
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನ. 9: ಸಂಡೂರು ವಿಧಾನಸಭಾ ಕ್ಷೇತ್ರದ ತೋರಣಗಲ್‍ನಲ್ಲಿ ನಡೆದ ಪ್ರಮುಖ ಮುಖಂಡರ ಸಭೆಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರಾದ
ಬಿ.ವೈ.ವಿಜಯೇಂದ್ರ, ಮಾಜಿ ಮಂತ್ರಿಗಳು ಹಾಗೂ ಶಾಸಕರಾದ ಗಾಲಿ ಜನಾರ್ದನ್‍ರೆಡ್ಡಿ, ಕೇಂದ್ರದ ಮಾಜಿ ಸಚಿವರಾದ ಭಗವಂತ
ಖೂಬ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ವಿಧಾನ ಪರಿಷತ್ ಶಾಸಕರಾದ ಹಾಗೂ ಸಂಡೂರು ಉಪಚುನಾವಣೆ
ಉಸ್ತುವಾರಿಗಳಾದ ಕೆ.ಎಸ್. ನವೀನ್, ಸಕಲೇಶಪುರದ ಶಾಸಕರಾದ ಸಿಮೆಂಟ್ ಮಂಜು, ದಿವಾಕರ್,ವಿಜಯನಗರ ಜಿಲ್ಲೆಯ
ಜಿಲ್ಲಾಧ್ಯಕ್ಷರಾದ ಚನ್ನಬಸವನ ಗೌಡ್ರು, ಬಳ್ಳಾರಿಯ ಜಿಲ್ಲಾಧ್ಯಕ್ಷರಾದ ಅನಿಲ್ ನಾಯ್ಡು ಪ್ರಮುಖ ಮುಖಂಡರು ಭಾಗವಹಿಸಿ ಸಂಡೂರು
ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಬಂಗಾರು ಹನುಮಂತುರವರ ಪರವಾಗಿ ಪ್ರಚಾರವನ್ನು ಮಾಡಿ ಮತಯಾಚನೆಯನ್ನು
ಮಾಡಿದರು.