ಚಿತ್ರದುರ್ಗ|ಒನಕೆ ಓಬವ್ವ ಜಯಂತೋತ್ಸವ 2024.

ಚಿತ್ರದುರ್ಗ ನ. 11: ಒನಕೆ ಓಬವ್ವಳಂತೆ ಸಮಯ ಪ್ರಜ್ಞೆ, ಶೌರ್ಯ, ಬುದ್ದಿವಂತಿಕೆಯನ್ನು ಇಂದಿನ ಮಹಿಳೆಯರು ತಮ್ಮ ಜೀವನದಲ್ಲಿ ಬಳಕೆ
ಮಾಡಿಕೊಳ್ಳಬೇಕಿದೆ ಎಂದು ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಕರೆ ನೀಡಿದ್ದಾರೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಒನಕೆ ಓಬವ್ವ ಜಯಂತೋತ್ಸವ 2024, ಶ್ರೀ ಜಗದ್ಗುರು ಛಲವಾದಿ ಗುರುಪೀಠ, ಛಲವಾದಿ ಮಹಾಸಭಾ, ಚಿತ್ರದುರ್ಗ ಹಾಗೂ ಒನಕೆ
ಓಬವ್ವ ಸಂರಕ್ಷಣಾ ಸಮಿತಿವತಿಯಿಂದ ನಗರದ ಕೋಟೆ ಮುಂಭಾಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೀರವನಿತೆ ಮಾತೆ ಒನಕೆ
ಓಬವ್ವರ ಜಯಂತಿ ಕಾರ್ಯಕ್ರವನ್ನು ಉದ್ಘಾಟಿಸಿ ಒನಕೆ ಓಬವ್ವಳ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅಂದಿನ
ದಿನದಲ್ಲಿ ಓಬವ್ವ ಕೋಟೆಗೆ ಶತೃಗಳು ನುಗ್ಗಿದಾಗ ಮನೆಯಲ್ಲಿ ತನ್ನ ಗಂಡ ಊಟವನ್ನು ಮಾಡುತ್ತಿರುವಾಗ ಆತನನ್ನು ಎಬ್ಬಿಸಬಾರದೆಂದು
ತಾನೇ ಕೈಯಲ್ಲಿ ಓನಕೆಯನ್ನು ಹಿಡಿದು ಶತೃಗಳನ್ನು ಸದೆ ಬಡಿದಿದ್ದು ಈಗ ಇತಿಹಾಸವಾಗಿದೆ ಆ ಸಮಯದಲ್ಲಿ ಆಕೆ ತೋರಿದ ಸಮಯ
ಪ್ರಜ್ಞೆ, ದಿಟ್ಟತನ, ಶೌರ್ಯ, ಪರಾಕ್ರಮ, ನಿಜಕ್ಕೂ ಶ್ಲಾಘನೀಯವಾದದು, ಅಂದಿನ ಸಮಯದಲ್ಲಿ ಆಕೆ ತೆಗೆದುಕೊಂಡ ನಿರ್ಧಾರ ನಿಜಕ್ಕೂ
ಉತ್ತಮವಾಗಿದೆ ಎಂದರು.

