Women’s Premier League (WPL 2025): ವುಮೆನ್ಸ್ ಪ್ರೀಮಿಯರ್ ಲೀಗ್ನ ಚೊಚ್ಚಲ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇನ್ನು ದ್ವಿತೀಯ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಈ ಟೂರ್ನಿಯ ಮೂರನೇ ಸೀಸನ್ಗಾಗಿ ಎಲ್ಲಾ ತಂಡಗಳು ರೂಪುಗೊಂಡಿವೆ.
ವುಮೆನ್ಸ್ ಪ್ರೀಮಿಯರ್ ಲೀಗ್ 2025ರ ಸೀಸನ್ಗಾಗಿ 5 ತಂಡಗಳು ಫೈನಲ್ ಆಗಿವೆ. ಡಿ.15 ರಂದು ಬೆಂಗಳೂರಿನಲ್ಲಿ ನಡೆದ WPL ಮಿನಿ ಹರಾಜಿನ ಮೂಲಕ ಒಟ್ಟು 19 ಆಟಗಾರ್ತಿಯರು ಐದು ತಂಡಗಳಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಎಲ್ಲಾ ಫ್ರಾಂಚೈಸಿಗಳು ಮೂರನೇ ಸೀಸನ್ಗಾಗಿ ಬಲಿಷ್ಠ ಪಡೆಯನ್ನು ರೂಪಿಸಿದೆ. ಅದರಂತೆ ಈ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯಲಿರುವ 5 ತಂಡಗಳಲ್ಲಿನ ಆಟಗಾರ್ತಿಯರ ಪಟ್ಟಿ ಈ ಕೆಳಗಿನಂತಿದೆ…