ಅಲೆಮಾರಿ ಪಟ್ಟಿಯಿಂದ ಕೊರಚರನ್ನು ಹೊರಗಿಡುವ: ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಖಂಡನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 26 ಅಲೆಮಾರಿ ಪಟ್ಟಿಯಿಂದ ಕೊರಚರನ್ನು ಹೊರಗಿಡುವ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಖಂಡಿಸಿ ಅವರ ರಾಜೀನಾಮೆಗೆ ಅಖಿಲ ಕರ್ನಾಟಕ ಕೊರಚ ಸಮುದಾಯ ಸಂಘಟನೆಗಳ ಆಗ್ರಹ ಪಡಿಸಿದೆ.

ಚಿತ್ರದುರ್ಗದಲ್ಲಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೂರಚ ಮಹಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ
ವೈ.ಕುಮಾರ್ ಕಳೆದ ವಾರ ಬೆಳಗಾವಿ ಸುವರ್ಣಸೌಧದಲ್ಲಿ ಕಲಾಪ ನಡೆಯುವ ವೇಳೆ ಸುವರ್ಣ ಸೌಧದ ಹೊರಗಡೆ ಪ್ರತಿಭಟನೆ
ನಡೆಸುತ್ತಿದ್ದ ಅಲೆಮಾರಿ ಸಂಘಟನೆಯೊಂದರ ಮನವಿ ಸ್ವೀಕರಿಸಿ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ ‘ಕೊರಚ,
ಕೊರಮರು ಪರಿಶಿಷ್ಟ ಅಲೆಮಾರಿ ಪಟ್ಟಿ (49ರಲ್ಲಿ) ಬರುವುದಿಲ್ಲ. ಮಾತ್ರವಲ್ಲ ಪರಿಶಿಷ್ಟ ಜಾತಿ ಒಳಮೀಸಲಾತಿ ಪಟ್ಟಿಗೂ ಅವರು
ಸೇರುವುದಿಲ್ಲ ಎಂಬ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ಯಾವುದೇ ಆಧಾರವಿಲ್ಲದ ಈ ರೀತಿ ಹೇಳಿಕೆ ನೀಡಿ, ಅಲೆಮಾರಿ
ಸಮುದಾಯಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡಿರುವ ನಾರಾಯಣ ಸ್ವಾಮಿ ಕೂಡಲೇ ತನ್ನ ಹೇಳಿಕೆಯನ್ನು
ಹಿಂತೆಗೆದುಕೊಂಡು ಸಮಾಜದ ಕ್ಷಮೆ ಕೇಳಬೇಕು. ಕೊರಚ ಕೊರಮ ಸಮುದಾಯದ ಸಂಘಟನೆಗಳು ನಾರಾಯಣ ಸ್ವಾಮಿ
ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಲಿದ್ದೇವೆ ಎಂದು ಎಚ್ಚರಿಸಿದ್ದಾರೆ.

ಕೊರಚ ಸಮುದಾಯ ತಲತಲಾಂತರಿದಿಂದ ‘ಕಳ್ಳರು’ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡು ಬದುಕುತ್ತಿದೆ. ಬ್ರಿಟಿಷರ ಆಗಮನದ
ಬಳಿಕ ಅವರು ತಂದ ರಸ್ತೆ ಸಾರಿಗೆ ಕೊರಚರ ಜೀವನಧಾರವಾಗಿದ್ದ ಎತ್ತುಗಳ ಮೂಲಕ ಸರಕುಸಾಗಣೆ ವೃತ್ತಿಗೆ ಏಟು ಬಿತ್ತು. ಆಗ
ಕೊರಚರು ಹೊಟ್ಟೆಪಾಡಿಗಾಗಿ ಆಹಾರಧಾನ್ಯ ಕಳ್ಳತನಕ್ಕೆ ಇಳಿದರು ಎಂದು ಚರಿತ್ರೆ ಹೇಳುತ್ತದೆ. ಅದನ್ನೇ ದೊಡ್ಡದು ಮಾಡಿದ
ಬ್ರಿಟಿಷರು ಕಿಮಿನಲ್ ಟೈಬಲ್ ಕಾಯ್ದೆ ಏರಿ ಕೊರಚರು ಶಾಸ್ವತವಾಗಿ ಕಳ್ಳತನದ ಆರೋಪ ಹೊತ್ತು ತಿರುಗುವಂತೆ ಮಾಡಿದರು. ಈ
ಕಳಂಕದಿಂದ ಕೊರಚರು ಊರು ಹೊರಗೆ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವಂತಾಯಿತು. ಅವರಿನ್ನೂ ಮುಖ್ಯವಾಹಿನಿಗೆ
ಬರದಿರುವುದಕ್ಕೆ ಇದು ಪ್ರಮುಖ ಕಾರಣ, ಅಲೆಮಾರಿಗಳಲ್ಲಿ ಇಂತಹ ಕಳಂಕ ಬೇರೆ ಯಾರಿಗೂ ಇರಲಾರದು. ಕೊರಚರು ಇಂದಿಗೂ
ಹಗ್ಗ ಕಣ್ಣಿ, ಕಸಪೊರಕೆ ಮಾರಾಟ, ಬುಟ್ಟಿ ಹೆಣೆಯುವುದು, ಹಂದಿ ಸಾಕಾಣೆ ಇತ್ಯಾಧಿ ಹೊಟ್ಟೆ ತುಂಬದ ವೃತ್ತಿಯಲ್ಲಿ ಬದುಕು
ಸವೆಸುತ್ತಿದ್ದಾರೆ. ಇಂತಹದೊಂದು ಶೋಷಣೆಗೆ ಒಳಗಾಗಿ ಕಡಿಮೆ ಜನಸಂಖ್ಯೆ ಹೊಂದಿರುವ ಸೂಕ್ಷ್ಮ ಸಮುದಾಯ ಮುಂದುವರೆದಿದೆ
ಎಂದು ಹೇಳಲು ನಾರಾಯಣ ಸ್ವಾಮಿಯವರಿಗೆ ಹೇಗೆ ಮನಸ್ಸು ಬಂತು ಗೊತ್ತಿಲ್ಲ. ಇದು ದುರುದ್ದೇಶ ಪೂರಿತ ಆರೋಪ
ಮಾಡುವುದನ್ನು ಬಿಟ್ಟು ಛಲವಾದಿ ನಾರಾಯಣ ಸ್ವಾಮಿ ಕೊರಚ, ಕೊರಮ ಹಟ್ಟಿಗೆ ಬಂದು ವಾಸ್ತವ್ಯ ವಾಸ್ತವ ಅರಿಯಬೇಕೆಂದು
ಆಗ್ರಹಿಸಿದರು.

ಪರಿಶಿಷ್ಟ ಜಾತಿ ಅಲೆಮಾರಿ, ಅರೆಬರೆಯಾಗಿ ಪಡೆಯಲ್ಲಿರುವ ಸಮುದಾಯಗಳು ಯಾರದೋ ಸೌಲತ್ತುಗಳನ್ನು ಇನ್ಯಾರೋ
ಕಿತ್ತುಕೊಂಡು ತಿನ್ನುವನ್ನು ಬಲಾಢ್ಯವಾಗಿಲ್ಲ ಹಾಗೂ ಸಂಘಟಿತ ಶಕ್ತಿಯೂ ಆಗಿಲ್ಲ. ಸಿದ್ದರಾಮಯ್ಯನವರ ಸರ್ಕಾರ ಈ ಕೋಶ ರಚಿಸಿದ
ಬಳಿಕ ಸಮುದಾಯದಲ್ಲಿರುವವರು ನಿಧಾನಕ್ಕೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ. ಇಷ್ಟರಲ್ಲೇ
ಅಲೆಮಾರಿ ಪಟ್ಟಿಯಲ್ಲಿರುವ ಕೆಲ ಸಮುದಾಯದ ಪುಡಿ ನಾಯಕರು ಇಲ್ಲಸಲ್ಲದ ವಿಚಾರಗಳನ್ನು ತಮ್ಮ ತೆಲೆಯಲ್ಲಿ ತುಂಬಿಕೊಂಡು

ಕೊರಚರು ಮತ್ತು ಕೊರಮದು ಅಲೆಮಾರಿ ಕೋಶದೊಳಗೆ ಮೀಸಲಾತಿ ಕಬಳಿಸುತ್ತಿದ್ದಾರೆ. ಹಾಗಾಗಿ ಆ ಸಮುದಾಯ ಗಳನ್ನು
ಅಲೆಮಾರಿ ಕೋಶದಿಂದ ಹೊರಗೆ ಹಾಕಬೇಕೆಂಬ ಆಧಾರವಿಲ್ಲದ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ಮಾಡುತ್ತಿರುವುದು
ದುರದುಷ್ಟಕರ,

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಅವಧಿಯಲ್ಲಿ ರಾಜ್ಯದಲ್ಲಿರುವ ಅಲೆಮಾರಿ, ಅರೆಅಲೆಮಾರಿ ಸಮುದಾಯಗಳ ಕುರಿತು
ರಾಷ್ಟ್ರೀಯ ಕಾನೂನು ಶಾಲೆ ಮತ್ತು ಸಾಮಾಜಿಕ ಚಿಂತಕರನ್ನೊಂಗೊಂಡ ತಂಡದ ಮೂಲಕ ಅದ್ಯಾಯನ ನಡೆಸಿ ಪರಿಶಿಷ್ಟ
ಅಲೆಮಾರಿಗಳ ಪಟ್ಟಿಯಲ್ಲಿ (ಕೂರಚ, ಕೊರಮ ಸಮುದಾಯಗಳು) 51 ಸಮುದಾಯಗಳಿವೆ. ಆದರೆ, 49 ಸಮುದಾಯಗಳೆಂದು
ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇದಕ್ಕೆ ಛಲವಾದಿ ನಾರಾಯಣಸ್ವಾಮಿ ತುಪ್ಪ
ಸುರಿದು ದುಡಿಯುವ ಜನರ ನಡುವೆ ವಿಷ ಬೆರೆಸುವ ಕೆಲಸ ಮಾಡುತ್ತಿದ್ದಾರೆ. ಇವರು ಸುಮ್ಮನಿದ್ದರೆ ಸರಿ ಇಲ್ಲದಿದ್ದರೆ, ಹೋದಲ್ಲಿ
ಬಂದಲ್ಲಿ ಕೊರಚ ಕೊರಮ ಸಂಘಟನೆಗಳು ಪ್ರತಿಭಟನೆ ಎದುರಿಸಬೇಕಾದಿತು ಎಚ್ಚರಿಕೆ ನೀಡಿದ್ದು ಅಲ್ಲದೇ ನಾರಾಯಣ ಸ್ವಾಮಿ
ಭವಿಷ್ಯದಲ್ಲಿ ಎಲ್ಲಿ ಚುನಾವಣೆಗೆ ನಿಲ್ಲುತ್ತಾರೆ. ಆ ಕ್ಷೇತ್ರದಲ್ಲಿ ಸುತ್ತಾಡಿ ಅವರ ವಿರುದ್ಧ ಪ್ರಚಾರ ಹಮ್ಮಿಕೊಳ್ಳಲಾಗುವುದು. ನಮ್ಮ
ಜನಾಂಗದ ಸುದ್ದಿಗೆ ಬರದಂತೆ ಬಿಜೆಪಿ ರಾಜ್ಯಾದ್ಯಕ್ಷರು ನಾರಾಯಣಸ್ವಾಮಿಗೆ ಕರೆದು ಬುದ್ದಿ ಹೇಳಬೇಕು. ಇಲ್ಲದ್ದಿದರೆ, ಮುಂಬರುವ
ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಹಾ ಮತದಾನಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *