13,735 ಎಸ್‌ಬಿಐ ಕ್ಲರ್ಕ್ ಹುದ್ದೆಗೆ ಅಧಿಸೂಚನೆ: ಅರ್ಜಿ ವಿಧಾನ ಇಲ್ಲಿದೆ..

ಹೈಲೈಟ್ಸ್‌:

  • ಎಸ್‌ಬಿಐ ನೇಮಕ ಅಧಿಸೂಚನೆ.
  • ಒಟ್ಟು ಕ್ಲೆರಿಕಲ್ ಕೇಡರ್‌ನ 13,735 ಹುದ್ದೆಗಳಿವೆ.
  • ಪದವೀಧರರು ಅರ್ಜಿ ಸಲ್ಲಿಸಬಹುದು.

ಭಾರತೀಯ ಸ್ಟೇಟ್‌ ಬ್ಯಾಂಕ್‌ ತನ್ನ ಕಸ್ಟಮರ್ ಸಪೋರ್ಟ್‌ ಮತ್ತು ಸೇಲ್ಸ್‌ ವಿಭಾಗದಲ್ಲಿ ಕ್ಲೆರಿಕಲ್ ಕೇಡರ್‌ನ ಬರೋಬರಿ 13,735 ಜೂನಿಯರ್ ಅಸೋಸಿಯೇಟ್ಸ್‌ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಕರ್ನಾಟಕ ವಲಯದಲ್ಲಿ ಒಟ್ಟು 50 ಹುದ್ದೆಗಳಿದ್ದು, ಅರ್ಹ ಮತ್ತು ಆಸಕ್ತ ಪದವೀಧರ ಬ್ಯಾಂಕ್‌ ಉದ್ಯೋಗ ಆಕಾಂಕ್ಷಿಗಳು ಈಗಲೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ಕಂಪ್ಲೀಟ್ ಡೀಟೇಲ್ಸ್‌ ಇಲ್ಲಿದೆ ನೋಡಿ.

ಎಸ್‌ಬಿಐ ಈ ಕ್ಲರ್ಕ್‌ ಕೇಡರ್ ಹುದ್ದೆಗಳಿಗೆ ಪ್ರಿಲಿಮ್ಸ್‌ ಪರೀಕ್ಷೆಯನ್ನು ಫೆಬ್ರುವರಿ 2025 ರಲ್ಲಿ ನಡೆಸಲಿದೆ. ಹಾಗೂ ಮಾರ್ಚ್‌/ ಏಪ್ರಿಲ್ 2025 ರಲ್ಲಿ ಮೇನ್ಸ್‌ ಪರೀಕ್ಷೆ ನಡೆಸಲಿದೆ.

ನೇಮಕಾತಿ ಬ್ಯಾಂಕ್ಭಾರತೀಯ ಸ್ಟೇಟ್ ಬ್ಯಾಂಕ್
ಹುದ್ದೆ ಹೆಸರುಕ್ಲೆರಿಕಲ್ ಕೇಡರ್ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್‌ ಮತ್ತು ಸೇಲ್ಸ್‌)
ಹುದ್ದೆಗಳ ಸಂಖ್ಯೆ13,735
ಕರ್ನಾಟಕದಲ್ಲಿ ಜೂನಿಯರ್ ಅಸೋಸಿಯೇಟ್ಸ್‌ ಹುದ್ದೆ ಸಂಖ್ಯೆ50

ಎಸ್‌ಬಿಐ ಜೂನಿಯರ್ ಅಸೋಸಿಯೇಟ್ಸ್‌ ಗಳಿಗೆ ವಿದ್ಯಾರ್ಹತೆ

  • ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು.
  • ಯಾವುದೇ ಪದವಿಯ ಅಂತಿಮ ಸೆಮಿಸ್ಟರ್‌ / ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ ತಾತ್ಕಾಲಿಕವಾಗಿ ಆಯ್ಕೆಯಾದ ನಂತರ ಪದವಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಒಂದು ಸಲ್ಲಿಸಲು ವಿಫಲರಾದಲ್ಲಿ, ಅಂತಹವರ ಅಭ್ಯರ್ಥಿತನ ರದ್ದು ಮಾಡಲಾಗುತ್ತದೆ.

ಎಸ್‌ಬಿಐ ಜೂನಿಯರ್ ಅಸೋಸಿಯೇಟ್ಸ್‌ ವಯಸ್ಸಿನ ಅರ್ಹತೆಗಳು

  • ದಿನಾಂಕ 01-04-2024 ಕ್ಕೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 28 ವರ್ಷ ಮೀರಿರಬಾರದು.
  • ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಸರ್ಕಾರದ ಆದೇಶದಂತೆ ಅನ್ವಯವಾಗಲಿದೆ.
  • ಒಬಿಸಿ ವರ್ಗದವರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮ, ಎಸ್‌ಸಿ / ಎಸ್‌ಟಿ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಎಸ್‌ಬಿಐ ಜೂನಿಯರ್ ಅಸೋಸಿಯೇಟ್ಸ್‌ ವೇತನ ಶ್ರೇಣಿ : ರೂ.17900 – 47920.

