ಚಿತ್ರದುರ್ಗ/ ಹಿರೇಗುಂಟನೂರು: ಅ.28 : ಈಗ ಚಳಿಗಾಲ ಪ್ರಾರಂಭವಾಗುತ್ತಿದ್ದು ಈ ವೇಳೆಯಲ್ಲಿ ಅನೇಕ ಜನರು ಪಾಶ್ವವಾಯುವಿಗೆ ತುತ್ತಾಗುತ್ತಾರೆ ಅದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷದ ಅಕ್ಟೋಬರ್ 29ರಂದು ವಿಶ್ವ ಪಾಶ್ವವಾಯು ದಿನಾಚರಣೆ ಹಮ್ಕಿಕೊಳ್ಳಲಾಗುತ್ತದೆ ಪಾರ್ಶ್ವವಾಯುಯಿಂದ ಸಾವನ್ನಪ್ಪುವರ ಸಂಖ್ಯೆ ಭಾರತ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ ಮೊದಲೆಲ್ಲ 50 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಪಾರ್ಶ್ವವಾಯು ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತಿತ್ತು ಇದೀಗ ಯುವ ಜನಾಂಗದಲ್ಲಿಯೂ ಪಾರ್ಶ್ವವಾಯು ರೋಗ ಕಂಡು ಬರುತ್ತಿರುವುದು ನಿಜಕ್ಕೂ ಸದೃಢ ಭಾರತ ಕಲ್ಪನೆಗೆ ಮಾರಕವಾಗಿ ಪರಿಣಮಿಸಿದೆ ಇದಕ್ಕೆ ಇತ್ತೀಚಿನ ಅತೀ ಒತ್ತಡದ ಜೀವನ ಕಾರಣ. ಮನುಷ್ಯನನ್ನು ಹಾಸಿಗೆ ಹಿಡಿಸುವ ಈ ಮಾರಕ ಪಾಶ್ವವಾಯು ರೋಗ ಬರದಂತೆ ತಡೆಯಲು ಪ್ರತಿದಿನದ ಯೋಗಾಭ್ಯಾಸ ಸೂಕ್ತ ಪರಿಹಾರವಾಗಿದೆ ಎಂದು ಯೋಗಗುರು ರವಿ ಅಂಬೇಕರ್ ಅಭಿಪ್ರಾಯ ಪಟ್ಟಿದ್ದಾರೆ.
ವಿಶ್ವ ಪಾಶ್ವವಾಯು ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ೮ವರ ಸಹಯೋಗದೊಂದಿಗೆ ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸೋಮವಾರ ಹಿರೇಗುಂಟನೂರು ಹಾಗೂ ಹಳಿಯೂರು ಗ್ರಾಮಗಳಲ್ಲಿ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಪಾಶ್ವವಾಯು ತಡೆಯಲು ಪ್ರತಿದಿನ ಮಾಡಬೇಕಾಗ ಯೋಗಭ್ಯಾಸ ಹಾಗೂ ಪ್ರಾಣಾಯಾಮಗಳ ತರಬೇತಿ ಕಾರ್ಯಕ್ರಮದಲ್ಲಿ ಯೋಗ ತರಬೇತಿ ನೀಡಿ ಅವರು ಮಾತನಾಡಿದರು.
ಪ್ರತೀ ವರ್ಷ ಅಕ್ಟೋಬರ್ 29ರಂದು ವಿಶ್ವ ಪಾರ್ಶ್ವವಾಯು (ಸ್ಟ್ರೋಕ್) ದಿನಾಚರಣೆ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವ ಮೂಲ ಉದ್ದೇಶ ಜನರಲ್ಲಿ ಜಾಗೃತಿ, ಅರಿವು ಮೂಡಿಸುವುದು. ನಮ್ಮ ಪ್ರಪಂಚದಾದ್ಯಂತ, ನಾವು ಗಮನಿಸಿದ ಹಾಗೆ ಪ್ರತೀ ನಾಲ್ವರಲ್ಲಿ ಒಬ್ಬರಿಗೆ ಈ ಸಮಸ್ಯೆ ಅವರ ಜೀವಮಾನದಲ್ಲಿ ಎದುರಾಗುತ್ತಿರುವ ಬಹು ದೊಡ್ಡ ಸಮಸ್ಯೆ.
ಯೋಗ, ಧ್ಯಾನ, ವ್ಯಾಯಾಮ ಅಗತ್ಯ. ಜತೆಗೆ ಕೊಬ್ಬಿನಾಂಶ ಕಡಿಮೆ ಮಾಡಿಕೊಳ್ಳಬೇಕು. ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬೇಕು. ನಿತ್ಯ ನಿಯಮಿತವಾಗಿ ವಾಕಿಂಗ್ ಮಾಡುವುದು ಮತ್ತು ಸಮರ್ಪಕವಾಗಿ ಒತ್ತಡ ನಿರ್ವಹಿಸುವುದು ಅಗತ್ಯ. ದುಶ್ಚಟಗಳಿಂದ ದೂರ ಇರಬೇಕು. ಜತೆಗೆ ಮೀನು, ರಾಗಿ ಮುದ್ದೆ, ಚಪಾತಿ, ಹಣ್ಣು, ತರಕಾರಿ, ಪೋಷಕಾಂಶ ಭರಿತ ಆಹಾರವನ್ನು ವೈದ್ಯರ ಸಲಹೆ ಪಡೆದು ಸೇವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರದ ಶಿಕ್ಷಕಿಯರಾದ ಹಿರೇಗುಂಟನೂರು ಲಕ್ಷ್ಮಿದೇವಿ, ಪಲ್ಲವಿ, ಹಳಿಯೂರು ಶಶಿಕಲಾ, ಹಳಿಯೂರು ಶಾಲಾ ಮುಖ್ಯ ಶಿಕ್ಷಕ ಮುಸ್ತಫಾ, ಶೇಖರಪ್ಪ, ಸ್ತ್ರೀ ಸಂಘದ ಸದಸ್ಯರಾದ ಮಮತ ನಿರ್ಮಲ ಭೂಮಿಕ ಅಂಗನವಾಡಿ ಸಹಾಯಕಿ ಮಂಜಮ್ಮ ಹಾಗೂ ಗ್ರಾಮಸ್ಥರು ಯೋಗ ತರಬೇತಿ ಪಡೆದರು.