ಚಿತ್ರದುರ್ಗ ನ. 24 : ಕನ್ನಡಿಗರು ಎಷ್ಟೇ ಭಾಷೆಗಳನ್ನು ಕಲಿತರೂ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ಭಾರತದ ನೆಲದಲ್ಲಿ ಕನ್ನಡ ಭಾಷೆಗೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದೆ ಎಂದು ಲೇಖಕ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿರುವ ಕೆ.ಕೆ. ನ್ಯಾಷನಲ್ ಆಂಗ್ಲ ಹಿರಿಯ ಹಾಗೂ ಪ್ರೌಢಶಾಲೆ ಇಲ್ಲಿ ಹಮ್ಮಿಕೊಳ್ಳಲಾಗಿದ್ದ
ಕನ್ನಡ ರಾಜ್ಯೋತ್ಸವ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ
ಅವರು, ಕನ್ನಡಿಗರಿಗೆ ಕನ್ನಡ ಭಾಷೆಯೆ ಸ್ವರ್ಗ ಹಾಗೂ ಹಬ್ಬವಿದ್ದಂತೆ. ಆದರೆ ಕನ್ನಡ ಮಾತೃಭಾಷೆಯು ಉದ್ಯೋಗದ
ಭಾಷೆಯಾಗುವಂತೆಯೂ ಸರ್ಕಾರ ಮತ್ತು ಸಾಹಿತಿಗಳು, ಕನ್ನಡ ಪ್ರೇಮಿಗಳು ಕಾರ್ಯಗತರಾಗಬೇಕು ಎಂದು ಅಭಿಪ್ರಾಯಪಟ್ಟರು.

ಕನ್ನಡದ ಮಕ್ಕಳ ಪ್ರೇಮವನ್ನು ಮಾತಿನಲ್ಲಿ ಬಣ್ಣಿಸಲಾಗದು ಎಂದು ಹೇಳುತ್ತಾ, ಕನ್ನಡ ಭಾಷೆಯ ಇತಿಹಾಸ, ಪ್ರಾಮುಖ್ಯತೆ, ಕವಿಗಳು,
ಕವಿವಾಣಿಗಳು, ಬಸವಣ್ಣ, ಕನಕದಾಸರು ಮೊದಲಾದ ಕವಿ ಶ್ರೇಷ್ಠರನ್ನು ನೆನಪಿಸಿಕೊಂಡರು. ನಾವು ವ್ಯವಹರಿಸಲು ಮತ್ತು ಬದುಕಲು
ಎಷ್ಟೇ ಭಾಷೆಗಳನ್ನು ಕಲಿಯಬಹುದು. ಆದರೆ ಕನ್ನಡಿಗನಾಗಿರುವುದಕ್ಕೆ ಹೆಮ್ಮೆ ಪಡಬೇಕು ಎಂದು ಮಕ್ಕಳಿಗೆ, ಪೋಷಕರಿಗೆ, ಶಿಕ್ಷಕರಿಗೆ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ|| ಹೆಚ್. ಆರ್. ಮಂಜುನಾಥ್ ಎಷ್ಟೇ ದೇಶ ವಿದೇಶ ಸುತ್ತಿದರೂ ಭಾರತೀಯನಾಗಿ,
ಕನ್ನಡಿಗನಾಗಿ ಹೆಮ್ಮೆ ಇದೆ, ಮಕ್ಕಳ ಪ್ರತಿಭೆಯನ್ನು ಗುರುತಿಸುವುದಕ್ಕೆ ಇದು ಒಂದು ವೇದಿಕೆ ಎಂದರು.

ಆಡಳಿತ ಅಧಿಕಾರಿ ಕಾರ್ತಿಕ್ ಪ್ರಬಂಧ ಸ್ಪರ್ಧೆಯ ರೂಪು-ರೇಷೆಗಳನ್ನು ವಿವರಿಸಿ ವಿಜೇತರಾದವರನ್ನು ಘೋಷಿಸಿದರು. ಶ್ರೀಮತಿ ಸುಶೀಲಾ ಕಾರ್ಯಕ್ರಮ ನಿರೂಪಿಸಿದರು, ಪ್ರಾರ್ಥನೆಯಯನ್ನು ಶ್ರೀಮತಿ ಲಾವಣ್ಯ ಮಾಡಿದರೆ, ಶ್ರೀಮತಿ ರೂಪಿಣಿ ಸ್ವಾಗತಿಸಿದರು. ಶ್ರೀಮತಿ ವಿಜಯಲಕ್ಷ್ಮಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಮಹೇಶ್ವರಪ್ಪ ಹಾಗೂ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ಹಿರಿಯ ಶಿಕ್ಷಕಿ ಸಿ.ಬಿ ನಿರ್ಮಲಾ ಉಪಸ್ಥಿತರಿದ್ದರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಮೊದಲ ಬಹುಮಾನ – ಆಧ್ಯಾ (ತರಳಬಾಳು) ಎರಡನೆಯ ಬಹುಮಾನ-ಜಯಶ್ರೀ (ಸಂತ ಜೋಸೆಫರ ಶಾಲೆ)
ತೃತೀಯ ಬಹುಮಾನ – ಬೇಬಿ.ಆರ್ ( ಕೆ.ಕೆ.ನ್ಯಾಷನಲ್ ಆಂಗ್ಲ ಹಿರಿಯ ಹಾಗೂ ಪ್ರೌಢಶಾಲೆ) ಹಾಗೂ ಆಧ್ಯಾ ಕೌಸರ್ ( ಸಂತ ಜೋಸೆಫರ
ಶಾಲೆ) ಇವರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.
Views: 0