ಚಿತ್ರದುರ್ಗ ಡಿ. 11 ಬೆಳಗಾವಿಯಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟದಲ್ಲಿ ಜಯ ಮೃತ್ಯುಂಜಯ ಸ್ವಾಮಿಜಿ ನೇತೃತ್ವದಲ್ಲಿ ನಡೆದಿದ್ದ ಮುತ್ತಿಗೆ ಕಾರ್ಯಕ್ರಮದಲ್ಲಿ ಸರಕಾರ ಮಾನವೀಯತೆ ಮರೆತ ಮೃಗಗಳಂತೆ ವರ್ತನೆ ಮಾಡಿದೆ ಸರ್ಕಾರ ಸಿ.ಎಂ, ಸಂಬಂಧಪಟ್ಟ ಸಚಿವರು
ಕರೆದು ಸ್ವಾಮಿಜಿ ಜೊತೆ ಮಾತನಾಡಬಹುದಿತ್ತು ಆದ್ರೆ ಅಮಾನವೀಯತೆಯಿಂದ ಲಾಠಿ ಚಾರ್ಜ್ ಮಾಡಿಸಿದೆ ಹಲವು ಅಮಾಯಕರ
ಕೈ, ಕಾಲು, ಮೂಳೆ ಮುರಿದಿದೆ ಸಾವಿರಾರು ಜನರಿಗೆ ಲಾಠಿ ಏಟು ಬಿದ್ದಿದೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ
ಸರ್ಕಾರದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮನೆಗೆ ಮಂಗಳವಾರ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಭೇಟಿ ಮಾಡಿ ಸೌಹಾರ್ದಯುತ
ಮಾತುಕತೆ ನಡೆಸಿದ ನಂತರ ಮಾಧ್ಯಮಗಳಿಗೆ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ ಇದೇ ಲಾಠಿ ಏಟು ನಿಮಗೆ ಬಿದ್ದಿದ್ರೆ ಹೇಗೆ
ಇರುತ್ತಿತ್ತು..? ಎಂದು ಸರಕಾರಕ್ಕೆ, ಸಿಎಂಗೆ ರೇಣುಕಾಚಾರ್ಯ ಪ್ರಶ್ನೆ ಮಾಡಿ ಕೂಡಲೇ ನೀವು ರಾಜಿನಾಮೆ ಕೊಡಬೇಕು, ಆ
ಸ್ಥಾನದಲ್ಲಿ ಮುಂದುವರೆಯಲು ನಿಮಗೆ ನೈತಿಕ ಹಕ್ಕಿಲ್ಲ ಯಡೆÀಯೂರಪ್ಪ ಸಿಎಂ ಇದ್ದಾಗ ಪ.ಮಚಮಸಾಲಿ ಸಮಾಜಕ್ಕೆ 2ಎ
ಮೀಸಲಾತಿ ನೀಡಿದ್ರು ಯಡೆÀಯೂರಪ್ಪ ಸಿಎಂ ಇದ್ದಾಗ ಪ್ರತಿಭಟನೆ ಹತ್ತಿಕ್ಕಲಿಲ್ಲ ಆದ್ರೆ ಈಗ ಅಧಿಕಾರಕ್ಕೆ ಬಂದ ನೀವು ಯಾಕೆ
ಮೀಸಲಾತಿ ನೀಡ್ತಿಲ್ಲ..? ಮೀಸಲಾತಿ ನೀಡುವ ಬದಲು ಶ್ರೀಗಳಿಗೆ ಸಿಎಂ ಸಿವಾಸದಲ್ಲಿ ಅಪಮಾನ ಮಾಡಿದ್ರಿ ಪಂಚಮಸಾಲಿ ವಿರೋಧಿ
ಅಂತಾ ಬಿಎಸ್ವೈ, ಬಿವೈವಿ ಮೇಲೆ ಅಪಪ್ರಚಾರ ಮಾಡಿದ್ರು ಎಂದು ಸರ್ಕಾರದ ಮೇಲೆ ಕಿಡಿ ಕಾರಿದರು.
ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ರಾಮ, ಹನುಮಾನ್, ಕೇಸರಿ ಕಂಡ್ರೆ ಈ ಸರ್ಕಾರಕ್ಕೆ ಆಗಲ್ಲ ಸಂಕಟ ಬಂದಾಗ
ವೆಂಕಟರಮಣ ಅಂತಾ ಸಿಎಂ ಚಾಮುಂಡಿ, ಸವದತ್ತಿ ಯಲ್ಲಮ್ಮನ ದರ್ಶನ ಪಡೆದು ಕುಂಕುಮ ಹಚ್ಚಿಕೊಂಡ್ರು ಸಿದ್ದರಾಮಯ್ಯನವರೇ
ನಿಮ್ಮ ತಂದೆತಾಯಿ ನಿಮಗೆ ದೇವರ ಹೆಸರಿಟ್ಟಿದ್ದಾರೆ ಅಂಥ ನೀವು ಹೋರಾಟ ಹತ್ತಿಕ್ಕಲು ಕ್ರೌರ್ಯ ಮೆರೆದಿದ್ದೀರಿ ಆದೇಶ ಮಾಡಿ
ಪೊಲೀಸರನ್ನು ಬಿಟ್ಟು ಹೊಡೆಸಿದ್ರಿ ನೈತಿಕ ಹೊಣೆ ಹೊತ್ತು ಗೃಹ ಸಚಿವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ ಅವರು,
ಶ್ರೀಗಳನ್ನು ಬಂಧಿಸಿ, ಅಮಾಯಕರ ಮೇಲೆ ಲಾಠಿಚಾರ್ಜ್ ಮಾಡಿಸಿದ್ರಿ ಈ ಸರ್ಕಾರ ತೊಲಗಬೇಕು ಅಂತಾ ನಾವು ಸಂಕಲ್ಪ
ಮಾಡ್ತೀವಿ ಕಾಂಗ್ರೆಸ್ ರೈತ ವಿರೋಧಿ, ಮಹಿಳಾ ವಿರೋಧಿ, ಹಿಂದೂ ವಿರೋಧಿ ಸರಕಾರ ಹಿಂದೂಗಳಿಗೆ, ಸ್ವಾಮಿಜಿಗಳಿಗೆ ರಕ್ಷಣೆ
ಇಲ್ಲಾ ಅಂದ್ರೆ ಹೇಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಗೃಹಮಂತ್ರಿ ಪರಮೇಶ್ವರ ವಿರುದ್ಧ ಆಕ್ರೋಶ ಭರಿತರಾಗಿ ಕಂಡಲ್ಲಿ
ಗುಂಡಿಕ್ಕಿ ಕೊಲ್ಲಬೇಕೆಂದು ಇವರ ಪಿತೂರಿ ಇತ್ತೇನೋ..!! ನಾಡಿನ ಪ್ರಜ್ಞಾವಂತ ಮತದಾರರು ಈ ಸರಕಾರಕ್ಕೆ ತಕ್ಕ ಪಾಠ ಕಲಸ್ತಾರೆ
2ಎ ಮೀಸಲಾತಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು. ಇದೇ ಸಂದರ್ಭದಲ್ಲಿ ಮಾಜಿ ಸಿ.ಎಂ ಎಸ್.ಎಂ. ಕೃಷ್ಣಗೆ ನಿಧನಕ್ಕೆ
ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಸಮಾಜದ ಮುಖಂಡರಾದ ಲೋಕಿಕೇರೆ ನಾಗರಾಜ್, ಮಾಡಳೂ
ಮಲ್ಲಿಕಾರ್ಜನ್, ಚಂದ್ರಶೇಖರ್ ಪೂಜಾರ್ ಭಾಗವಹಿಸಿದ್ದರು.