ಚಿತ್ರದುರ್ಗ|ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ನೌಮನ್ ಅಹಮ್ಮದ್ ಷರೀಫ್ ರಾಷ್ಟ್ರಮಟ್ಟಕ್ಕೆ ಆಯ್ಕೆ.

ಚಿತ್ರದುರ್ಗ: ನಗರದ ಪ್ರತಿಷ್ಠಿತ ಶಾಲೆಯಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಯಾದ ನೌಮನ್ ಅಹಮ್ಮದ್ ಷರೀಫ್ ಚಿತ್ರದುರ್ಗ ಜಿಲ್ಲೆಯ 17 ವರ್ಷದೊಳಗಿನ ಅಥ್ಲೆಟಿಕ್ಸ್ ವಿಭಾಗದ ರಾಜ್ಯಮಟ್ಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 10ನೇ ತಗರತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೌಮನ್ ಅಹಮ್ಮದ್ ಷರೀಫ್, ಕೋಲಾರ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಮಟ್ಟದ 17 ವರ್ಷದ ವಯೋಮಿತಿಯೊಳಗಿನ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ 400ಮೀ ಹರ್ಡಲ್ಸ್ನಲ್ಲಿ (57.91 ಸೆಕಂಡ್) ದ್ವಿತೀಯ ಸ್ಥಾನ ಪಡೆದು, ನವೆಂಬರ್ 26 ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಲಿರುವ ರಾಷ್ಟಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ನೌಮನ್ ಅಹಮ್ಮದ್ ಷರೀಫ್‌ಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ.ಬಿ.ವಿಜಯ್ ಕುಮಾರ್, ಶ್ರೀ.ಎಸ್.ಎಂ ಪೃಥ್ವೀಶ ಹಾಗೂ ಶ್ರೀಮತಿ ಸುನಿತಾ.ಪಿ.ಸಿ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ.ಎನ್.ಜಿ, ಐಸಿಎಸ್‌ಇ ಪ್ರಿನ್ಸಿಪಾಲರಾದ ಬಸವರಾಜಯ್ಯ.ಪಿ, ಐಸಿಎಸ್‌ಇ ಉಪಪ್ರಿನ್ಸಿಪಾಲರಾದ ಅವಿನಾಶ್ ಬಿ, ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಿಸಿ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *