ದೀಪಾವಳಿಯ ಸಾಲು ಸಾಲು ರಜೆಯ ಮಜಾ ಕೆಡಿಸಿದ ಸರ್ಕಾರ!ಸರ್ಕಾರೀ ನೌಕರರ ರಜೆಗೆ ಕತ್ತರಿ.

  • ಸರ್ಕಾರವು ದೀಪಾವಳಿ ರಜಾದಿನಗಳನ್ನು ಘೋಷಿಸಿದೆ.
  • ಅಕ್ಟೋಬರ್ 31ರಿಂದ ನವೆಂಬರ 4 ರವರೆಗೆ ಸಾಲು ಸಾಲು ರಜೆ
  • ಅಯೋಧ್ಯೆಯಲ್ಲಿ ಬೆಳಕಿನ ಹಬ್ಬವನ್ನು ಆಯೋಜಿಸುತ್ತದೆ.

ಉತ್ತರ ಪ್ರದೇಶ: ಸರ್ಕಾರವು ದೀಪಾವಳಿ ರಜಾದಿನಗಳನ್ನು ಘೋಷಿಸಿದೆ. ಈ ಬಾರಿ ಅಕ್ಟೋಬರ್ 31ರಿಂದ ದೀಪಾವಳಿ ಆರಂಭವಾಗಲಿದೆ.ಅಂದರೆ ಅಕೊಬರ್ 31ರಿಂದ  ನವೆಂಬರ 4 ರವರೆಗೆ ಸಾಲು ಸಾಲು ರಜೆ. ಈ ಸಂಬಂಧ ಸರ್ಕಾರಿ ಇಲಾಖೆಗಳಿಗೆ ಆದೇಶ ಕೂಡಾ ಹೊರಡಿಸಲಾಗಿತ್ತು.

ಯುಪಿಯ ಯೋಗಿ ಸರ್ಕಾರವು ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಬೆಳಕಿನ ಹಬ್ಬವನ್ನು ಆಯೋಜಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ರಜೆಯೇ ಬಗ್ಗೆ ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ, ದೀಪಾವಳಿ, ಗೋವರ್ಧನ ಪೂಜೆ ಮತ್ತು ಭಾಯಿ ದೂಜ್‌ನಂತಹ ಹಬ್ಬಗಳನ್ನು ಯಾವಾಗ ಆಚರಿಸಲಾಗುತ್ತದೆ ಎನ್ನುವುದನ್ನು  ಸ್ಪಷ್ಟವಾಗಿ ಹೇಳಲಾಗಿದೆ. 

ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ಅಥವಾ ನವೆಂಬರ್ 1 ರಂದು ಆಚರಿಸಬೇಕೇ ಎನ್ನುವ ಗೊಂದಲ ಈ ಬಾರಿ ಜನರಲ್ಲಿ ಮೂಡಿದೆ. ಈ ಬಾರಿಯ ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ರಂದೇ ಆಚರಿಸಲಾಗುವುದು ಎಂದು ಸರ್ಕಾರ ಘೋಷಿಸುವ ಮೂಲಕ ಈ ಗೊಂದಲಕ್ಕೆ ತೆರೆ ಎಳೆದಿದೆ. ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಅವರು ರಾಜ್ಯದ ಎಲ್ಲಾ ಡಿಎಂ ಮತ್ತು ಖಜಾನೆಗಳಿಗೆ ಹೊರಡಿಸಿದ ಆದೇಶದ ಪ್ರಕಾರ, ದೀಪಾವಳಿಯ ಮೊದಲು ಸರ್ಕಾರಿ ನೌಕರರ ವೇತನ ಬಿಡುಗಡೆ ಮಾಡಲು ಆದೇಶ ನೀಡಲಾಗಿದೆ.

ಇನ್ನು ದೀಪಾವಳಿಯ ರಜೆ ಯಾವೆಲ್ಲಾ ದಿನ ಇರಲಿದೆ ಎನ್ನುವುದನ್ನು ಕೂಡಾ ಹೇಳಲಾಗಿದೆ. ಹಬ್ಬದ ಸಲುವಾಗಿ ಅಕ್ಟೋಬರ್ 31 ರಂದು ಎಲ್ಲಾ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುವುದು ಎಂದು ಸರ್ಕಾರ ಹೊರಡಿಸಿದ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಇದಾದ ನಂತರ ನವೆಂಬರ್ 2ರಂದು ಗೋವರ್ಧನ ಪೂಜೆಯ ಹಬ್ಬವನ್ನು ಆಚರಿಸಲಾಗುತ್ತದೆ ಮತ್ತು ಈ ದಿನವೂ ರಜೆ ಇರುತ್ತದೆ. ಭಾಯಿ ದೂಜ್ ಹಬ್ಬವನ್ನು ನವೆಂಬರ್ 3 ರಂದು ಆಚರಿಸಲಾಗುತ್ತದೆ.ನವೆಂಬರ್ 1ರ ರಜೆಯನ್ನು ಇನ್ನೂ ಸರ್ಕಾರ ಘೋಷಿಸಿಲ್ಲ. ಅಂದರೆ ಸತತ ನಾಲ್ಕು ದಿನ ರಜೆ ಅಂದುಕೊಂಡಿದ್ದ ಸರ್ಕಾರಿ ನೌಕರರಿಗೆ ಇದು ಬೇಸರ ತರಿಸಿದೆ. 

ಪಂಚಾಂಗದ ಪ್ರಕಾರ ಹಬ್ಬ ಎರಡು ದಿನಗಳ ಕಾಲ ಬೀಳುತ್ತಿತ್ತು. ಈ ಬಾರಿಯ ಅಮವಾಸ್ಯೆಯ ತಿಥಿ ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಎರಡು ದಿನಗಳ ಕಾಲ ಬರುತ್ತದೆ. ಇದರಿಂದಾಗಿ ದೀಪಾವಳಿಯನ್ನು ಯಾವಾಗ ಆಚರಿಸಬೇಕು ಎನ್ನುವ ಗೊಂದಲ ಜನರನ್ನು ಕಾಡುತ್ತಿತ್ತು. ನಿಯಮಗಳ ಪ್ರಕಾರ ದೀಪಾವಳಿಯನ್ನು ಅಮಾವಾಸ್ಯೆಯ ರಾತ್ರಿ ಆಚರಿಸಲಾಗುತ್ತದೆ. ಈ ಬಾರಿಯ ಅಮಾವಾಸ್ಯೆಯು ಅಕ್ಟೋಬರ್ 31 ರಂದು ಮಧ್ಯಾಹ್ನ 2:40 ರಿಂದ ಪ್ರಾರಂಭವಾಗಿದ್ದು, ನವೆಂಬರ್ 1 ರ ಮಧ್ಯಾಹ್ನದವರೆಗೆ ಇರುತ್ತದೆ. ಆದರೆ, ನವೆಂಬರ್ 1ರ ರಾತ್ರಿ ಅಮಾವಾಸ್ಯೆ ಇರುವುದಿಲ್ಲ. ದೀಪಾವಳಿ ಹಬ್ಬವನ್ನು ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ.

Source : https://zeenews.india.com/kannada/business/uttarpradesh-govt-announces-diwali-holiday-254877

Leave a Reply

Your email address will not be published. Required fields are marked *