ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಇಂಟರ್ನ್‌ಶಿಪ್ ಗೆ ಅರ್ಜಿ ಆಹ್ವಾನ , ಇಲ್ಲಿದೆ ಮಾಹಿತಿ.

ಭಾರತ ಸರ್ಕಾರದ ಸಚಿವಾಲಯದಲ್ಲಿ ಇಂಟರ್ನ್‌ಶಿಪ್ ಪಡೆಯಲು ಅವಕಾಶವಿದ್ದು ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಭಾರತದ ಶ್ರೇಣಿ I ಅಲ್ಲದ ನಗರಗಳು ಮತ್ತು ಗ್ರಾಮೀಣ ಭಾಗಗಳ ವಿದ್ಯಾರ್ಥಿನಿಯರು, ಮಹಿಳಾ ವಿದ್ವಾಂಸರು, ಮಹಿಳಾ ಸಾಮಾಜಿಕ ಕಾರ್ಯಕರ್ತರು ಹಾಗೂ ಶಿಕ್ಷಕಿಯರಿಂದ ಇಂಟರ್ನ್‌ಶಿಪ್ ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಮೂಲಕ ಇಂಟರ್ನ್‌ಗಳ ಪ್ರತಿಭೆಯನ್ನು ಗುರುತಿಸುವುದು ಸಚಿವಾಲಯದ ಉದ್ದೇಶವಾಗಿದ್ದು ಇಂಟರ್ನ್‌ಗಳಿಗೆ ಸಚಿವಾಲಯದ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶ ಲಭಿಸಲಿದೆ. ಹೀಗಾಗಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಇಂಟರ್ನಶಿಪ್ ಗೆ ಅರ್ಜಿ ಸಲ್ಲಿಸಬಹುದು.

ಅರ್ಹತೆಗಳು

* ವಿದ್ಯಾರ್ಥಿನಿಯರು, ಮಹಿಳಾ ವಿದ್ವಾಂಸರು, ಮಹಿಳಾ ಸಾಮಾಜಿಕ ಕಾರ್ಯಕರ್ತರು ಮತ್ತು ಶಿಕ್ಷಕಿಯರು ಮಾತ್ರ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

* ಅಭ್ಯರ್ಥಿಯು ಯಾವುದೇ ವಿಶ್ವವಿದ್ಯಾಲಯ, ಶೈಕ್ಷಣಿಕ ಅಥವಾ ಶೈಕ್ಷಣಿಕೇತರ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿರುವುದು ಅವಶ್ಯಕ.

ಆಯ್ಕೆ ಪ್ರಕ್ರಿಯೆ

* ಆಯ್ಕೆ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಇಂಟರ್ನ್‌ಗಳ ಆಯ್ಕೆಯನ್ನು ಮಾಡಲಾಗುತ್ತದೆ.

* ಶಿಫಾರಸು ಮಾಡಿದ ಅಭ್ಯರ್ಥಿಗಳ ಪಟ್ಟಿಯು ಇಂಟರ್ನ್‌ಶಿಪ್ ಪೋರ್ಟಲ್‌ನಲ್ಲಿ ಹೆಸರನ್ನು ಪ್ರಕಟಿಸಲಲಾಗುತ್ತದೆ.

* ಇಂಟರ್ನ್‌ಶಿಪ್ ಒಮ್ಮೆ ಆಯ್ಕೆಯಾದ ಅಭ್ಯರ್ಥಿಯು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಇತರೆ ಸೌಲಭ್ಯಗಳು

ಸಚಿವಾಲಯದಲ್ಲಿ ಇಂಟರ್ನ್‌ಶಿಪ್ ಪಡೆಯುವ ಪ್ರತಿಯೊಬ್ಬ ಇಂಟರ್ನ್‌ಗೆ ಪ್ರತಿ ತಿಂಗಳು 20 ಸಾವಿರ ರೂ.ನೀಡಲಾಗುತ್ತದೆ. ಇಂಟರ್ನ್‌ಶಿಪ್ ಪಡೆಯುವಲ್ಲಿ ಪ್ರಯಾಣದ ವೆಚ್ಚವನ್ನು ಸಹ ಸಚಿವಾಲಯವೇ ಭರಿಸುತ್ತದೆ. ಹಾಸ್ಟೆಲ್ ಸೌಲಭ್ಯಗಳು, ಲಾಜಿಸ್ಟಿಕ್ಸ್ ಬೆಂಬಲ ಹಾಗೂ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲಾಗುತ್ತದೆ. ಅದಲ್ಲದೇ, ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಇಂಟರ್ನ್‌ಗಳಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಪ್ರಮುಖ ದಿನಾಂಕ

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 10, 2025

Source : https://tv9kannada.com/employment/ministry-of-wcd-internship-2025-paid-internship-opportunity-at-ministry-of-women-and-child-development-apply-by-january-10-kannada-news-siu-949035.html

Leave a Reply

Your email address will not be published. Required fields are marked *