ಎಸ್‌ಬಿಐ ಜೂನಿಯರ್ ಅಸೋಸಿಯೇಟ್ಸ್‌ ನೇಮಕ ಪ್ರಕ್ರಿಯೆ ಹೇಗಿರುತ್ತದೆ?

ಆನ್‌ಲೈನ್‌ ಪ್ರಿಲಿಮ್ಸ್‌ ಪರೀಕ್ಷೆ, ಮೇನ್ಸ್‌ ಪರೀಕ್ಷೆ, ಸ್ಥಳೀಯ ಭಾಷಾ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಪ್ರಿಲಿಮ್ಸ್‌ / ಮೇನ್ಸ್‌ ಪರೀಕ್ಷೆ ಅಂಕಗಳನ್ನು ಪರಿಗಣಿಸಿ ಮೆರಿಟ್‌ ಆಧಾರದ ಮೇಲೆ 1:3 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಇದರಲ್ಲಿ ಬ್ಯಾಂಕ್‌ ನಿಗದಿಪಡಿಸಿದ ಕನಿಷ್ಠ ಅಂಕಗಳನ್ನು ಅಭ್ಯರ್ಥಿಗಳು ಗಳಿಸಬೇಕು. ನಂತರ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ17-12-2024
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ07-01-2025
ಪ್ರಿಲಿಮ್ಸ್‌ ಪರೀಕ್ಷೆಯ ಸಂಭಾವ್ಯ ದಿನಾಂಕ2025 ರ ಫೆಬ್ರುವರಿ
ಮೇನ್ಸ್‌ ಪರೀಕ್ಷೆಯ ಸಂಭಾವ್ಯ ದಿನಾಂಕ2025 ರ ಮಾರ್ಚ್‌ / ಏಪ್ರಿಲ್

ಅಪ್ಲಿಕೇಶನ್‌ ಶುಲ್ಕ ವಿವರ
ಸಾಮಾನ್ಯ ಕೆಟಗರಿ / ಇತರೆ ಹಿಂದುಳಿದ ವರ್ಗಗಳು / EWS ಅಭ್ಯರ್ಥಿಗಳಿಗೆ ರೂ.750.
ಇತರೆ ಅಭ್ಯರ್ಥಿಗಳಿಗೆ ಪ್ರೋಸೆಸಿಂಗ್ ಶುಲ್ಕ ಮಾತ್ರ ಇರುತ್ತದೆ.
SBI Junior Associates Recruitment 2024 Notification

ಎಸ್‌ಬಿಐ ಜೂನಿಯರ್ ಅಸೋಸಿಯೇಟ್ಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ
– ಐಬಿಪಿಎಸ್‌ ವೆಬ್‌ ಪೋರ್ಟಲ್ ಎಸ್‌ಬಿಐ ಹುದ್ದೆಯ ಡೈರೆಕ್ಟ್‌ ಲಿಂಕ್ https://ibpsonline.ibps.in/sbidrjadec24/ ಕ್ಲಿಕ್ ಮಾಡಿ.
– ತೆರೆದ ವೆಬ್‌ಪುಟದಲ್ಲಿ ‘Click here For New Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ನಂತರ ಮತ್ತೊಂದು ವೆಬ್‌ಪುಟ ತೆರೆಯುತ್ತದೆ. ಇಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ನೀಡಿ.
– ಮೊದಲು ರಿಜಿಸ್ಟ್ರೇಷನ್‌ ಪಡೆದು, ನಂತರ ಮತ್ತೆ ಅರ್ಜಿ ಸಲ್ಲಿಸಿ.

job description

titleಜೂನಿಯರ್ ಅಸೋಸಿಯೇಟ್
descriptionಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಧಿಸೂಚನೆ
dateposted2024-12-16
validthrough2025-01-07
employmenttypeFULL_TIME
industryಬ್ಯಾಂಕ್ ಉದ್ಯೋಗ
salaryINR 17900 to 47920 /month

skills and education

skills
qualificationsಪದವಿ
experiencerequirements0 Years

hiringorganization

organization nameಭಾರತೀಯ ಸ್ಟೇಟ್‌ ಬ್ಯಾಂಕ್
Website URLhttps://sbi.co.in
organization logo

joblocation

streetaddressದೇಶದ 15 ಎಸ್‌ಬಿಐ ವೃತ್ತಗಳಲ್ಲಿ ನೇಮಕ
addresslocalityಕರ್ನಾಟಕದಲ್ಲಿಯೂ ಉದ್ಯೋಗ
addressregionಕರ್ನಾಟಕ
postalcode560001
addresscountryIND

Source : https://vijaykarnataka.com/jobs/bank-jobs/state-bank-of-india-junior-associates-recruitment-2025-apply-online-for-13735-vacancy/articleshow/116385657.cms

Leave a Reply

Your email address will not be published. Required fields are marked *