
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 15: ದಿನಾಂಕ 16-12-2024ನೇ ಸೋಮವಾರ ನಗರದ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗುವುದು.
ಸಂಜೆ 7.00 ಗಂಟೆಗೆ ದೀಪಾರಾಧನೆ ನಂತರ ಶ್ರೀ ನೀಲಕಂಠೇಶ್ವರಸ್ವಾಮಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ಜರಗುತ್ತದೆ. ಮೆರವಣಿಗೆಯು ದೇವಸ್ಥಾನದಿಂದ ಗಾಂಧಿ ವೃತ್ತದ ವರೆಗೆ ನಡೆಯುತ್ತದೆ. ಅಲ್ಲಿಂದ ಬಂದ ನಂತರ ಅಷ್ಟೋತ್ತರ ಬಿಲ್ವಾರ್ಜನೆ ಹಾಗೂ ಮಹಾ ಮಂಗಳಾರತಿ ಆಗುತ್ತದೆ. ನಂತರ ಪ್ರಸಾದ ವ್ಯವಸ್ಥೆವಿರುತ್ತದೆ ಎಂದು ವೀರಶೈವ ಸಮಾಜದ ಆಡಳಿತ ಮಂಡಳಿಯವರು ತಿಳಿಸಿರುತ್ತಾರೆ.

ಚಿತ್ರದುರ್ಗ ನಗರದ ನೀಲಕಂಟೇಶ್ವರ ಸ್ವಾಮಿಗೆ ಹುಣ್ಣಿಮೆಯ ಪ್ರಯುಕ್ತ ಇಂದು ಭಸ್ಮಾಲಂಕಾರವನ್ನು ಮಾಡಲಾಗಿತು.