ಮಕ್ಕಳು ಸರ್ವತೋಮುಖ ಅಭಿವೃದ್ದಿಯಾಗಬೇಕಿದೆ: ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜವರೇಗೌಡ

ಮೈಸೂರು : ದಿನಾಂಕ: 25.10.2024 ರಂದು ಸರ್ಕಾರಿ ಫ್ರೌಢಶಾಲೆ, ಹಂಚ್ಯಾ ಮೈಸೂರು ತಾಲೂಕು ಇಲ್ಲಿ ಶೌಚಾಲಯ ಕೊಠಡಿಗಳು ಹಾಗೂ ಕೈ ತೊಳೆಯುವ ಸೌಲಭ್ಯಗಳ ಉಧ್ಘಾಟನಾ ಸಮಾರಂಭ & ಶೈಕ್ಷಣಿಕ ಮತ್ತು ಆರೋಗ್ಯ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಉಧ್ಘಾಟನೆ ಮಾಡಿ ಮಾತನಾಡುತ್ತ ಇಂದಿನ ಮಕ್ಕಳು ಇಂದಿನ ಪ್ರಜೆಗಳು. ಅವರು ಸರ್ವತೋಮುಖ ಅಭಿವೃದ್ದಿಯಾದಲ್ಲಿ ಮಾತ್ರ ದೇಶ ಸುಭದ್ರವಾಗಿ ನಿಲ್ಲುತ್ತದೆ. ಇಂದು RLHP ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತಿದ್ದು, ವಿಶೇಷವಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಕ್ಲೂಬರ್ ಲೂಬ್ರಿಕೇಶನ್ ಪ್ರೈವೇಟ್ ಲಿಮಿಟೆಡ್ ಮೈಸೂರು ಇವರ ಸಹಯೋಗದೊಂದಿಗೆ ನಿಂಗರಾಜನಕಟ್ಟೆ, ಅಂಬೇಡ್ಕರ್‌ನಗರ, ಸಾತಗಳ್ಳಿ ಮತ್ತು ಹಂಚ್ಯಾ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳ ಸರ್ವತೋಮುಖ ಅಭಿವೃದ್ದಿಗಾಗಿ, ಕೊಠಡಿಗಳ ದುರಸ್ತಿ, ಮಕ್ಕಳ ಸ್ನೇಹಿ ಪೇಂಟಿಂಗ್ , ಡಿಜಿಟಲ್ ಕಂಪ್ಯೂಟರ್ ಶಿಕ್ಷಣ, ಶುದ್ದ ಕುಡಿಯುವ ನೀರಿನ ಮಿಷನ್, ನಲಿಕಲಿ ಮಕ್ಕಳಿಗೆ ಟೇಬಲ್ ಮತ್ತು ಕುರ್ಚಿಗಳ ವ್ಯವಸ್ಥೆ, ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಮತ್ತು ವಿಜ್ಞಾನ ಪರಿಕರಿಗಳನ್ನು ನೀಡಲಾಗಿದೆ. ಇವುಗಳೊಂದಿಗೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ನೈರ್ಮಲ್ಯ, ಓದುವ ಹವ್ಯಾಸ, ಗ್ರಂಥಾಲಯಗಳ ಬಳಕೆ, ಚಂದದ ಪ್ರೆರಣಾ ಕಾರ್ಯಕ್ರಮದ ಅಡಿಯಲ್ಲಿ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನವೋದಯ ಮತ್ತು ಮೊರಾರ್ಜಿದೇಸಾಯಿ ಶಾಲೆಗಳ ಪರೀಕ್ಷೆಗಾಗಿ ತರಬೇತಿ, ಆರೋಗ್ಯ ಶಿಬಿರ ಮತ್ತು ಆರೋಗ್ಯ ಅರಿವಿನ ಕಾರ್ಯಕ್ರಮ, ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ, 10ನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಬಹುಮಾನದ ಮೂಲಕ ಪ್ರೋತ್ಸಾಹ, ಪ್ರಮುಖ ದಿನಾಚರಣೆಗಳು ಹಾಗೂ ಗ್ರಂಥಾಲಯಗಳನ್ನು ನೀಡುವ ಮೂಲಕ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನಿಯವಾಗಿದೆ.

ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಹಾಗೂ 710 ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಶೈಕ್ಷಣಿಕ ಮತ್ತು ಆರೋಗ್ಯ ಸಾಮಗ್ರಿಗಳನ್ನು ನೀಡಿರುವುದು ಸಂತೋಷಕರವಾಗಿದೆ ಇದರಿಂದ ಮಕ್ಕಳು ಉತ್ತಮವಾಗಿ ಕಲಿಯಿರಿ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ನಾಗರಾಜಯ್ಯ ಪ್ರಾಂಶುಪಾಲರು ಹಾಗೂ ಉಪ ನಿರ್ದೇಶಕರು (ಅಭಿವೃದ್ಧಿ) ಶಾಲಾ ಶಿಕ್ಷಣ ಇಲಾಖೆ, ಶ್ರೀ ಪ್ರಕಾಶ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೈಸೂರು ತಾಲೂಕು, ಶ್ರೀ ಜಿತಿನ್ ಸಲ್ಡಾನ ಕಾರ್ಯಕ್ರಮ ಅಧಿಕಾರಿಗಳು ಕ್ಲೂಬರ್ ಲೂಬ್ರಿಕೇಶನ್ ಪ್ರೈವೇಟ್ ಲಿಮಿಟೆಡ್ ಮೈಸೂರು, ಪ್ರೋ. ಜೋಸ್ ವಿ.ಕೆ. ಕಾರ್ಯದರ್ಶಿ, ಆರ್.ಎಲ್,ಹೆಚ್.ಪಿ., ಶ್ರೀಮತಿ ಸರಸ್ವತಿ ನಿರ್ದೇಶಕರು ಆರ್.ಎಲ್,ಹೆಚ್.ಪಿ., ಶಾಲೆಯ ಮುಖ್ಯ ಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *