
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 7 : ಮುಂಬರುವ ಜಿ.ಪಂ. ತಾ.ಪಂ. ಹಾಗೂ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿ ಅಧಿಕಾರವನ್ನು ಹಿಡಿಯಬೇಕಿದೆ ಇದಕ್ಕೆ ಕಾರ್ಯಕರ್ತರ ಸಹಾಯ, ಸಹಕಾರ ಅಗತ್ಯವಾಗಿದೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ
ತಿಳಿಸಿದರು.
ಚಿತ್ರದುರ್ಗ ನಗರಕ್ಕೆ ಭೇಟಿ ನೀಡಿದ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ
ಮಾತನಾಡಿದ ಅವರು, ಇತ್ತಿಚೆಗೆ ನಡೆದ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವನ್ನು ಸಾಧಿಸಿದೆ ಶಿಗ್ಗಾವಿ
ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಇತರೆ ಸಚಿವರ ಸಹಾಯ, ಹಾಗೂ
ಅಲ್ಲಿನ ಕಾರ್ಯಕರ್ತರ ಸಹಕಾರದಿಂದ ಗೆಲುವನ್ನು ಸಾಧಿಸಲಾಗಿದೆ. ಇಲ್ಲಿ ಸತತವಾಗಿ ಬಿಜೆಪಿ ಗೆಲುವನ್ನು ಸಾಧಿಸಲಾಗುತ್ತಿತು ಆದರೆ
ಈ ಬಾರಿ ಅಲ್ಲಿನ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡುವುದರ ಮೂಲಕ ಜಯವನ್ನು ತಂದು ಕೊಟ್ಟಿದ್ದಾರೆ ಎಂದರು.
ಸಚಿವರು ಯಾವುದೇ ಜಿಲ್ಲೆಗೆ ಭೇಟಿ ನೀಡಿದರು ಸಹಾ ಅಲ್ಲಿನ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವುದು ವಾಡಿಕೆಯಾಗಿದೆ ಇದೇ
ಮಾದರಿಯಲ್ಲಿ ನಾನು ಸಹಾ ಇಂದು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೇಟಿ ನೀಡಿದ್ದೇನೆ ಬಂದಾಗ ಅದ್ದೂರಿಯಾದ
ಸ್ವಾಗತವನ್ನು ನೀಡಿದ್ದೀರಾ ಇದಕ್ಕೆ ನಾನು ಅಬಾರಿಯಾಗಿದ್ದೇನೆ, ಇಲ್ಲಿ ಬಂದಾಗ ಪಕ್ಷದ ಅಧ್ಯಕ್ಷರ ಮುಖಂಡರ, ಕಾರ್ಯಕರ್ತರ
ಸಮಸ್ಯೆಯನ್ನು ಆಲಿಸಬೇಕು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು ಎನ್ನುವುದು ನನ್ನ ಆಸೆಯಾಗಿದೆ. ನಿಮ್ಮ ಸಮಸ್ಯೆಗಳನ್ನು
ಕೇಳಿ ನಮ್ಮ ಪಕ್ಷದ ವರಿಷ್ಠರ ಬಳಿ ಹೇಳಿ ಅದರ ಪರಿಹಾರಕ್ಕೆ ಕಂಡುಕೊಳ್ಳುವ ಪ್ರಯತ್ನವನ್ನು ಮಾಡಲಾಗುವುದು ಭರವಸೆಯನ್ನು
ನೀಡಿದರು.
ನಮ್ಮ ಸರ್ಕಾರ ಬಡವರಿಗಾಗಿ ಉತ್ತಮವಾದ ಯೋಜನೆಗಳನ್ನು ಜಾರಿ ಮಾಡುವುದರ ಮೂಲಕ ಉತ್ತಮವಾದ ಸರ್ಕಾರ ಎನ್ನುವಂತ
ಹೆಸರನ್ನು ಪಡೆಯಬೇಕಿದೆ. ಇದಕ್ಕೆ ನಿಮ್ಮೆಲ್ಲಾ ಸಹಕಾರ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ನಾವೆಲ್ಲಾ ಒಗ್ಗಟಾಗಿ ಇರಬೇಕು 2028ರಲ್ಲಿ
ಮತ್ತೋಮ್ಮೆ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ತರಬೇಕಿದೆ. ಗ್ಯಾರೆಂಟಿಯನ್ನು ಜನರಿಗಾಗಿ ನೀಡಲಾಗಿದೆ ರಾಜ್ಯದಲ್ಲಿ ಅಭೀವೃದ್ದಿಯನ್ನು
ಮಾಡಲಾಗುತ್ತಿದೆ. ಸಮಾಜಿಕ ನ್ಯಾಯವನ್ನು ನೀಡಲಾಗುತ್ತಿದೆ, ಈ ಹಿನ್ನಲೆಯಲ್ಲಿ ಮುಂಬರುವ ಜಿಪಂ. ತಾ.ಪಂ ಹಾಗೂ 2028ರ
ವಿಧಾನಸಭಾ ಚುನಾವಣೆಯಲ್ಲಿ ಎಲ್ಲರ ಆರ್ಶಿವಾದದಿಂದ ಗೆಲುವನ್ನು ಸಾಧಿಸಬೇಕಿದೆ ಎಂದರು.
ಶಾಸಕರಾದ ರಘುಮೂರ್ತಿ ಮಾತನಾಡಿ, ಸತೀಶ್ ಜಾರಕಿಹೊಳಿಯವರು ಯಾವುದೇ ಪ್ರಚಾರವನ್ನು ಬಯಸದೇ ತಮ್ಮ ಪಾಲಿನ
ಕೆಲಸವನ್ನು ಮಾಡುತ್ತಿದ್ದಾರೆ, ಇದರಿಂದ ಪಕ್ಷ ಪ್ರಗತಿಯನ್ನು ಹೊಂದಲು ಸಾಧ್ಯವಿದೆ. ಶಿಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವ
ಅವಕಾಶ ಇರಲಿಲ್ಲ ಆದರೆ ಸತೀಶ್ ರವರು ಅಲ್ಲಿಯ ಉಸ್ತುವಾರಿಯನ್ನು ಪಡೆದು ಅಲ್ಲಿ ಪಕ್ಷ ಗೆಲುವಿಗೆ ಸಹಕಾರಿಯಾಗಿದ್ದಾರೆ. ಎಂದರು.
ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ಮಾತನಾಡಿ, ಚಿತ್ರದುರ್ಗ, ನಾಯಕನಹಟ್ಟಿಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ
ಗೆಲುವನ್ನು ಸಾಧಿಸಿದೆ, ಇದಕ್ಕೆ ಪಕ್ಷದ ಕಾರ್ಯಕರ್ತರು ಕಾರಣರಾಗಿದ್ದಾರೆ. ಇದೇ ರೀತಿ ಮುಂದಿನ ತಾ.ಪಂ.,ಜಿ.ಪಂ.
ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವನ್ನು ಸಾಧಿಸಬೇಕಿದೆ ಎಂದು ತಿಳಿಸಿದರು.