ಒನಕೆ ಓಬವ್ವಳ ಈ ರೀತಿಯ ಸಮಯ ಪ್ರಜ್ಞೆ, ದಿಟ್ಟತನ, ಶೌರ್ಯ, ಪರಾಕ್ರಮ ಇಂದಿನ ಮಹಿಳೆಯರಲ್ಲಿ ಬರಬೇಕಿದೆ, ಇದನ್ನು ತಮ್ಮ
ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳಬೇಕಿದೆ ಇದರಿಂದ ನಿಮ್ಮ ಬದುಕಿನಲ್ಲಿ ಉತ್ತಮವಾದ ವಾತಾವರಣ ನಿರ್ಮಾಣವಾಗಲಿದೆ.
ಕಿತ್ತೂರುರಾಣಿ ಚನ್ನಮ್ಮ, ಛಾನ್ಸಿ ರಾಣಿ ಲಕ್ಷ್ಮೀಬಾಯಿ ಯವರ ಇತಿಹಾಸದಲ್ಲಿ ಅವರು ರಾಜ ಮನೆತನದವರಾಗಿದ್ದು ರಾಜ್ಯಭಾರ
ಯುದ್ದವನ್ನು ಮಾಡುವುದರ ಮೂಲಕ ಚರಿತ್ರೆಯಲ್ಲಿ ಹೆಸರನ್ನು ಪಡೆದವರಾಗಿದ್ದಾರೆ ಆದರೆ ಒನಕೆ ಓಬವ್ವ ಚಿತ್ರದುರ್ಗದ ರಾಜರ ಬಳಿ
ಸಾಮಾನ್ಯ ಮಹಿಳೆಯಾಗಿ ಕೋಟೆಯನ್ನು ಕಾವಲು ಕಾಯುವ ಮಡದಿಯಾಗಿ ತನ್ನ ಪಾಲಿನ ಕೆಲಸವನ್ನು ಮಾಡುತ್ತಿದ್ದಳು ಕೋಟೆಗೆ
ಶತೃಗಳು ನುಗ್ಗಿದಾಗ ಗಂಡನಿಗೂ ಸಹಾ ಹೇಳಿದೆ. ಶತೃಗಳನ್ನು ಓನಕೆಯಿಂದ ಸದೆ ಬಡಿಯವುದರ ಮೂಲಕ ಕೋಟೆಯನ್ನು ಕಾಪಾಡಿದ
ತಾಯಿಯಾಗಿದ್ದಾಳೆ ಒಂದೇ ದಿನದಲ್ಲಿ ಹೆಸರನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಇಂದಿನ ದಿನಮಾನದಲ್ಲಿ ಇಂತಹ ಮಹಾನೀಯರ ಚರಿತ್ರೆಯನ್ನು ಯುವ ಪೀಳಿಗೆ ತಿಳಿಯಬೇಕಿದೆ, ಸಮಯಕ್ಕೆ ತಕ್ಕಂತೆ ಬುದ್ದಿವಂತಿಕೆಯನ್ನು ಯಾವ ರೀತಿ ಪ್ರದರ್ಶನ ಮಾಡಬೇಕೆಂದು ಓಬಳ್ಳ ಚರಿತ್ರೆಯಿಂದ ತಿಳಿಯಬೇಕಿದೆ. ಓಬಳ್ಳನ್ನು ಯಾವುದೇ ಒಂದು
ಜಾತಿಗೆ ಸೀಮಿತ ಮಾಡಿದೆ ಆಕೆ ಮಾಡಿದ ಕಾರ್ಯವನ್ನು ಎಲ್ಲರು ಸಹಾ ಕೊಂಡಾಡಬೇಕಿದೆ ಶೌರ್ಯವನ್ನು ಬೇರೆಯವರಿಗೆ ತಿಳಿಸುವ
ಕಾರ್ಯವನ್ನು ಮಾಡಬೇಕಿದೆ. ಇಂದಿನ ದಿನದಲ್ಲಿ ಶಿಕ್ಷಣದ ಪ್ರಮಾಣ ಹೆಚ್ಚಿದಂತೆ ಜಾತಿ ಹೋಗುತ್ತದೆ ಎನ್ನುತ್ತಿದ್ದರು ಆದರೆ ಅದು ಆ ರೀತಿಯಾಗದೆ ಇನ್ನು ಹೆಚ್ಚಾಗುತ್ತಿದೆ, ಜಾತಿಯನ್ನು ಬಿಡಿ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸಿ ಎಲ್ಲರನ್ನು ನಮ್ಮವರು ಎಂಬ ಆಭವನೆಯನ್ನು ಮೂಡಿಸಿಕೊಳ್ಳಿ, ಇಂದಿನ ದಿನದಲ್ಲಿ ಓಬಳ್ಳ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಮುಂದಿನ ದಿನದಲ್ಲಿ ಅದ್ದೂರಿಯಾಗಿ ಸಮಾಜದವತಿಯಿಂದ ಆಚರಣೆ ಮಾಡಲಾಗುವುದೆಂದು ನಾರಾಯಣಸ್ವಾಮಿ ತಿಳಿಸಿದರು.

ಬಿಜೆಪಿ ಮುಖಂಡರಾದ ರುದ್ರಯ್ಯ ಮಾತನಾಡಿ, ಸಂಸ್ಕಾರ, ಸಮಯೋಚಿತ ಆಲೋಚನೆ, ಶೌರ್ಯ ಪ್ರದರ್ಶನವನ್ನು ಓಬವ್ವ ಪ್ರದರ್ಶನ
ಮಾಡಿದ್ದಾಳೆ, ಇದನ್ನು ಇಂದಿನ ಯುವ ಜನಾಂಗ ಮೈಗೂಡಿಸಿಕೊಳ್ಳಬೇಕಿದೆ. ಓಬವ್ವಳಿಗೆ ಯಾವುದೇ ಜಾತಿಯ ಲೇಪನ ಮಾಡಬೇಡಿ
ಓಬವ್ವ ಎಲ್ಲರಿಗೂ ಬೇಕಾದ ಮಹಿಳೆಯಾಗಿದ್ದಾಳೆ, ಶತೃಗಳಿಂದ ಕೋಟೆಯನ್ನು ರಕ್ಷಿಸಿದ ತಾಯಿಯಾಗಿದ್ದಾಳೆ ಎಂದರು.
ನಗರಸಭಾ ಸದಸ್ಯರಾದ ಶ್ರೀನಿವಾಸ್ ಮಾತನಾಡಿ, ಜಾತಿ, ಜನಾಂಗತ, ಧರ್ಮದ ಬಗ್ಗೆ ಹೋರಾಟವನ್ನು ಮಾಡುವ ಬದಲು ದೇಶದ ಬಗ್ಗೆ
ಹೋರಾಟವನ್ನು ಮಾಡಲು ಯುವ ಜನಾಂಗ ಮುಂದಾಗಬೇಕಿದೆ. ಜಾತಿಗಿಂತ ಪ್ರೀತಿ ಮುಖ್ಯವಾಗಬೇಕಿದೆ. ದೇಶದಲ್ಲಿ ಮುಸ್ಲಿಂರು ಸಹಾ
ಭಾರತವನ್ನು ನಮ್ಮ ದೇಶ ಎನ್ನುವಂತಾಗಬೇಕಿದೆ.ಇದರಿಂದ ನಮ್ಮ ದೇಶ ಎತ್ತರಕ್ಕೆ ಬೆಳೆಯಲು ಸಹಾಯವಾಗುತ್ತದೆ ಎಂದರು.

ಬಿಜೆಪಿ ಮುಖಂಡರಾದ ಆನಿತ್ ಕುಮಾರ್ ಮಾತನಾಡಿ, ಶತೃಗಳು ಕೋಟೆಯೊಳಗೆ ನುಗ್ಗಿದಾಗ ಅವರನ್ನು ಸದೆ ಬಡೆಯುವ ಕೆಲಸವನ್ನು
ಮಾಡಿದ ಓಬಳ್ಳ ಸಮಯ ಪ್ರಜ್ಞೆ ಇಲ್ಲಿ ಅತಿ ಮುಖ್ಯವಾಗಿದೆ. ಇಂದಿನ ದಿನಮಾನದಲ್ಲಿ ನಮ್ಮಗೆ ಶತೃಗಳ ಸಂಖ್ಯೆ ಹೆಚ್ಚಾಗಿದೆ. ಇದರ ಬಗ್ಗೆ
ಅರಿವು ಇರಬೇಕಿದೆ ಓಬಳ್ಳಂತೆ ಸಮಯಪ್ರಜ್ಞೆಯಿಂದ ಮೆರೆಯಬೇಕಿದೆ ಎಂದರು.

ಒನಕೆ ಓಬವ್ವ ಸಂರಕ್ಷಣಾ ಸಮಿತಿವತಿಯ ಅಧ್ಯಕ್ಷರಾದ ಛಲವಾದಿ ತಿಪ್ಪೇಸ್ವಾಮಿ ಮಾತನಾಡಿ ಈ ಕಾರ್ಯಕ್ರಮವನ್ನು ತುರಾತುರಿಯಲ್ಲಿ
ಆಯೋಜನೆ ಮಾಡಲಾಗಿದೆ. ನಿನ್ನೆ ರಾತ್ರಿ ಡಿಎಸ್ ಹಳ್ಳಿಯಿಂದ ಮಾಲೆಯನ್ನು ಧರಿಸಿ ಪಾದಾಯಾತ್ರೆಯ ಮೂಲಕ ನಗರಕ್ಕೆ
ಆಗಮಿಸಲಾಯಿತು. ಈ ಸಮಯದಲ್ಲಿ ಮನೆ. ಮನೆಗೆ ಭೇಟಿಯನ್ನು ನೀಡಿ ಭೀಕ್ಷೆಯನ್ನು ಸಂಗ್ರಹ ಮಾಡಲಾಯಿತು. ಇದನ್ನು ಒನಕೆ ಓಬಳ್ಳ
ಸಮಾದಿಯ ಬಳಿ ಬಿತ್ತುವುದರ ಮೂಲಕ ಓಬಳ್ಳ ಸತ್ತಿಲ್ಲ ಇನ್ನು ಜೀವಂತವಾಗಿ ಇದ್ದಾಳೆ ಎಂಬ ಸಂದೇಶವನ್ನು ಪ್ರಸಾರ ಮಾಡಲಾಗುವುದು
ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ಛಲವಾದಿ ಗುರುಪೀಠದ ಶ್ರೀ ಬಸವನಾಗ್ತಿದೇವ ವಹಿಸಿದ್ದರು, ಶರಣಪ್ಪ, ಪ್ರದೀಪ್, ಶ್ರೀನಾಥ್, ರುದ್ರೇಶ್,
ಕೇಶವ ಗೋಪಿ ಲೋಕೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ
ಆಶೋಕ, ದಯಾನಂದ, ಮಂಜುಳಮ್ಮ ರವರನ್ನು ಸನ್ಮಾನಿಸಲಾಯಿತು. ಬಿಂದು ಪ್ರಾರ್ಥಿಸಿದರೆ ಶೇಷಣ್ಣ ಸ್ವಾಗತಿಸಿದರು.

Leave a Reply

Your email address will not be published. Required fields are marked *