WPL 2025 Retention|7 ಆಟಗಾರ್ತಿಯರಿಗೆ ತಂಡದಿಂದ ಕೊಕ್​ ಕೊಟ್ಟ RCB; ಉಳಿದಿರುವವರು ಇವರೇ ನೋಡಿ.

ಬೆಂಗಳೂರು: 2025ರಲ್ಲಿ ನಡೆಯಲಿರುವ ಮಹಿಳಾ ಪ್ರೀಮಿಯರ್​ ಲೀಗ್​ಗೆ (WPL) ಸಂಬಂಧಿಸಿದ ಕೆಲಸಗಳು ಈಗಾಗಲೇ ಆರಂಭವಾಗಿದ್ದು, ಅದರಂತೆ ಫ್ರಾಂಚೈಸಿಗಳು ಇಂದು (ನವೆಂಬರ್​ 07) ರಿಟೇನ್​ ಪಟ್ಟಿಯನ್ನು (Retention List) ಬಿಡುಗಡೆ ಮಾಡಿವೆ. ಹಾಲಿ ಚಾಂಪಿಯನ್ಸ್​ ಆರ್​ಸಿಬಿ (RCB) ಕೂಡ ರಿಟೇನ್​ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಂಡದಿಂದ ಒಟ್ಟು 7 ಆಟಗಾರ್ತಿಯರಿಗೆ ಕೊಕ್​ ನೀಡಿದೆ.

ಡಬ್ಲ್ಯುಪಿಎಲ್​ನಲ್ಲಿ (WPL) ಮೆಗಾ ಹರಾಜು ಬದಲಿಗೆ ಮಿನಿ ಆಕ್ಷನ್​ ಇರಲಿದೆ. ಹೀಗಾಗಿ ಫ್ರಾಂಚೈಸಿಗಳು ಗರಿಷ್ಠ ಆಟಗಾರ್ತಿಯರನ್ನು ತಮ್ಮಲ್ಲೇ ಉಳಿಸಿಕೊಂಡು, ಕೆಲವು ಆಟಗಾರ್ತಿಯರನ್ನು ತಂಡದಿಂದ ಕೈಬಿಡಬೇಕಾಗಿದೆ. ಹೀಗಾಗಿ ಹಾಲಿ ಚಾಂಪಿಯನ್ಸ್​ ಆರ್​ಸಿಬಿ (RCB) ತಂಡವು 14 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, 7 ಆಟಗಾರ್ತಿಯರನ್ನು ತಂಡದಿಂದ ಕೈಬಿಟ್ಟಿದೆ.

https://twitter.com/RCBTweets/status/1854504016622858472

ಅದರಂತೆ ತಂಡದಿಂದ ದಿಶಾ ಕಸತ್, ಇಂದ್ರಾಣಿ ರಾಯ್,ಶುಭಾ ಸತೀಶ್, ಶ್ರದ್ಧಾ ಪೋಕರ್ಕರ್, ಸಿಮ್ರಾನ್ ಬಹದ್ದೂರ್, ನಾಡಿನ್ ಡಿ ಕ್ಲರ್ಕ್, ಹೀದರ್ ನೈಟ್ ತಂಡದಿಂದ ಹೊರಬದ್ದಿರುವ ಆಟಗಾರ್ತಿಯರು. ಇದೀಗ ಆರ್​ಸಿಬಿ ತಂಡದಿಂದ ಬಿಡುಗಡೆಯಾಗಿರುವವರ ಪೈಕಿ ಐವರು ಭಾರತೀಯ ಆಟಗಾರ್ತಿಯರು ಸೇರಿದ್ದರೆ, ಇನ್ನಿಬ್ಬರು ವಿದೇಶಿ ಪ್ಲೇಯರ್​ಗಳು ಇದ್ದಾರೆ. 14 ಆಟಗಾರ್ತಿಯರನ್ನು ಉಳಿಸಿಕೊಂಡಿರುವ ಕಾರಣ ಮಿನಿ ಹರಾಜಿನಲ್ಲಿ ಕನಿಷ್ಠ 4 ಆಟಗಾರ್ತಿಯರನ್ನು ಖರೀದಿಸಬೇಕಾಗಿದ್ದು, ತಂಡದ ಪರ್ಸ್​ನಲ್ಲಿ ಒಟ್ಟು 3.25 ಕೋಟಿ ರೂ. ಉಳಿದಿದೆ.

ರಿಟೇನ್​ ಮಾಡಲಾಗಿರುವ ಆಟಗಾರ್ತಿಯರು

ಸ್ಮೃತಿ ಮಂಧಾನ (Captain), ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೇರ್‌ಹ್ಯಾಮ್, ಸೋಫಿ ಡಿವೈನ್, ರೇಣುಕಾ ಠಾಕೂರ್, ಆಶಾ ಶೋಬನಾ, ಶ್ರೇಯಾಂಕಾ ಪಾಟೀಲ್, ಏಕ್ತಾ ಬಿಶ್ತ್, ಎಸ್ ಮೇಘನಾ, ಡ್ಯಾನಿ ವ್ಯಾಟ್-ಹಾಡ್ಜ್ (Trading), ಕೇಟ್ ಕ್ರಾಸ್, ಕನಿಕಾ ಮೊಲಿನೆಕ್ಸ್, ಕನಿಕಾ ಅಹುಜಾ ರಿಟೇನ್​ (Retention) ಮಾಡಲಾಗಿರುವ ಆಟಗಾರ್ತಿಯರು.

https://twitter.com/RCBTweets/status/1854497377933246717

Source : https://www.vijayavani.net/wpl-2025-retention-rcbs-full-list-of-retained-and-released-players

Leave a Reply

Your email address will not be published. Required fields are marked *