ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಬಿ.ಟಿ.ಜಗದೀಶ್ ಆಯ್ಕೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 26: ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜಕ್ಕೆ 2025-26 ರಿಂದ 2029-30 ನೇ ಸಾಲಿನವರೆಗೆ ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಅದ್ಯಕ್ಷರಾಗಿ ಬಿ.ಟಿ.ಜಗದೀಶ್ ಆಯ್ಕೆಯಾಗಿದ್ದಾರೆ ಎಂದು ಚಿತ್ರದುರ್ಗ, ತಾಲ್ಲೂಕು ಸಹಾಯಕ ಕೃಷಿ
ನಿರ್ದೇಶಕರಾದ ಹೆಚ್. ಕೆ. ರಾಮಕೃಷ್ಣ ತಿಳಿಸಿದ್ದಾರೆ.

2025-26 ರಿಂದ 2029-30 ನೇ ಸಾಲಿನ 5 ವಷರ್Àಗಳ ಅವಧಿಗೆ ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜದ ಚುನಾವಣೆಯನ್ನು
ಡಿ.15 ರಂದು ನೆಡೆಸಿದ್ದು, ಈ ಚುನಾವಣೆಯಲ್ಲಿ 14 ಸದಸ್ಯರುಗಳಾದ ಸತೀಶ್ ಬಿನ್ ಹೆಚ್.ಮುರಿಗೇಂದ್ರಪ್ಪ, ಶ್ರೀಮತಿ ಪಾರ್ವತಮ್ಮ
ಕೋಂ ಲೇಟ್ ಅಜ್ಜಪ್ಪ, ಬಿ.ಟಿ.ಜಗದೀಶ್ ಬಿನ್ ಲೇಟ್ ಬಿ.ಆರ್.ತಿಪ್ಪೇಸ್ವಾವಿ, ಎಸ್.ಎಲ್.ನಾಗರಾಜು ಬಿನ್ ಲಿಂಗಪ್ಪ, ಸಿ.ಯೋಗರಾಜ
ಬಿನ್ ಚಂದ್ರಪ್ಪ,.ಎಂ.ಮಹೇಶ್ವರಪ್ಪ ಬಿನ್ ಲೇಟ್ ಮಹಾಲಿಂಗಪ್ಪ, ಗಂಗಾಧರ ಬಿನ್ ಗೋವಿಂದಪ್ಪ, ಕೆ.ಪ್ರಾಣೇಶ್ ಬಿನ್ ಕರಿಯಲ್ಲಪ್ಪ,
ಆರ್.ಶಶಿಧರ್ ಬಿನ್ ಆರ್.ಆರ್.ರಾಮಕೃಷ್ಣಯ್ಯ, ಶ್ರೀಮತಿ ಮಂಜುಳಮ್ಮ ಕೋಂ ಲೇ.ಲಕ್ಷ್ಮಣಪ್ಪ, ಎಂ.ಪರಮೇಶ್ ಬಿನ್ ಲೇ.
ಮುರಿಗೆಪ್ಪ, ಎನ್.ಪರಶುರಾಮ್ ಬಿನ್ ಜಿ.ನಿಂಗಪ್ಪ, ಎನ್.ಹನುಮಂತರೆಡ್ಡಿ ಬಿನ್ ಎನ್.ಸಿಂಪ್ರಯ್ಯ, ಶಂಭುಲಿಂಗಪ್ಪ ಸಿ ಬಿನ್ ಗೌಡ್ರು
ಎಂ.ಚನ್ನಬಸಪ್ಪ ರವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಡಿ.26ರ ಇಂದು ಬೆಳಿಗ್ಗೆ ತಾಲ್ಲೂಕು ಕೃಷಿಕ ಸಮಾಜಕ್ಕೆ ಹೊಸದಾಗಿ ಪದಾಧಿಕಾರಿಗಳ ಆಯ್ಕೆ ಸಭೆಯನ್ನು, ಜಂಟಿ ಕೃಷಿ ನಿರ್ದೇಶಕರ
ಕಛೇರಿಯಲ್ಲಿ ಏರ್ಪಡಿಸಿದ್ದು ಈ ಸಭೆಯನ್ನು ಹಂಗಾಮಿ ಅಧ್ಯಕ್ಷರಾಗಿ ಹನುಮಂತರೆಡ್ಡಿ ಇವರು ವಹಿಸಿದ್ದು, ತಾಲ್ಲೂಕು ಕೃಷಿಕ
ಸಮಾಜದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಬಿ.ಟಿ.ಜಗದೀ± ಉಪಾಧ್ಯಕ್ಷರಾಗಿ ಎಂ.ಸತೀಶ್ ಪ್ರಧಾನ ಕಾರ್ಯದರ್ಶಿಯಾಗಿ ಕೆ.
ಪ್ರಾಣೇಶ್ ಖಜಾಂಜಿಯಾಗಿ ಪಟೇಲ್ ಸಿ.ಶಂಭುಲಿಂಗಪ್ಪ ಜಿಲ್ಲಾ ಪ್ರತಿನಿಧಿಯಾಗಿ ಆರ್.ಶಶಿಧರ್ ಬಿನ್ ಆರ್.ಆರ್. ರಾಮಕೃಷ್ಣಯ್ಯ
ಇವರುಗಳನ್ನು 2025-26 ರಿಂದ 2029-30 ನೇ ಸಾಲಿನವರೆಗೆ ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ
ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆಯಾಗಿರುತ್ತಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *