಿದೆ.
- ಅಲ್ಲದೆ, ಲಿಸ್ಟ್ನ ಥಂಬ್ನೇಲ್ಗಳನ್ನು AI ಸಹಾಯದಿಂದ ರಚಿಸಬಹುದು.
- ಬೇಕಿದ್ದರೆ ನಿಮ್ಮ ಫೋಟೋಗಳನ್ನೂ ಸಹ ಇದರಲ್ಲಿ ಬಳಸಬಹುದು ಎಂದು ಯೂಟ್ಯೂಬ್ ಹೇಳಿದೆ.
ಬಯಸಿದಂತೆ ಮಿನಿ-ಪ್ಲೇಯರ್:
- ಮಲ್ಟಿಟಾಸ್ಕಿಂಗ್ನ ಭಾಗವಾಗಿ ಮಿನಿ ಪ್ಲೇಯರ್ನಲ್ಲಿ YouTube ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ.
- ಸಾಮಾನ್ಯವಾಗಿ YouTube ನಲ್ಲಿ ಮಿನಿ ಪ್ಲೇಯರ್ ಕೆಳಗಿನ ಬಲ ಮೂಲೆಯಲ್ಲಿ ಕಾಣಿಸಿಕೊಳ್ಳುತ್ತದೆ.
- ಆದರೆ ಈಗ ನೀವು ನಿಮ್ಮ ಮಿನಿ ಪ್ಲೇಯರ್ ಅನ್ನು ನೀವು ಎಲ್ಲಿ ಬೇಕಾದರೂ ಬದಲಾಯಿಸಬಹುದು.
- ಇದಲ್ಲದೆ ಬಯಸಿದಲ್ಲಿ, ಅದರ ಗಾತ್ರವನ್ನು ಸಹ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.
- ಬ್ಯಾಡ್ಜ್ ಸೌಲಭ್ಯ:
- ಇವುಗಳ ಜೊತೆಗೆ ಯೂಟ್ಯೂಬ್ ಮತ್ತು ಯೂಟ್ಯೂಬ್ ಮ್ಯೂಸಿಕ್ ಆಪ್ಗಳಿಗೆ ಬ್ಯಾಡ್ಜ್ ಸೌಲಭ್ಯವನ್ನು ತಂದಿದೆ.
- ಈ ಕೆಲವು ವೈಶಿಷ್ಟ್ಯಗಳು ಈಗಾಗಲೇ ಲಭ್ಯವಿದೆ.
- ಇನ್ನೂ ಕೆಲವು ವೈಶಿಷ್ಟ್ಯಗಳು ಶೀಘ್ರದಲ್ಲೇ ಬರಲಿವೆ ಎಂದು YouTube ಬಹಿರಂಗಪಡಿಸಿದೆ.