![](https://samagrasuddi.co.in/wp-content/uploads/2024/11/2-200x300.jpg)
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನ. 23: ಕರ್ನಾಟಕದಲ್ಲಿ ನಡೆದ ಮೂರು ವಿಧಾನ ಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಆಡಳಿತ ರೂಢ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಗೆಲುವು ಸಿಕ್ಕಿದ್ದು, ಇದು ನಿಜಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಮತ್ತು ಅಭಿವೃದ್ದಿ ಪರ ಆಡಳಿತಕ್ಕೆ ಸಿಕ್ಕ ಗೆಲುವು ಎಂದು ಜಿಲ್ಲಾ ಕಾಂಗ್ರೆಸ್ಉಪಾಧ್ಯಕ್ಷ ತಾಳಿಕಟ್ಟೆ ಬಿ.ಗಂಗಾಧರ್ ಅಭಿಪ್ರಾಯಪಟ್ಟಿದ್ದಾರೆ
ಸದಾ ಜಾತಿ,ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಕೋಮುವಾದಿ ಭಾರತೀಯ ಜನತಾ ಪಾರ್ಟಿಯ ನಾಯಕರು ಹಾಗೂ ಅವಕಾಶವಾದಿ ರಾಜಕಾರಣ ಮಾಡುತ್ತಲೇ ಬಂದಿರುವ ಕೇಂದ್ರದ ಸಚಿವ ಹೆಚ್.ಡಿ.ಕುಮಾರ್ ಸ್ವಾಮಿ ಅವರಿಗೆ ಈ ಚುನಾವಣೆಯಲ್ಲಿ ಜನರು ಸೂಕ್ತ ಉತ್ತರ ಕೊಟ್ಟಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
ನಿರೀಕ್ಷೆಯಂತೆಯೇ ಚೆನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿಯ ಈ ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದಿದ್ದಾರೆ. ಇದು ರಾಜ್ಯ ಸರ್ಕಾರದ ಸಾಧನೆ, ಕಾಂಗ್ರೆಸ್ ಕಾರ್ಯಕರ್ತರ ಶ್ರಮದ ಗೆಲುವು. ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಡೆಸಿದ ಎಲ್ಲಾ ಕುತಂತ್ರಗಳಿಗೂ ಜನರು ತಕ್ಕಪಾಠ ಕಲಿಸಿ ಕಾಂಗ್ರೆಸ್‍ಗೆ ಆಶೀರ್ವಾದ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದ ಎಲ್ಲಾ ಗ್ಯಾರೆಂಟಿ ಯೋಜನೆಗಳಿಗೂ ಜನರು ಮನ್ನಣೆ ನೀಡಿದ್ದಾರೆಂದು ಅವರು ವಿಶ್ಲೇಷಿಸಿದ್ದಾರೆ.
ವಿರೋಧ ಪಕ್ಷಗಳು ಕಾಂಗ್ರೆಸ್ ಮತ್ತು ಮುಖ್ಯಮಂತ್ರಿಗಳ ವಿರುದ್ದ ಸುಳ್ಳು ಆರೊಪಗಳನ್ನು ಮಾಡಿ ಜನರಲ್ಲಿ ಗೊಂದಲ ಉಂಟು ಮಾಡುವ
ಪ್ರಯತ್ನ ಮಾಡಿದ್ದರು. ಮೂಡಾ, ವಾಲ್ಮೀಕಿ ಹಾಗೂ ವಕ್ಛ್ ಬೊರ್ಡ್ ವಿಚಾರದಲ್ಲಿ ವಿನಾ ಕಾರಣ ಸುಳ್ಳು ಆರೋಪ ಮಾಡಿದ್ದರು. 40
ವರ್ಷಗಳ ಶುದ್ದ ರಾಜಕಾರಣ ಮಾಡಿರುವ ಈ ನಾಡಿನ ಶ್ರೇಷ್ಠ ಸಾಮಾಜಿಕ ನ್ಯಾಯದ ಪರಿಪಾಲಕರಾದ ಸಿದ್ದರಾಮಯ್ಯ ಅವರ ವಿರುದ್ದ
ಭ್ರಷ್ಟಾಚಾರದ ಆರೋಪ ಮಾಡಿದ ನಾಯಕರಿಗೆ ಈ ಚುನಾವಣೆಯ ಫಲಿತಾಂಶ ಪ್ರತ್ಯುತ್ತರ ನೀಡಿದೆ ಎಂದು ಬಿ.ಗಂಗಾಧರ್ ಹೇಳಿದ್ದಾರೆ
ಇನ್ನು ಮುಂದೆ ಆದರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸರ್ಕಾರದ ವಿರುದ್ದ ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು.
ಜಾತಿ,ಧರ್ಮದ ಹೆಸರಿನಲ್ಲಿ ರಾಜಕಾರಭ ಮಾಡುವುದನ್ನು ನಿಲ್ಲಿಸಿ ಜನರ ಒಳತಿಗೆ ಶ್ರಮಿಸಲಿ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು
ಈಗಲಾದರೂ ಸಿದ್ದರಾಮಯ್ಯ ಅವರ ಜನಪರ ಆಡಳಿತ, ಅವರ ಶಕ್ತಿ, ಸಾಮಥ್ರ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