384 ಕೆಎಎಸ್ ಹುದ್ದೆಗಳ ಮರು ಪರೀಕ್ಷೆಗೆ ದಿನಾಂಕ ನಿಗದಿ: ಒಂದೇ ದಿನ ಎರಡು ಪೇಪರ್.

ಬೆಂಗಳೂರು, ಡಿಸೆಂಬರ್​ 18: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗವು (KPSC) ಗೆಜೆಟೆಡ್ ಪ್ರೊಬೇಷನ್ ಅಡಿಯಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಲ್ಲಿ 384 ಹುದ್ದೆಗಳ ನೇಮಕಾತಿಗಾಗಿ ಮರು ಪರೀಕ್ಷೆಯನ್ನು ಡಿಸೆಂಬರ್ 29 ರಂದು ಕರ್ನಾಟಕ ಆಡಳಿತ ಸೇವೆಗಳ (ಕೆಎಎಸ್) ಪರೀಕ್ಷೆಯನ್ನು ನಡೆಸಲು ಸಜ್ಜಾಗಿದೆ. ಇಂದು ದಿನಾಂಕ ಪ್ರಕಟವಾಗಿದೆ. ವಿವಿಧ ಇಲಾಖೆಗಳಲ್ಲಿ ತಹಸೀಲ್ದಾರ್, ಸಹಾಯಕ ನಿರ್ದೇಶಕರು ಮತ್ತು ಇತರ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಒಂದೇ ದಿನ ಎರಡು ಪರೀಕ್ಷೆ 

ಕನ್ನಡ ಭಾಷಾಂತರ ಎಡವಟ್ಟಿನಿಂದ ಕೆಎಎಸ್ ಪರೀಕ್ಷೆ ರದ್ದುಗೊಂಡಿತ್ತು. ಆದರೆ ಸದ್ಯ ಡಿಸೆಂಬರ್ 29ರಂದು ಮರು ಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ನಿರ್ಧರಿಸಿದೆ. ಡಿ.29ರಂದು ಒಂದೇ ದಿನ ಪೇಪರ್‌-1, ಪೇಪರ್‌-2 ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಪೇಪರ್‌-1 ಪರೀಕ್ಷೆ ನಡೆದರೆ, ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆವರೆಗೆ ಪೇಪರ್‌-2 ಪರೀಕ್ಷೆ ನಡೆಯಲಿದೆ.

ಈ ಕೆಪಿಎಸ್​ಸಿ ಒಟ್ಟು ಹುದ್ದೆಗಳ ನೇಮಕಾತಿಗಾಗಿ ಪ್ರಾಥಮಿಕ ಪರೀಕ್ಷೆಗಳನ್ನು ಇದೇ ವರ್ಷ ಆಗಸ್ಟ್​ನಲ್ಲಿ ನಡೆಸಲಾಗಿತ್ತು. ಆದರೆ ಆ ದಿನದ ಪ್ರಶ್ನೆ ಪತ್ರಿಕೆಯನ್ನು ಭಾಷಾಂತರ ಮಾಡಲಾಗಿದೆ ಎಂಬ ಸುದ್ದಿ ಮತ್ತು ಸ್ಕ್ರೀನ್ ಶಾಟ್​​ಗಳನ್ನು ಎಲ್ಲೆಡೆ ಹರಿದಾಡಿದ್ದವು.

ಇದರಿಂದ ಕೆಪಿಎಸ್​ಸಿ ವ್ಯಾಪಕ ಟೀಕೆ ಗುರಿಯಾಗುವಂತಾಗಿತ್ತು. ಬಳಿಕ ಸಿಎಂ ಸಿದ್ದರಾಮಯ್ಯ ಮರು ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದರು. ಅದರ ಬೆನ್ನೆಲ್ಲೇ ಮರು ಪರೀಕ್ಷೆಯ ದಿನಾಂಕವನ್ನು ಡಿಸೆಂಬರ್​ 29ರಂದು ನಿಗದಿ ಮಾಡಲಾಗಿತ್ತು.

ಈ ಬಗ್ಗೆ ಕೆಪಿಎಸ್​ಸಿ ಟ್ವೀಟ್ ಕೂಡ ಮಾಡಿತ್ತು. 2023-24ನೇ ಸಾಲಿನ ಗೆಜ಼ೆಟೆಡ್‌ ಪ್ರೊಬೆಷನರ್ಸ್‌ ಗ್ರೂಪ್‌-ಎ ಮತ್ತು ಗ್ರೂಪ್‌-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಮರುಪರೀಕ್ಷೆಯನ್ನು ದಿ:29.12.2024ರಂದು ನಡೆಸಲು ನಿಗದಿಪಡಿಸಿ ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸದರಿ ಪರೀಕ್ಷೆಗೆ ಎಲ್ಲಾ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗುತ್ತಿದೆ.

Source : https://tv9kannada.com/employment/kpsc-kas-exam-rescheduled-384-group-a-and-b-posts-december-29th-karnataka-news-in-kannada-ggs-951884.html

Leave a Reply

Your email address will not be published. Required fields are marked *