ಡಿಸಿಸಿ ಅಧ್ಯಕ್ಷ ತಾಜ್‍ಪೀರ್, ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷರಾದ ಗೀತಾನಂದಿನಿಗೌಡ, ಜಿ.ಪಂ.ಮಾಜಿ
ಅಧ್ಯಕ್ಷರಾದ ಶಶಿಕಲಾ ಸುರೇಶ್ ಬಾಬು, ಮಾಜಿ ಸದಸ್ಯರಾದ ನರಸಿಂಹರಾಜು, ಸರ್ದಾರ್, ಪ್ರಸನ್ನಕುಮಾರ್, ಎನ್,ಡಿ.ಕುಮಾರ್, ಅಂಜನಪ್ಪ, ಕುಮಾರ್ ಗೌಡ, ಸಂಪತ್ ಕುಮಾರ್, ಗ್ಯಾರೆಂಟಿ ಅಧ್ಯಕ್ಷರಾದ ಶಿವಣ್ಣ, ಲಕ್ಷ್ಮೀಕಾಂತ ಸೇರಿದಂತೆ ಇತರರು
ಭಾಗವಹಿಸಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಕೋವಿಡ್‍ನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ
ನಡೆಯುತ್ತಿದೆ ಅದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಇದ್ದಾರೆ ಅದನ್ನು ನೋಡಿಕೊಳ್ಳುತ್ತಾರೆ ಎಂದು ಕೋವಿಡ್ ತನಿಖೆಯ ಬಗ್ಗೆ
ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದರ ಬಗ್ಗೆ ನಾನು ಏನು ಹೇಳುವುದಿಲ್ಲ ಇದಕ್ಕೆ ಸಂಬಂಧಪಟ್ಟವರೇ ಉತ್ತರವನ್ನು
ನೀಡಬೇಕಿದೆ. ಅಧಿಕಾರ ಹಂಚಿಕೆಯ ಬಗ್ಗೆ ಸಿದ್ದರಾಮಯ್ಯ, ಶಿವಕುಮಾರ್ ರವರ ಬಳಿಯೇ ಕೇಳ ಬೇಕಿದೆ ಎಂಬ ಉತ್ತರವನ್ನು
ರಾಜ್ಯದಲ್ಲಿ ಈಗ ಅಧಿಕಾರ ಹಂಚಿಕೆಯ ಬಗ್ಗೆ ಬಹಳಷ್ಟು ಮಾತುಗಳು ನಡೆಯುತ್ತಿವೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದರ ಬಗ್ಗೆ ನನ್ನ
ಕೇಳಿದರೆ ಏನು ಹೇಳಬೇಕು ನಾನು ಇದಕ್ಕೆ ಸಂಬಂಧಿಸಿದವನ್ನಲ್ಲ, ಒಂದು ಮನೆ, ಪಕ್ಷ ಎಂದರೆ ಈ ರೀತಿಯಾದ ವಾತಾವರಣ
ಇರುವುದು ಸ್ವಾಭಾವಿಕ, ಇದರಲ್ಲಿ ಆಶ್ವರ್ಯವೇನೇಲ್ಲ, ಮುಂದೆ ಎಲ್ಲಾ ಸರಿ ಹೋಗುತ್ತದೆ ಎಂದರು.
ಈ ಭಾರಿಯ ಮುಖ್ಯಮಂತ್ರಿ ರೇಸ್‍ನಲ್ಲಿ ನಾನಿಲ್ಲ, ನನ್ನ ಗುರಿ ಏನ್ನಿದ್ದರೂ 2028ರ ವಿಧಾನಸಭಾ ಚುನಾವಣೆಯಲ್ಲಿ ಪ್ರಯತ್ನ
ಮಾಡುತ್ತೇನೆ, ಈಗ ಇದರಲ್ಲಿ ನನ್ನ ಪಾತ್ರ ಇಲ್ಲ ಎಂದ ಸತೀಶ್‍ರವರು, ನಮಗೂ ಇದಕ್ಕೆ ಸಂಬಂಧ ಇಲ್ಲ, ನಮ್ಮ ಬೆಂಬಲ ಏನ್ನಿದ್ದರೂ
ಹೈಕಮಾಂಡಿಗೆ, ಬಳ್ಳಾರಿಯ ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಾಗುತ್ತಿದೆ. ಇದರಲ್ಲಿ ಯಾರೂ ಸಹಾ
ರಾಜೀನಾಮೆಯನ್ನು ನೀಡುವ ಪ್ರಮಯ ಬರುವುದಿಲ್ಲ ರಾಜೀನಾಮೆ ನೀಡುವುದಾದರೆ ರೈಲ್ವೆ ಅಫಘಾತ ಪ್ರಕರಣದಲ್ಲಿ ಪ್ರಧಾನ
ಮಂತ್ರಿಗಳು ಈಗ ಹಲವಾರು ಬಾರಿ ರಾಜೀನಾಮೆಯನ್ನು ನೀಡಬೇಕಿತ್ತು ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು ರಾಜೀನಾಮೆಯೇ
ಪರಿಹಾರವಲ್ಲ ಎಂದು ಉತ್ತರಿಸಿ ಆಗಿರುವ ತಪ್ಪನ್ನು ಸರಿಮಾಡುವ ಕಾರ್ಯವನ್ನು ಮಾಡಬೇಕಿದೆ ಎಂದರು.