ಜೊಹಾನ್ಸ್ಬರ್ಗ್: ದಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಹಾಗೂ ದಕ್ಷಿಣ ಆಫ್ರಿಕಾ (South Africa) ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಪ್ರವಾಸಿ ತಂಡವು ಆಲ್ರೌಂಡ್ ಪ್ರದರ್ಶನದ ಫಲವಾಗಿ 135 ರನ್ಗಳ ಭರ್ಜರಿ ಜಯ ಸಾಧಿಸಿದ್ದು, ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿದೆ.
![](https://samagrasuddi.co.in/wp-content/uploads/2024/11/image-113.png)
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ (Team India) ನಾಯಕ ಸೂರ್ಯಕುಮಾರ್ ಯಾದವ್ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡ ಸಂಜು ಸ್ಯಾಮ್ಸನ್ (Sanju Samson) (109 ರನ್, 56 ಎಸೆತ, 6 ಬೌಂಡರಿ, 9 ಸಿಕ್ಸರ್), ತಿಲಕ್ ವರ್ಮಾ (Tilak Varma) (120 ರನ್, 47 ಎಸೆತ, 9 ಬೌಂಡರಿ, 10 ಸಿಕ್ಸರ್) ಶತಕಗಳ ಫಲವಾಗಿ 20 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 283 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು. ಇನ್ನೂ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾವನ್ನು (South Africa) ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್ಗಳು ಎದುರಾಳಿ ತಂಡವನ್ನು 148 ರನ್ಗಳಿ ಆಲೌಟ್ ಮಾಡುವ ಮೂಲಕ ತಂಡಕ್ಕೆ 135 ರನ್ಗಳ ಭರ್ಜರಿ ಗೆಲುವನ್ನು ತಂದುಕೊಟ್ಟಿದ್ದಾರೆ.
ಕಳೆದೆರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ಸಂಜು ಸ್ಯಾಮ್ಸನ್ (Sanju Samson) ಈ ಪಂದ್ಯದಲ್ಲಿ ಬೌಂಡರಿ, ಸಿಕ್ಸರ್ಗಳ ಸುರಿಮಳೆಗರೆದರು. ಇದೇ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಸಂಜು (Sanju Samson), ಅಂತಿಮ ಪಂದ್ಯದಲ್ಲೂ ಶತಕ ಬಾರಿಸುವ ಮೂಲಕ ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದ್ದಾರೆ. ಎದುರಾಳಿ ತಂಡದ ಬೌಲರ್ಗಳ ಬೆಂಡೆತ್ತಿದ್ದ ಸಂಜು ಸ್ಯಾಮ್ಸನ್ ಸಾರಾಸಗಟಾಗಿ ಬೌಂಡರಿ, ಸಿಕ್ಸರ್ಗಳನ್ನು ಬಾರಿಸಿದರು. ಸಿಕ್ಸರ್ ಭಾರಿಸುವ ಭರದಲ್ಲಿ ಸ್ಟೇಡಿಯಂನಲ್ಲಿ ಕ್ರಿಕೆಟ್ ವೀಕ್ಷಿಸಲು ಬಂದಿದ್ದ ಮಹಿಳಾ ಅಭಿಮಾನಿಯ ದವಡೆಯನ್ನು ಸಂಜು ಡ್ಯಾಮೇಜ್ ಮಾಡಿದ್ದಾರೆ.
ಟ್ರಿಸ್ಟಬೇನ್ ಸ್ಟಬ್ಸ್ ಎಸೆದ 10ನೇ ಓವರ್ನಲ್ಲಿ ಸಂಜು ಸಿಕ್ಸರ್ಗಟ್ಟಿದ ಚೆಂಡೊಂದು ನೇರವಾಗಿ ಹೋಗಿ ಪಂದ್ಯ ವೀಕ್ಷಿಸಲು ಕೂತಿದ್ದ ಮಹಿಳಾ ಅಭಿಮಾನಿಯ ದವಡೆಗೆ ಒಡೆಯಿತು, ಇದರಿಂದ ನೋವು ತಾಳಲಾರದೆ ಮಹಿಳೆ ಜೋರಾಗಿ ಅಳಲು ಪ್ರಾರಂಭಿಸಿದ್ದಾರೆ. ಸದ್ಯ ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗೆ ಪೆಟ್ಟು ಬಿದ್ದಿರುವುದನ್ನು ಅರಿತು ಸಂಜು ಸ್ಯಾಮ್ಸನ್ ಖುದ್ದು ಕ್ಷಮೆಯಾಚಿಸಿದ್ದಾರೆ.