ಚಿತ್ರದುರ್ಗ| ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾರವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 11: ಕರ್ನಾಟಕ ರಾಜ್ಯಕ್ಕೆ ತನ್ನದೆ ಆದ ನಾಡಗೀತೆ ಇರಲಿಲ್ಲ, ಯಾವುದೇ ಸರ್ಕಾರದ ಕಾರ್ಯಕ್ರಮದಲ್ಲಿ ರಾಷ್ಟ್ರ ಗೀತೆಯನ್ನು ಮಾತ್ರ ಹಾಡಲಾಗುತ್ತಿತ್ತು, ಈ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣರವರು ನಮ್ಮ ರಾಜ್ಯಕ್ಕೂ ನಾಡಗೀತೆ ಇರಬೇಕೆಂದು
ಕುವೆಂಪುರವರ ಜೈ ಭಾರತ ಜನನಿಯ ತನುಜಾತೆ ಎಂಬ ಗೀತೆಯನ್ನು ನಾಡಗೀತೆಯನ್ನಾಗಿ ನೀಡಿದ ವ್ಯಕ್ತಿ ಎಸ್.ಎಂಕೃಷ್ಣ ರವರು
ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು, ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ, ಕೆಪಿಸಿಸಿಯ ಮಾಜಿ ಅಧ್ಯಕ್ಷರಾದ
ಎಸ್.ಎಂ.ಕೃಷ್ಣಾರವರಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ನಮ್ಮ
ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್‍ನಿಂದ ಹೊರ ಹೋದವರಿಗೆ ಇದೇ ಮೊದಲ ಬಾರಿಗೆ ಶ್ರದ್ದಾಂಜಲಿಯನ್ನು ಹಮ್ಮಿಕೊಂಡಿರುವುದೆಂದರೆ ಅದು ಎಸ್.ಎಂ.ಕೃಷ್ಣರವರಿಗೆ ಮಾತ್ರ ಇದು ಇತಿಹಾಸವಾಗಿದೆ. ಅವರು ತಮ್ಮ ಜೀವಿತಾವಧಿಯಲ್ಲಿ ಬಹುತೇಕ ಸಮಯವನ್ನು ಕಾಂಗ್ರೆಸ್‍ನಲ್ಲಿಯೇ ಕಳೆದಿದ್ದಾರೆ, ಶಾಸಕರಾಗಿ ಸಚಿವರಾಗಿ ಮುಖ್ಯಮಂತ್ರಿಗಳಾಗಿ, ವಿಧಾನ ಪರಿಷತ್, ಲೋಕಸಭೆ, ರಾಜ್ಯ ಸಭೆಯ ಸದಸ್ಯರಾಗಿ, ಕೇಂದ್ರ ಸಚಿವರಾಗಿ ರಾಜ್ಯಪಾಲರಾಗಿ ಸೇವೆಯನ್ನು ಸಲ್ಲಿಸಿದ್ದಾರೆ ಇದ್ದೇಲ್ಲಾ ಕಾಂಗ್ರೆಸ್‍ನಲ್ಲಿ ಇದ್ದಾಗಲೇ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೇ ಕೃಷ್ಣರವರು ವಿವಿಧ ರೀತಿಯ ಕೂಡುಗೆಯನ್ನು ರಾಜ್ಯಕ್ಕೆ ಮತ್ತು ದೇಶಕ್ಕೆ ನೀಡಿದ್ದಾರೆ. ಕಾಂಗ್ರೆಸ್‍ನಲ್ಲಿ
ಯಾತ್ರೆಯ ಸಂಸ್ಕøತಿ ಇರಲಿಲ್ಲ ಕೃಷ್ಣ ರವರು ಪಂಚಾಜನ್ಯ ಯಾತ್ರೆಯನ್ನು ನಡೆಸುವುದರ ಮೂಲಕ ಯಾತ್ರೆಯ ಸಂಸ್ಕøತಿಯನ್ನು
ಪ್ರಾರಂಭ ಮಾಡಿದರು. ಇದ್ದಲ್ಲದೆ ಬೆಂಗಳೂರು ಅಂತರಾಷ್ರೆಈಯ ಮಟ್ಟದಲ್ಲಿ ಬೆಳೆಯಬೇಕೆಂದು ನೂತನವಾಗಿ ವಿಮಾನ
ನಿಲ್ದಾಣವನ್ನು ನಿರ್ಮಾಣ ಮಾಡಿ ಇಲ್ಲಿ ಬೇರೆ ದೇಶಗಳಿಂದ ವಿಮಾನ ಬರುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕೃಷ್ಣ
ಮಾರ್ಗದರ್ಶನದಲ್ಲಿ ಇಂದಿನ ನಮ್ಮ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಬೆಳದಿದ್ದಾರೆ, ಅವರು ಮಾಡಿದ ಕಾರ್ಯಕ್ರಮಗಳು
ನಮ್ಮಗೆ ದಾರಿ ದೀಪವಾಗಿದೆ ಇದರ ಮಾರ್ಗದಲ್ಲಿ ನಾವೇಲ್ಲರು ನಡೆಯಬೇಕಿದೆ ಎಂದು ತಿಳಿಸಿದ ಅವರು, ನಾನು ಚಿತ್ರದುರ್ಗದಲ್ಲಿ
ಕಾಂಗ್ರೆಸ್ ಪಕ್ಷದ ಟೀಕೇಟ್ ಪಡೆದು ಸ್ಫರ್ದೆ ಮಾಡಿದ ಸಮಯದಲ್ಲಿ ಕೃಷ್ಣರವರನ್ನು ಬೇಟಿ ಮಾಡಿದ್ದೇ ನಮ್ಮ ಅಜ್ಜರವರ ನೆನೆಪನ್ನು
ಹೇಳಿ ನಾನು ಅವರ ಮೋಮ್ಮಗ ಎಂದು ಹೇಳಿದ್ದೇ ಎಂದು ತಾಜ್ ಪೀರ್ ತಿಳಿಸಿದರು.

ಡಿಸಿಸಿ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ ಮಾತನಾಡಿ ಕೃಷ್ಣರವರು ಓದಲು ಅಮೇರಿಕಾಕೆ ಹೋಗಿದ್ದರು ಅಲ್ಲಿ ಶಿಕ್ಷಣವನ್ನು
ಕಲಿಯುತ್ತಿರುವ ಸಮಯದಲ್ಲಿ ಕೆನಡಿಯವರ ಅಧ್ಯಕ್ಷೀಯ ಚುನಾವಣೆಯಲ್ಲಿ ಇವರು ಸಹಾಯವನ್ನು ಮಾಡಿದ್ದರು. ಇವರು ಶಿಕ್ಷಣವನ್ನು
ಕಲಿತು ಅಮೆರಿಕಾದಿಂದ ವಾಪಾಸ್ಸ ರಾಜ್ಯಕ್ಕೆ ಬರದೇ ಅಲ್ಲೇ ಇದ್ದಿದ್ದರೆ ಅಮೆರಿಕಾದ ಅಧ್ಯಕ್ಷರಾಗುವ ಅವಕಾಶ ಒದಗಿ ಬರುತ್ತಿತ್ತು
ಎಂದು ತಿಳಿಸಿ, ಮುಖ್ಯಮಂತ್ರಿಗಳಾದ ಮೇಲೆ ರಾಜ್ಯದಲ್ಲಿ ಉತ್ತಮವಾಧ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ
ಜನಪ್ರಿಯತೆಯನ್ನು ಗಳಿಸಿದರು. ಈಗ ಪಹಣಿಯನ್ನು ಗಣಕೀಕರಣದಲ್ಲಿ ಪಡೆಯಲು ಕೃಷ್ಣರವರ ಕೊಡುಗೆ ಅನನ್ಯವಾಗಿದೆ ಎಂದು
ತಿಳಿಸಿದರು.

ಸರ್ಕಾರದ ಪಂಚ ಗ್ಯಾರೆಂಟಿಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಶಿವಣ್ಣ ಮಾತನಾಡಿ, ಕೃಷ್ಣರವರು ಸರ್ವ ಪಕ್ಷದವರಿಗೂ ಸಹಾ
ಪ್ರೀತಿಗೆ ಪಾತ್ರರಾಗಿದ್ದರು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರ ಮೂಲಕ ಉತ್ತಮವಾದ ಆಡಳಿತವನ್ನು ನೀಡಿದ್ದರು. ಇವರ
ನಿಧನ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೂ ಸಹಾ ನಷ್ಠವಾಗಿದೆ, ಯಶಶ್ವಿನಿ, ಮಕ್ಕಳಿಗೆ ಬಿಸಿಯೂಟ, ಬರಗಾಲ, ಕೂಲಿಗಾಗಿ ಕಾಳು
ಸೇರಿದಂತೆ ವಿವಿಧ ರೀತಿಯ ಯೋಜನೆ ಗಳನ್ನು ಜಾರಿ ಮಾಡಿದರು. ರಾಜ್‍ಕುಮಾರ್ ಅಪಹರಣವನ್ನು ಯಶ್ವಸಿಯಾಗಿ

ನಿರ್ವಹಣೆಯನ್ನು ಮಾಡುವುದರ ಮೂಲಕ ಅವರನ್ನು ವೀರಪ್ಪ ಕಪಿ ಮುಷ್ಠಿಯಿಂದ ಬಿಡುಗಡೆ ಮಾಡಿಸಿದ ಕೀರ್ತಿ ಇವರಿಗೆ ಸಲುತ್ತದೆ.
ವಿದೇಶಾಂಗ ಸಚಿವರಾಗಿ ದೇಶ ಉನ್ನತ ಸ್ಥಾನಕ್ಕೆ ಏರಲು ಸಹಾಯವನ್ನು ಮಾಡಿದರು. ಇವರು ನಮ್ಮ ದೇಶದಲ್ಲಿ ಮಾತ್ರವಲ್ಲ
ಪ್ರಪಂಚದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಯಾರಾದರೂ ದೊಡ್ಡ ವ್ಯಕ್ತಿಗಳು ಸಾವನ್ನಪ್ಪಿದ್ದರೆ ಆವರ
ಗುಣಗಾನವನ್ನು ಅವರು ಸತ್ತ ಮೇಲೆ ಮಾಡದೇ ಅವರು ಬದುಕಿದ್ಧಾಗಲೇ ಮಾಡಿದರೆ ಅವರು ಸಹಾ ನೋಡಿ ಸಂತೋಷ ಪಡುತ್ತಾರೆ
ಎಂದು ತಿಳಿಸಿದರು.

ಜಿ.ಪಂ.ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರಕಾಶ ಮೂರ್ತಿ ಮಾತನಾಡಿ, ಇಂದು ನಡೆಯುತ್ತಿರುವ ಒಳ ಮೀಸಲಾತಿ ಜಾರಿ
ಹೋರಾಟ ಅಂದಿನ ಕೃಷ್ಣರವರ ಕಾಲದಲ್ಲಿಯೇ ಪ್ರಾರಂಭವಾಗಿತ್ತು ಅವರು ಸಹಾ ಒಳ ಮೀಸಲಾತಿಯ ಪರವಾಗಿ ಇದ್ದರು ಅದನ್ನು
ಜಾರಿ ಮಾಡಲು ಶ್ರಮವನ್ನು ಹಾಕಿದರು. ಸರಳ, ಸ್ವಾಭಿಮಾನಿಯಾಗಿದ್ದ ಅವರು ಪಕ್ಷವನ್ನು ಕಟ್ಟುವುದರ ಮೂಲಕ ರಾಜ್ಯದಲ್ಲಿ
ಕಾಂಗ್ರೆಸ್ ಪಕ್ಷ ಅಧಿಕಾರವನ್ನು ಹಿಡಿಯಲು ನೆರವಾಗಿದ್ದರು. ಅವರು ಕೂನೆಯ ಕಾಲದಲ್ಲಿ ಇಡಿ.ಐಟಿಗೆ ಹೆದರಿ ಬೇರೆ ಪಕ್ಷಕ್ಕೆ
ಸೇರ್ಪಡೆಯಾದವರು ಅವರು ಬೇರೆ ಪಕ್ಷಕ್ಕೆ ಹೋಗಿದ್ದರು ಸಹಾ ಅವರ ಮನಸ್ಸು ಕಾಂಗ್ರೆಸ್ ಪಕ್ಷದಲ್ಲಿತ್ತು ದೇಹ ಮಾತ್ರ ಬೇರೆ ಪಕ್ಷದಲ್ಲಿ
ಇತ್ತು ಎಂದರು.

ಕುಮಾರು ಗೌಡ ಮಾತನಾಡಿ, ಸರಳ, ಸಜ್ಜನ, ಸಂಸ್ಕøತಿಕ, ಕಲಾ ಪ್ರಿಯ, ಕ್ರೀಡಾಪಟು ರಾಜಕಾರಣಿಯಾಗಿ ಕೆಲಸವನ್ನು
ಮಾಡಿದ್ದಾರೆ. ಬೇರೆ ದೇಶದಲ್ಲಿ ಉನ್ನತವಾದ ವಿದ್ಯಾಭ್ಯಾಸವನ್ನು ಪಡೆಯುವುದರ ಮೂಲಕ ರಾಜ್ಯ ಹಾಗೂ ದೇಶದ ರಾಜಕೀಯದಲ್ಲಿ
ಹೆಸರನ್ನು ಮಾಡಿದರು. ವಿಕಾಸ ಸೌಧ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನಿರ್ಮಾಣ ಮಾಡಿ ಪ್ರಪಂಚಲ್ಲಿ ಅತಿ ದೊಡ್ಡದಾದ
ವಿಮಾನ ನಿಲ್ದಾಣ ಎಂಬ ಹೆಸರನ್ನು ಪಡೆಯಲು ನೆರವಾಗಿದ್ದಾರೆ. ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಇರಲ್ಲಿಲ ಇವರ ಕಾಲದಲ್ಲಿ
ಈ ಉಪ ಮುಖ್ಯಮಂತ್ರಿ ಹುದ್ದೆಯನ್ನು ನಿರ್ಮಾಣ ಮಾಡಿ ಅದೆ ಪ್ರಥಮ ಉಪ ಮುಖ್ಯಮಂತ್ರಿಯಾಗಿ ಎಸ್.ಎಂ.ಕೃಷ್ಣರವರು
ನೇಮಕವಾದರು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಮೈಲಾರಪ್ಪ, ಮುಖಂಡರುಗಳಾದ ವೆಂಕಟೇಶ್,
ಲಕ್ಷ್ಮೀಕಾಂತ್, ಮುದಸಿರ್, ಪಾಪಯ್ಯ, ಕಣ್ಮೇಶ್, ಚೋಟು ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *