ಫೆಂಗಲ್ ಚಂಡಮಾರುತದ ಎಫೆಕ್ಟ್: ಆಕಾಶದತ್ತ ಮುಖ ಮಾಡಿದ ತರಕಾರಿ ಬೆಲೆಗಳು!

  • ಫೆಂಗಲ್ ಚಂಡಮಾರುತದ ಪರಿಣಾಮ 4 ದಿನಗಳಿಂದ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣದಲ್ಲಿ ಅರ್ಧಕ್ಕೆ ಅರ್ಧದಷ್ಟು ಕಡಿಮೆಯಾಗಿದೆ.
  • ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣದಲ್ಲಿ ಅರ್ಧಕ್ಕೆ ಅರ್ಧದಷ್ಟು ಕಡಿಮೆಯಾಗಿರುವುದರಿಂದ ತರಕಾರಿ ರೇಟು ಒಂದರ ಬೆಲೆ ಎರಡಾಗಿದೆ.
  • ರೈತರಿಗೆ ಬೆಳೆದ ತರಕಾರಿಗಳನ್ನು ಮಾರಲು ಸಾಧ್ಯವಾಗುತ್ತಿಲ್ಲ. ಗ್ರಾಹಕರಿಗೆ ದಿನನಿತ್ಯದ ಅಗತ್ಯಕ್ಕೆ ತಕ್ಕಷ್ಟು ತರಕಾರಿಯನ್ನು ಕೊಳ್ಳಲಾಗುತ್ತಿಲ್ಲ.

Vegetable Prices Hike: ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಮಾರುಕಟ್ಟೆಗೆ ತರಕಾರಿಗಳು ಬರುತ್ತಿಲ್ಲ. ಹಾಗಾಗಿ ಸಹಜವಾಗಿ ತರಕಾರಿ ಬೆಲೆಗಳಲ್ಲಿ ಗಣನೀಯ ಏರಿಕೆಯಾಗಿದೆ. ತರಕಾರಿ ಬೆಲೆಗಳನ್ನು ಕೇಳಿ ಗ್ರಾಹಕ ಗರ ಬಡಿದಂತವನಾಗುತ್ತಿದ್ದಾನೆ.

ತುಂತುರು ಮಳೆ ನಿಲ್ಲುತ್ತಲೇ ಇಲ್ಲ. ಬಿಸಿಲು ಬರುತ್ತಿಲ್ಲ. ಚಳಿ ಹೆಚ್ಚಾಗಿದೆ, ತಂಡಿ ಗಾಳಿ ಹಿಂಸೆ ಕೊಡುತ್ತಿದೆ. ಶೀತ, ನೆಗಡಿ, ಜ್ವರಗಳು ಬಾಧಿಸತೊಡಗಿವೆ. ಫೆಂಗಲ್ ಚಂಡಮಾರುತದಿಂದ ಇವಿಷ್ಟೆಯಲ್ಲ ಸಮಸ್ಯೆ. ಜನಸಾಮಾನ್ಯರಿಗೆ ಪ್ರತಿನಿತ್ಯವೂ ಬೇಕಾಗುವ ತರಕಾರಿ ಬೆಲೆಗಳು ಆಕಾಶ ಏರಿ ಕುಳಿತಿವೆ. ಕಳೆದ ನಾಲ್ಕು ದಿನಗಳಿಂದ ತರಕಾರಿಗಳ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ಬೆಲೆ ಕೇಳಿದ ಗ್ರಾಹಕರಿಗೆ ಶಾಕ್ ಗೆ ಒಳಗಾಗುತ್ತಿದ್ದಾನೆ.

ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲೆಡೆ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಇದರಿಂದ ರೈತರಿಗೆ ತರಕಾರಿಗಳನ್ನು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣದಲ್ಲಿ ಅರ್ಧಕ್ಕೆ ಅರ್ಧದಷ್ಟು ಕಡಿಮೆಯಾಗಿದೆ. ಇದರಿಂದ ತರಕಾರಿ ಬೆಲೆ ಒಂದರ ಬೆಲೆ ಎರಡಾಗಿದೆ. ಗಗನಕ್ಕೇರಿರುವ ತರಕಾರಿ ಬೆಳೆಗಳನ್ನು ಕೇಳಿದ ಗ್ರಾಹಕರು ಸುಸ್ತಾಗಿ ಸುಧಾರಿಸಿಕೊಳ್ಳುವಂತಾಗಿದೆ. 

ರೈತರಿಗೆ ಬೆಳೆದ ತರಕಾರಿಗಳನ್ನು ಮಾರಲು ಸಾಧ್ಯವಾಗದ ಸಮಸ್ಯೆ. ಗ್ರಾಹಕರಿಗೆ ತಮ್ಮ ದಿನನಿತ್ಯದ ಅಗತ್ಯಕ್ಕೆ ತಕ್ಕಷ್ಟು ತರಕಾರಿಯನ್ನು ಕೊಳ್ಳಲಾಗದ ಪರಿಸ್ಥಿತಿ. ಒಟ್ಟಾರೆ ಫೆಂಗಲ್ ಚಂಡಮಾರುತದಿಂದಾಗಿ ನಾಲ್ಕು ದಿನದಿಂದ ಮಾರುಕಟ್ಟೆಗೆ ಬರುವ ತರಕಾರಿ ಕಡಿಮೆಯಾಗಿದ್ದು ಅದರ ಪರಿಣಾಮ ತರಕಾರಿ ಬೆಲೆಗಳು ಆಕಾಶ ಏರಿ ಕುಳಿತಿವೆ. 

ಯಾವ ತರಕಾರಿಗೆ ಎಷ್ಟು ಬೆಲೆ ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 

ತರಕಾರಿ ಹೆಸರುಕೆಜಿಗೆ ಎಷ್ಟು ರೂಪಾಯಿ
ಬೀಟ್ ರೋಟ್70-80 ರೂ.
ಬೀನ್ಸ್75-110 ರೂ. 
ಗ್ರೀನ್ ಕ್ಯಾಪ್ಸಿಕಂ62 ರೂ. 
ಯೆಲ್ಲೊ ಕ್ಯಾಪ್ಸಿಕಂ395 ರೂ. 
ರೆಡ್ ಕ್ಯಾಪ್ಸಿಕಂ395 ರೂ.
ಮೆಣಸಿನಕಾಯಿ62 ರೂ. 
ಕ್ಯಾರೆಟ್116 ರೂ. 
ಎಲೆಕೋಸು ರೆಡ್110 ರೂ. 
ಚೆರ್ರಿ ಟೊಮೆಟೊ220 ರೂ.
ಟೊಮೆಟೊ80 ರೂ.  
ಶುಂಠಿ160 ರೂ. 
ಬೆಂಡೆಕಾಯಿ75 ರೂ. 
ಈರುಳ್ಳಿ70-80 ರೂ.
ಬೆಳುಳ್ಳಿ530 ರೂ.
ಆಲೂಗಡ್ಡೆ60 ರೂ.

Source : https://zeenews.india.com/kannada/business/vegetable-prices-skyrocket-due-to-fengal-cyclone-effect-266988

Views: 0

Leave a Reply

Your email address will not be published. Required fields are marked *