ಡಿಸೆಂಬರ್ 22 ರಂದು ಹಸೆಮಣೆ ಏರಲಿದ್ದಾರೆ ಪಿ.ವಿ ಸಿಂಧು: ಬ್ಯಾಡ್ಮಿಂಟನ್ ತಾರೆ ಕೈ ಹಿಡಿಯುವ ಹುಡುಗ ಯಾರು?

ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಇದೇ ಡಿ.22 ರಂದು ಉದಯಪುರದಲ್ಲಿ ಹಸಮಣೆ ಏರಲಿದ್ದಾರೆ.

ಹೈದರಾಬಾದ್ ಮೂಲದ ಪೋಸಿಡೆಕ್ಸ್ ಟೆಕ್ನಾಲಜೀಸ್ ಎಂಬ ಖಾಸಗಿ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ವೆಂಕಟ ದತ್ತ ಸಾಯಿ ಎಂಬವರನ್ನು ವಿವಾಹವಾಗಲಿದ್ದಾರೆ. ಈ ಕುರಿತು ಸಿಂಧು ತಂದೆ ಪಿವಿ ರಮಣ ಮಾಹಿತಿ ನೀಡಿದ್ದು, ಡಿ.20 ರಿಂದ ಮದುವೆ ಶಾಸ್ತ್ರಗಳು ಶುರುವಾಗಲಿದೆ. ಡಿ.22 ರಂದು ಉದಯಪುರದಲ್ಲಿ ಮದುವೆ ನಡೆಯಲಿದೆ. ಎರಡು ಕುಟುಂಬಗಳ ಪರಸ್ಪರ ಒಪ್ಪಿಗೆಯಿಂದ ಮದುವೆ ನಡೆಯುತ್ತಿದ್ದು, ಒಟ್ಟು ಐದು ದಿನಗಳ ಕಾಲ ಮದುವೆ ಸಂಭ್ರಮ ನಡೆಯಲಿದೆ. ಇನ್ನೂ ಡಿ.24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಸಿಂಧು ಒಂದು ಚಿನ್ನದ ಪದಕ ಸೇರಿದಂತೆ ಒಟ್ಟು ಐದು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪಿ.ವಿ ಸಿಂಧು ಜನವರಿಯಲ್ಲಿ ಮತ್ತೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗೆ ಮರಳಲಿದ್ದು, ಮುಂಬರುವ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಮದುವೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಪಿವಿ ಸಿಂಧು ಹಾಗೂ ವೆಂಕಟ ದತ್ತ ಅವರ ಕುಟುಂಬದವರು ಪರಸ್ಪರ ಪರಿಚಿತರು. ಹೀಗಿದ್ದೂ ಕಳೆದ ಒಂದು ತಿಂಗಳ ಹಿಂದಷ್ಟೇ ಮದುವೆ ವಿಚಾರ ಅಂತಿಮವಾಗಿದೆ ಎಂದು ವರದಿಯಾಗಿದೆ. ಶಿಕ್ಷಣ ಪೂರ್ಣವಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕತ್ವ ಹೊಂದಿರುವ ಜೆಎಸ್‌ಡಬ್ಲ್ಯೂನಲ್ಲಿ ಇಂಟರ್ನ್ ಮತ್ತು ಆಂತರಿಕ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.

Source : https://www.kannadaprabha.com/sports/2024/Dec/03/pv-sindhu-to-get-married-this-month

Leave a Reply

Your email address will not be published. Required fields are marked *