ಚಿತ್ರದುರ್ಗ|ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ್ ಮಹಾವಿದ್ಯಾಲಯಗಳ ಪುರುಷ ಮತ್ತು ಮಹಿಳೆಯರ ಚೆಸ್ ಪಂದ್ಯಾವಳಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ, ನ,30: ಭೌತಿಕ ಹಾಗೂ ಬೌದ್ಧಿಕ ಕಸರತ್ತಿನ ಮೂಲಕ ಅನೇಕ ಕ್ರೀಡೆಗಳು ನಡೆಯುತ್ತವೆ. ಅದರಲ್ಲಿ ಪ್ರಮುಖವಾಗಿ ಬುದ್ಧಿ ಮತ್ತೆಯ ಅರ್ಥಾತ್ ಮೆದುಳಿನ ಮೂಲಕ ನಡೆಯುವ ಆಟ ಎಂದೇ ಪ್ರಖ್ಯಾತಿ ಹೊಂದಿರುವ ಚೆಸ್ (ಚದುರಂಗ )ಅದೂ ಒಂದಾಗಿದೆ.ಇದು ಪಠ್ಯಕ್ಕೂ ಸಹಕಾರಿ. ಕಾರಣ ಈ ಆಟದಲ್ಲಿ ಏಕಾಗ್ರತೆ ಪ್ರಾಪ್ತವಾಗುತ್ತದೆ. ಅಧ್ಯಯನಕ್ಕೆ ತುಂಬಾ ಸಹಕಾರಿ ಎಂದೇ ಹೇಳಬಹುದಾಗಿದೆ ಎಂದು ಶಿವಶರಣ
ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.

ಶ್ರೀಗಳವರು ನಗರದ ಎಸ್ ಜೆ ಎಂ ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ಎಸ್‍ಜೆಎಂ ಕಾನೂನು ಮಹಾವಿದ್ಯಾಲಯ, ಕರ್ನಾಟಕ
ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಇವರುಗಳ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ್
ಮಹಾವಿದ್ಯಾಲಯಗಳ ಪುರುಷ ಮತ್ತು ಮಹಿಳೆಯರ ಚೆಸ್ ಪಂದ್ಯಾವಳಿ ಹಾಗೂ ಆಯ್ಕೆ ಪ್ರಕ್ರಿಯೆ ‘2024ರ ಪಂದ್ಯಾವಳಿಯ ಉದ್ಘಾಟನಾ
ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳವರು ವಿಶ್ವ ಮಾನ್ಯವಾಗಿರುವ ಈ ಕ್ರೀಡೆ ಗ್ರಾಮೀಣ ಕಡೆಗೂ ಹೋಗಬೇಕಿದೆ. ಆ
ಭಾಗದ ಮಕ್ಕಳಲ್ಲಿನ ಬುದ್ಧಿಶಕ್ತಿ ವಿಕಾಸಕೊಳ್ಳಬೇಕಾಗಿದೆ. ಆ ಭಾಗದ ಜನರು ಹಿಂದೆ ಅಂದರೆ ಕಲವೇ ವರ್ಷಗಳ ಹಿಂದಿನವರೆಗೂ ತಮ್ಮ
ಬಿಡುವಿನ ವೇಳೆಯಲ್ಲಿ ಇಂತಹ ಅನೇಕ ವಿಭಿನ್ನವಾದ ಆಟಗಳನ್ನು ಆಡುತ್ತಿದ್ದನ್ನು ನಾವು ನೋಡಿದ್ದೇವೆ .ಈಗಿನ ಆಧುನಿಕ ಬರಾಟೆಯಲ್ಲಿ
ಅವುಗಳ ಸುಳಿವು ಇಲ್ಲದಂತಾಗಿದೆ. ಬುದ್ಧಿಶಕ್ತಿ ಹೆಚ್ಚಿಸುವಂತಹ ಗ್ರಾಮೀಣ ಕ್ರೀಡೆಗಳು ನಗರ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮತ್ತೆ
ಚಾಲ್ತಿಗೆ ಬರಬೇಕಾಗಿದೆ. ನಶಿಸುತ್ತಿರುವ ಈ ಕ್ರೀಡೆಗಳಿಗೆ ಉತ್ತೇಜಿಸುವ ,ಪ್ರೋತ್ಸಾಹ ನೀಡುವಂತಾಗಬೇಕಿದೆ ಎಂದು ಶ್ರೀಗಳವರು
ನುಡಿದರು.

ನೇತೃತ್ವ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ ವಿದ್ಯಾಪೀಠದ ಆಡಳಿತ ಮಂಡಳಿಯ
ಸದಸ್ಯರಾದ ಡಾ ಬಸವಕುಮಾರ ಸ್ವಾಮಿಗಳು ಮಾತನಾಡಿ ಹಿಂದೆ ಈ ಆಟ ರಾಜ ಮಹಾರಾಜ ರುಗಳಿಗೆ ಸೀಮಿತವಾಗಿತ್ತು ಎಂದು
ಹೇಳುತ್ತಿದ್ದದ್ದು, ಇದೀಗ ಎಲ್ಲಾ ಕಡೆ ಪಸರಿಸುತ್ತಿರುವುದು ಸಹ ಆಶಾದಾಯಕ. ಮನುಷ್ಯರ ಜೀವನದಲ್ಲಿ ಕಲೆ,ಕ್ರೀಡೆ,ಸಂಗೀತ ಮನರಂಜನೆ
ಎಲ್ಲವೂ ಬೇಕಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಇವುಗಳನ್ನು ರೂಡಿಸಿಕೊಂಡು ಮುನ್ನಡೆಯಬೇಕೆಂದು ಹಿತ ನುಡಿದರು.

ಈ ಸಮಾರಂಭದಲ್ಲಿ ವಕೀಲರಾದ ಉಮೇಶ, ಪ್ರಾಧ್ಯಾಪಕರುಗಳಾದ ಕೆ.ಎನ್. ವಿಶ್ವನಾಥ್, ಸುಮನಾ ಅಂಗಡಿ, ಟಿ.ಎಸ್.ಗಿರೀಶ್,
ಅಂಬಿಕಾ, ಗುರುಪ್ರಸಾದ್, ಸ್ಮಿತಾ, ಶ್ವೇತಾ , ದೈಹಿಕ ನಿರ್ದೇಶಕರಾದ ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ನಿಹಾರಿಕಾ ಹಾಗು
ಭವನ ಪ್ರಾರ್ಥಿಸಿದರು. ಪ್ರಾಚಾರ್ಯರಾದ ಎಸ್. ದಿನೇಶ್ ಸ್ವಾಗತಿಸಿದರು. ರೂಪಾ ನಾಯಕ ಕಾರ್ಯಕ್ರಮ ನಿರ್ವಹಿಸಿದರು, ಲೋಕೇಶ್
ರೆಡ್ಡಿ ವಂದಿಸಿದರು.

Views: 0

Leave a Reply

Your email address will not be published. Required fields are marked *