ಚಿತ್ರದುರ್ಗ|ಸೋಲಾರ್ ಮತ್ತು ವಿಂಡ್ ಎನರ್ಜಿ ಎಂಪ್ಲಾಯ್ಸ್ ಯೂನಿಯನ್‍ನಿಂದ ಡಿ. 1ರಂದು ರಾಜ್ಯ ಮಟ್ಟದ ಸಮಾವೇಶ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನ. 30 : ರಾಜ್ಯದ ವಿವಿಧ ಸೋಲಾರ್ ಮತ್ತು ವಿಂಡ್‍ಮಿಲ್‍ಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಗುತ್ತಿಗೆ ಮತ್ತು ಖಾಯಂ ನೌಕರರನ್ನು ಸಂಘಟಿಸುವ ಉದ್ದೇಶದಿಂದ ಸೋಲಾರ್ ಮತ್ತು ವಿಂಡ್ ಎನರ್ಜಿ ಎಂಪ್ಲಾಯ್ ಯೂನಿಯನ್‍ಗಳು ಜಂಟಿಯಾಗಿ ಡಿಸೆಂಬರ್ 1,2024 ರಂದು ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ರಾಜ್ಯ ಮಟ್ಟದ ಸಮಾವೇಶ ಹಾಗೂ ‘ಕಾರ್ಮಿಕ ಕಾಯ್ದೆಗಳು & ಕಾರ್ಮಿಕರ ಹಕ್ಕುಗಳು’ ಕುರಿತು ಸಂವಾದವನ್ನು ಬೆಳ್ಳಿಗೆ 11ಕ್ಕೆ ಹಮ್ಮಿಕೊಂಡಿವೆ. ಕರ್ನಾಟಕ ರಾಜ್ಯ ಸೋಲಾರ್ ಎನರ್ಜಿ ಎಂಪ್ಲಾಯ್ಸ್ ಯೂನಿಯನ್‍ನ ಜಂಟಿ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

ರಾಜ್ಯದಾದ್ಯಂತ ಹರಡಿರುವ ನೂರಾರು ಸೋಲಾರ್ ಮತ್ತು ವಿಂಡ್ ಮಿಲ್‍ಗಳಲ್ಲಿರುವ ಗುತ್ತಿಗೆ ಮತ್ತು ಖಾಯಂ ನೌಕರರು
ಅಸಂಘಟಿತರಾಗಿದ್ದು, ಅವರನ್ನು ಸಂಘಟಿಸುವ ಮತ್ತು ಹೋರಾಟವನ್ನು ವಿಸ್ತರಿಸುವ ಉದ್ದೇಶದಿಂದ ಈ ಸಮಾವೇಶವನ್ನು
ಸಂಘಟಿಸುತ್ತಿರುವುದು ಅತ್ಯಂತ ಮಹತ್ವದ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಈ ನೌಕರರಿಗೆ ಸೇವಾಭದ್ರತೆ, ನೇಮಕಾತಿಪತ್ರ,
ಗುರುತು ಚೀಟಿ, ವೇತನ ಚೀಟಿ, ಇಎಸ್‍ಐ-ಪಿಎಫ್, ಬೋನಸ್, ಶೂ-ಸಮವಸ್ತ್ರ, ಇತ್ಯಾದಿ ಬೇಡಿಕೆಗಳಿಗೆ ಧ್ವನಿಯೆತ್ತಲು ಈ ಸಮಾವೇಶವು
ಸ್ಫೂರ್ತಿಯಾಗಲಿದೆ. ಒಟ್ಟಾರೆ ರಾಜ್ಯದಾದ್ಯಂತ ಹರಡಿರುವ ನೂರಾರು ಸೋಲಾರ್ ಮತ್ತು ವಿಂಡ್ ಮಿಲ್‍ಗಳಲ್ಲಿರುವ ಗುತ್ತಿಗೆ ಮತ್ತು
ಖಾಯಂ ನೌಕರರು ಅಸಂಘಟಿತರಾಗಿದ್ದು, ಅವರನ್ನು ಸಂಘಟಿಸುವ ಮತ್ತು ಹೋರಾಟವನ್ನು ವಿಸ್ತರಿಸುವ ಉದ್ದೇಶದಿಂದ ಈ
ಸಮಾವೇಶವನ್ನು ಸಂಘಟಿಸುತ್ತಿರುವುದು ಅತ್ಯಂತ ಮಹತ್ವದ ವಿಷಯವಾಗಿದೆ.

ಕರ್ನಾಟಕ ರಾಜ್ಯವು ಒಟ್ಟಾರೆ ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ ಶೇ 52 ರಷ್ಟು ವಿದ್ಯುತ್ತನ್ನು ಪುನರ್‍ನವೀಕರಣ ಇಂಧನ ಮೂಲಗಳಿಂದ
ಅಂದರೆ ಗಾಳಿ(ವಿಂಡ್), ಸೂರ್ಯಶಾಖ(ಸೋಲಾರ್) ಮತ್ತು ನೀರು(ಹೈಡೋ) ಇತ್ಯಾದಿಗಳ ಮೂಲಕ ಉತ್ಪಾದಿಸುವಲ್ಲಿ
ಮುಂಚೂಣಿಯಲ್ಲಿದೆ. ಪಾವಗಡದ 2000 ಮೆವ್ಯಾ ವಿದ್ಯುತ್ ಉತ್ಪಾದನೆ ಮಾಡುವ ಬೃಹತ್ ಸೋಲಾರ್ ಪಾರ್ಕ್ ನಿಂದ ಹಿಡಿದು 5 ಮೆವ್ಯಾ
ವಿದ್ಯುತ್ ಉತ್ಪಾದನೆ ಮಾಡುವ ನೂರಾರು ಘಟಕಗಳು ರಾಜ್ಯದೆಲ್ಲೆಡೆ ಹಬ್ಬಿವೆ. ದೇಶದ ಹಾಗೂ ವಿದೇಶಗಳ ಕಂಪನಿಗಳು ಉಚಿತ ದರದಲ್ಲಿ
ನೈಸರ್ಗಿಕ ಸಂಪನ್ಮೂಲಗಳು ಹಾಗೂ ತೆರಿಗೆ ವಿನಾಯತಿಯನ್ನು ಪಡೆದು. ರೈತರ ಹಾಗೂ ಅರಣ್ಯ ಇಲಾಖೆಗೆ ಸೇರಿದ ಜಮೀನುಗಳಲ್ಲಿ
ಸೋಲಾರ್ ಮತ್ತು ವಿಂಡ್‍ಮಿಲ್‍ಗಳನ್ನು ಸ್ಥಾಪಿಸಿವೆ. ಸ್ಥಳೀಯರಿಗೆ ಉದ್ಯೋಗ ಒದಗಿಸುವ ಭರವಸೆಯೊಂದಿಗೆ ಆರಂಭವಾದ ಈ
ಕಂಪನಿಗಳು ಕಾರ್ಮಿಕರನ್ನು ನೇರವಾಗಿ ನೇಮಿಸಿಕೊಳ್ಳದೆ, ಗುತ್ತಿಗೆ-ಉಪಗುತ್ತಿಗೆ ಮೂಲಕ ಪಡೆದು ಅವರಿಗೆ ಶಾಸನ ಬದ್ಧ ಸೌಲಭ್ಯಗಳನ್ನು
ಸಹ ನೀಡದಿರುವುದು ಬಹುತೇಕ ಕಡೆಗಳಲ್ಲಿ ಕಂಡುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದಾದ್ಯಂತ ದುಡಿಯುವ ಜನರ ಚಳುವಳಿಯನ್ನು
ಬೆಳೆಸುತ್ತಿರುವ ಕೇಂದ್ರೀಯ ಕಾರ್ಮಿಕ ಸಂಘಟನೆಯಾದ ಎಐಯುಟಿಯುಸಿ ಈ ನೌಕರರನ್ನು ಸಂಘಟಿಸಲು ಮುಂದಾಯಿತು.

ಬೆಳಿಗ್ಗೆ 11ಕ್ಕೆ ನಡೆಯಲಿರುವ ‘ಕಾರ್ಮಿಕ ಕಾಯ್ದೆಗಳು & ಕಾರ್ಮಿಕರ ಹಕ್ಕುಗಳು’ ಕುರಿತು ಸಂವಾದದಲ್ಲಿ ದಾವಣಗೆರೆಯ ಸಹಾಯಕ
ಆಯುಕ್ತರಾದ ಡಾ.ಅವಿನಾಶ್ ನಾಯಕ್ ವಿಷಯವನ್ನು ಮಂಡನೆ ಮಾಡಲಿದ್ದಾರೆ. ಆಲ್ ಇಂಡಿಯಾ ಪವರ್‍ಮೆನ್ಸ್ ಫೆಡರೇಷನ ರಾಜ್ಯ
ಕಾರ್ಯದರ್ಶಿ ಗಂಗಾಧರ ಬಡಿಗೇರ್, ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸೋಲಾರ್ ಮತ್ತು ವಿಂಡ್ ಎನರ್ಜಿ ಎಂಪ್ಲಾಯಿಸ್ ಯೂನಿಯನ್
ನ ಪ್ರಧಾನ ಕಾರ್ಯದರ್ಶಿಕಾ| ಮಂಜುನಾಥ ಕೈದಾಳ್ ವಹಿಸಲಿದ್ದಾರೆ. ಜಿಲ್ಲಾ ಅಧ್ಯಕ್ಷರಾದ ವೀರೇಶ್ನಾಯಕ್ ಹಾರಕನಹಾಳ್
ಉಪಾಧ್ಯಕ್ಷರಾದ ನಾಗರಾಜ್ ಹೆಚ್ ಭಾಗವಹಿಸಲಿದ್ದಾರೆ.

ಮದ್ಯಾಹ್ನ 12.30ಕ್ಕೆ ರಾಜ್ಯ ಮಟ್ಟದ ಸಮಾವೇಶ ನಡೆಯಲಿದ್ದು, ಉದ್ಘಾಟನೆಯನ್ನು ಆಲ್ ಇಂಡಿಯಾ ಪವರ ಮೆನ್ ಫೆಡರೇಷನ್ ಅಖಿಲ
ಭಾರತ ಅಧ್ಯಕ್ಷರಾದ ಕೆ ಸೋಮಶೇಖರ್ ನೇರೆವೇರಿಸಲಿದ್ದಾರೆ. ಕರ್ನಾಟಕ ರಾಜ್ಯ ಸೋಲಾರ್ ಮತ್ತು ವಿಂಡ್ ಎನರ್ಜಿಯ ಪ್ರಧಾನ
ಕಾರ್ಯದರ್ಶಿ ಮಂಜುನಾಥ ಕೈದಾಳ್ ಮುಖ್ಯ ಭಾಷಣಕಾರರಾಗಿರುವರು ಅಧ್ಯಕ್ಷತೆಯನ್ನು ಆಲ್ ಇಂಡಿಯಾ ಪವರ್ ಮೆನ್ಸ್
ಫೆಡರೇಷನ್‍ನ ರಾಜ್ಯ ಅಧ್ಯಕ್ಷರಾದ ಕಾ ವೀರೇಶ್‍ಎನ್‍ಎಸ್‍ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ವಿಂಡ್ ಎನರ್ಜಿ ಎಂಪ್ಲಾಯ್ಸ್ ಯೂನಿಯನ್
ಉಪಾಧ್ಯಕ್ಷರಾದ ರಂಗನಾಥ್ ಹಂಪನೂರು ಜಂಟಿ ಕಾರ್ಯದರ್ಶಿ ಲೋಕೇಶ್ ನೀರ್ತಡಿ ಭಾಗವಹಿಸಲಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿರುವ ವಿಂಡಮಿಲ್ ಮತ್ತು ಸೋಲಾರ್ ಎನರ್ಜಿ ಉತ್ಪಾದನಾ ಘಟಕಗಳ ಸಮಸ್ತ ಕಾರ್ಮಿಕ ಪ್ರತಿನಿಧಿಗಳು ಈ
ಸಮಾವೇಶದಲ್ಲಿ ಅತ್ಯಂತ ಸಕ್ರಿಯವಾಗಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಲು ಕರ್ನಾಟಕ ರಾಜ್ಯ ಸೋಲಾರ್ ಎನರ್ಜಿ
ಎಂಪ್ಲಾಯ್ಸ್ ಯೂನಿಯನ್ ಮತ್ತು ಕರ್ನಾಟಕ ರಾಜ್ಯ ವಿಂಡ್ ಎನರ್ಜಿ ಎಂಪ್ಲಾಯ್ ಯೂನಿಯನ್‍ಗಳು ಜಂಟಿಯಾಗಿ ಮನವಿ ಮಾಡುತ್ತವೆ.

Leave a Reply

Your email address will not be published. Required fields are marked *