ಚಿತ್ರದುರ್ಗ| ವಕ್ಫ್ ಬೋರ್ಡ್| ಜನವಿರೋಧಿ ನೀತಿ ವಿರುದ್ಧ ” ನಮ್ಮ ಭೂಮಿ, ನಮ್ಮ ಹಕ್ಕು”ಹಕ್ಕೊತ್ತಾಯದೊಂದಿಗೆ ಬಿಜೆಪಿ ಹೋರಾಟ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನ. 22 : ನೀವು ಮುಡ ಹಗರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿಯೇ ಮುಳುಗಿದ್ದೀರಿ..ರಾಜ್ಯದ ರೈತರ ಬಗ್ಗೆ ಚಿಂತೆ ಇಲ್ಲ..ರಾಜ್ಯದ ಜನರು ನಿಮಗೆ ಅಧಿಕಾರ ಕೊಟ್ಟಿದ್ದಾರೆ.. ನೀವು ಅವರ ಕಣ್ಣೀರು ವರೆಸಲಿ ಎಂದು ಆದರೆ ನೀವು ಯಾರೊಬ್ಬರ ಓಲೈಕೆ ಮಾಡಲಿಕ್ಕೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ದ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್,ನವೀನ್ ವಾಗ್ದಾಳಿ
ನಡೆಸಿದರು.

ರಾಜ್ಯದ ರೈತರ ಕೃಷಿ ಭೂಮಿ, ಮಠ, ಮಂದಿರ, ಜನ ಸಾಮಾನ್ಯರ ಜಮೀನುಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಅಕ್ರವಾಗಿ ಕಬಳಿಸುವ
ಷಡ್ಯಂತ್ರದ ಜನವಿರೋಧಿ ನೀತಿ ವಿರುದ್ಧ ನಮ್ಮ ಭೂಮಿ ನಮ್ಮ ಹಕ್ಕು ಎಂಬ ಹಕ್ಕೊತ್ತಾಯದೊಂದಿಗೆ ನಗರದ ಡಿ.ಸಿ.ಸರ್ಕಲ್‍ನಲ್ಲಿ
ಅಭಿಯಾನದದಡಿ ಹಮ್ಮಿಕೊಂಡಿದ್ದು ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಭೂಮಿ ನಮ್ಮ ಹಕ್ಕು
ಘೋಷಣೆಯೊಂದಿಗೆ ನಿನ್ನೆ ಮತ್ತು ಇಂದು ರಾಜ್ಯಾದ್ಯಂತ ಬಿಜೆಪಿ ಪಕ್ಷ ಹೋರಾಟ ಮಾಡುತ್ತಿದೆ. ಸಿದ್ದರಾಮಯ್ಯನವರ ಸೂಚನೆಯ ಮೇರೆಗೆ
ವಕ್ಫಾ ಸಚಿವರು ಎಲ್ಲಾ ಜಿಲ್ಲೆಗಳಿಗೆ ಹೋಗಿ ವಕ್ಫಾ ಆಸ್ತಿಯನ್ನಾಗಿ ವಶಪಡಿಸಿಕೊಳ್ಳಬೇಕೆಂದು ಅಧಿಕೃತ ರೆಜ್ಯುಲೇಷನ್ ಮಾಡಿ ಮಠ
ಮಾನ್ಯಗಳ, ರೈತರ ದೇವಸ್ಥಾನದ ಆಸ್ತಿಯನ್ನು ವಕ್ಫಾ ಹೆಸರಿಗೆ ಬರುವ ಹಾಗೆ ಮಾಡಿಕೊಳ್ಳುತ್ತಿದ್ದಾರೆ.ನಮ್ಮ ಭಾರತ ನಮ್ಮ ಕರ್ನಾಟಕ
ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಚಿಂತೆ ಮಾಡಬೇಕು.. ಈ ದೇಶವನ್ನು ಪಾಕಿಸ್ತಾನಕ್ಕೆ ಸೇರಿಸುವ ಕೆಲಸವೆನ್ನಾದರೂ
ಮಾಡುತ್ತಿದ್ದಾರೋ…? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಹೇಳುತ್ತಾರೆ ರೈತರ ಜಮೀನನ್ನು ಪಡೆದುಕೊಳ್ಳುವ ಆದೇಶವನ್ನು ಮಾಡುವುದಿಲ್ಲ.. ಈ ಮೊದಲು ರೈತರ ಪಹಣಿಯಲ್ಲಿ
ವಕ್ಫಾ ಆಸ್ತಿ ಎಂದು ಹೇಗೆ ಬಂತು ಎಂಬುದರ ಬಗ್ಗೆ ಮೊದಲು ಉತ್ತರ ಕೊಡಿ.ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ..
ಯಾರು ಸಹ ನೆಮ್ಮದಿಯಿಂದ ಬದುಕುವುದಕ್ಕೆ ಆಗುತ್ತಿಲ್ಲ ಇದಕ್ಕೆ ಕಾರಣ ಭ್ರಷ್ಟಾಚಾರಿ ಸಿದ್ದರಾಮಯ್ಯನವರು.ಒಂದೇ ಒಂದು ಇಂಚು ಸಹ
ರೈತರ, ಮಠ ಮಾನ್ಯಗಳ ದೇವಸ್ಥಾನದ ಆಸ್ತಿಯನ್ನು ವಕ್ಫಾಗೆ ಕೊಡುವ ಪ್ರಶ್ನೆಯೇ ಇಲ್ಲ ಏನು ಮಾಡುತ್ತೀರಿ ಮಾಡಿ ಎಂದ
ಸಿದ್ದರಾಮಯ್ಯರವರಿಗೆ ಎಚ್ಚರಿಕೆಯನ್ನು ನೀಡಿದ ನವೀನ್ ನಮ್ಮ ಜಿಲ್ಲೆಯಲ್ಲಿ ನಂದನಹೊಸೂರಿನಲ್ಲಿ ಬಹು ಸಂಖ್ಯಾತ ಹಿಂದುಗಳಿಗೆ ಕಾಲು
ಎಕರೆ ರುದ್ರಭೂಮಿ ಸಹ ಇಲ್ಲ.. ಆದರೆ ಸುಮಾರು ವರ್ಷಗಳ ಹಿಂದೆ ವಾಸವಾಗಿ ಹೋದ ಅಲ್ಪಸಂಖ್ಯಾತರಿಗೆ 5 ಎಕರೆ ಖಾಬರಸ್ಥಾನಕ್ಕೆ
ಕೊಟ್ಟಿದ್ದೀರಿ ಎಂದ ಅವರು ಡಿಸೆಂಬರ್ ಮೊದಲ ವಾರದಲ್ಲಿ ನಮ್ಮ ನಾಯಕರ ತಂಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ
ಎಂದರು.

ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜನ್ ಮಾತನಾಡಿ, ವಕ್ಫ್ ಆಸ್ತಿ ರಾಜ್ಯದಲ್ಲಿ ದೊಡ್ಡ ಸಮಸ್ಯೆ ಸೃಷ್ಠಿಸಿದೆ. ಕಾಂಗ್ರೆಸ್
ಸರ್ಕಾರದ ಒಂದು ಸಮುದಾಯದ ತುಷ್ಟೀಕರಣ ಫಲವಾಗಿ ಸಾವಿರಾರು ಸಂಖ್ಯೆಯ ರೈತರು, ಮಠಾಧೀಶರು, ಸ್ವಾಮೀಜಿ, ನಾಗರಿಕರು
ಇದು ನಮ್ಮ ಭೂಮಿ ಎಂದು ಬೀದಿಗಿಳಿದು ಹೋರಾಟ ಮಾಡಬೇಕಾದ ವಾತಾವರಣ ಸೃಷ್ಟಿಸಿದೆ ಲ್ಯಾಂಡ್ ಜಿಹಾದ್ ಮೂಲಕ ಹಿಂದೂ
ಸಮಾಜದ ಆಸ್ತಿಗಳನ್ನು ಕಬಳಿಸುವ ಹುನ್ನಾರ ನಡೆಸಿರುವ ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ. ಪ್ರತಿ ದಿನ ಹಗರಣ,
ಭ್ರಷ್ಟಾಚಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಈಗ ವಕ್ಫ್ ಕಾಯ್ದೆ ಮುಂದಿಟ್ಟು ರಾತ್ರೋರಾತ್ರಿ ಆಸ್ತಿಗಳನ್ನು ವಕ್ಫ್ ಮಂಡಳಿ ಆಸ್ತಿಯನ್ನಾಗಿ
ಮಾಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ವಕ್ಫ್ ನೋಟಿಸ್ ರದ್ದು ಪಡಿಸುವುದಾಗಿ ಹೇಳುತ್ತಿದೆ. ನೋಟಿಸ್ ರದ್ದುಗೊಳಿಸುವ ಜೊತೆಗೆ ಪಹಣಿ ಕಾಲಂ 11 ರಲ್ಲಿ ವಕ್ಫ್ ಆಸ್ತಿ
ಎಂದು ನಮೂದಾಗಿರುವುದನ್ನೂ ತೆಗೆದು ಹಾಕುವ ಕೆಲಸ ಮಾಡಬೇಕು.ಈಗ ಸಾಂಕೇತಿಕವಾಗಿ ಹೋರಾಟ ನಡೆಸಲಾಗುತ್ತಿದೆ. ಸರ್ಕಾರ
ವಕ್ಫ್ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಆಕ್ರೋಶ
ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡ ಎನ್.ಆರ್. ಲಕ್ಷ್ಮೀಕಾಂತ್, ಬಯಲುಸೀಮೆ ಅಭೀವೃದ್ದಿ ಪ್ರಾಧಿಕಾರದ ಮಾಜಿ
ಅಧ್ಯಕ್ಷ ಜೀವನಮೂರ್ತಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ,
ರಾಮದಾಸ್, ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್, ನಗರಧ್ಯಕ್ಷ ನವೀನ್ ಚಾಲುಕ್ಯ, ಜಿಲ್ಲಾ ಖಂಜಾಚಿ ಮಾಧುರಿ ಗೀರಿಶ್, ಜಿಲ್ಲಾ
ವಕ್ತಾರ ನಾಗರಾಜ್ ಬೇದ್ರೇ, ಹಿರಿಯೂರು ಮಂಡಲ ಅಧ್ಯಕ್ಷ ವಿಶ್ವನಾಥ್, ಯುವ ಮೋರ್ಚಾದ ಚಂದ್ರು, ರೂಪ, ವೀಣಾ, ಬಸಮ್ಮ, ಕಂಚನ,
ಕವೀತಾ, ಸುಮ, ಕಿರಣ್, ಲೋಕೇಶ್, ಯೋಗೇಶ್ ಸಹ್ಯಾದ್ರಿ, ಜಗದೀಶ್, ಹೇಮಂತ, ಕಲ್ಲಂಸೀತಾರಾಮರೆಡ್ಡಿ, ರಜನೀ ಹರೀಶ್
ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *