ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ ನೀಡಿವೆ.ದೀಪಾವಳಿಗೆ ಮುಂಚಿತವಾಗಿ ಹಲವಾರು ರಾಜ್ಯ ಸರ್ಕಾರಗಳು ತುಟ್ಟಿಭತ್ಯೆಯಲ್ಲಿ ಹೆಚ್ಚಳವನ್ನು ಘೋಷಿಸಿವೆ.
ಬೆಂಗಳೂರು : ಈ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ತುಂಬಾ ಖುಷಿಯಾಗಿದ್ದಾರೆ. ದೀಪಾವಳಿ ಬೋನಸ್, ತುಟ್ಟಿಭತ್ಯೆ ಹೆಚ್ಚಳದಿಂದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹೆಚ್ಚುವರಿ ಹಣ ಜಮೆಯಾಗುತ್ತದೆ.ಈಗಾಗಲೇ ಬೋನಸ್ ಹಣ ಹಲವರ ಖಾತೆ ಸೇರಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ ನೀಡಿವೆ.ದೀಪಾವಳಿಗೆ ಮುಂಚಿತವಾಗಿ ಹಲವಾರು ರಾಜ್ಯ ಸರ್ಕಾರಗಳು ತುಟ್ಟಿಭತ್ಯೆಯಲ್ಲಿ ಹೆಚ್ಚಳವನ್ನು ಘೋಷಿಸಿವೆ. ತುಟ್ಟಿಭತ್ಯೆ ಹೆಚ್ಚಳದೊಂದಿಗೆ ಖುಷಿಯಾಗಿದ್ದ ನೌಕರರಿಗೆ ಇದೀಗ ದೀಪಾವಳಿ ಬೋನಸ್ ಕೂಡಾ ಘೋಷಣೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರಿಗೆ ಈ ದೀಪಾವಳಿ ಡಬಲ್ ಧಮಾಕ.
ತಮಿಳುನಾಡು ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ 1.7.2024 ರಿಂದ ಜಾರಿಗೆ ಬರುವಂತೆ ಶೇಕಡಾ 53 ರಷ್ಟು ತುಟ್ಟಿಭತ್ಯೆ ನೀಡಲಾಗುವುದು ಎಂದು ಘೋಷಿಸಿದೆ. ಸುಮಾರು 16 ಲಕ್ಷ ಸರ್ಕಾರಿ ನೌಕರರು, ಶಿಕ್ಷಕರು, ಪಿಂಚಣಿದಾರರು ಇದರಿಂದ ಪ್ರಯೋಜನ ಪಡೆಯಲಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ದೀಪಾವಳಿ ಬೋನಸ್ ಅನ್ನು ಕೂಡಾ ಘೋಷಿಸಿದ್ದಾರೆ. ಈ ಪ್ರಕಾರ ಒಂದು ತಿಂಗಳ ಹೆಚ್ಚುವರಿ ವೇತನ ನೌಕರರ ಬ್ಯಾಂಕ್ ಖಾತೆಗೆ ಜಮೆಯಾಗಿದೆ.
ಗುಜರಾತ್ ಸರ್ಕಾರ ಕೂಡಾ ರಾಜ್ಯದ ಎಲ್ಲಾ ನೌಕರರಿಗೆ ದೀಪಾವಳಿ ಬೋನಸ್ ಘೋಷಿಸಿದೆ.ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಸರ್ಕಾರ ಸೋಮವಾರ ಹಬ್ಬದ ಬೋನಸ್ ನೀಡಲಾಗುವುದು ಎಂದು ಘೋಷಿಸಿತು.
ಅರುಣಾಚಲ ಪ್ರದೇಶ ಸರ್ಕಾರವು ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯಲ್ಲಿ 3ಶೇ. ಹೆಚ್ಚಳವನ್ನು ಘೋಷಿಸಿದೆ. ಈ ಹೆಚ್ಚಳವು ಜುಲೈ 1, 2024 ರಿಂದಲೇ ಅನ್ವಯವಾಗಲಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಹಬ್ಬದ ಬೋನಸ್ ಘೋಷಿಸಿತ್ತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವಿಧ ಇಲಾಖೆಗಳ ನೌಕರರಿಗೆ ನೌಕರರ ಒಂದು ತಿಂಗಳ ವೇತನಕ್ಕೆ ಸಮನಾದ ನಾನ್ ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ ನೀಡಲಾಗುವುದು ಎಂದು ತಿಳಿಸಿದೆ.