![](https://samagrasuddi.co.in/wp-content/uploads/2024/12/IMG-20241228-WA0025-1024x461.jpg)
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ, ಡಿ,28, ವಚನ ಸಾಹಿತ್ಯದ ಸಾರವನ್ನ ಪ್ರಚುರ ಪಡಿಸಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ 13ನೇ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಮ್ಮೇಳನವನ್ನು ಐತಿಹಾಸಿಕ ಚಿತ್ರದುರ್ಗದ ನಗರದಲ್ಲಿ ನಡೆಸಲು ಉದ್ದೇಶಿಸಿರುವುದಕ್ಕೆ ನಮ್ಮ ಸಹಕಾರ ಬೆಂಬಲ ಮತ್ತು ಶ್ರೀ
ಮುರುಘಾಮಠ ಇದರಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುತ್ತದೆ ಎಂದು ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ
ಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳವರು ನುಡಿದರು.
ಜನವರಿ 18 ಮತ್ತು 19ರಂದು ಇದೇ ಅನುಭವ ಮಂಟಪದಲ್ಲಿ ನಡೆಯಲಿರುವ ಸಮ್ಮೇಳನದ ಅಂಗವಾಗಿ ಶ್ರೀಗಳವರು ಇಲ್ಲಿನ
ಅನುಭವ ಮಂಟಪದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತ್ ಹಾಗೂ ಶ್ರೀ ಜಗದ್ಗುರು
ಮುರುಘರಾಜೇಂದ್ರ ಬೃಹನ್ಮಠದ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ
ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿ ಈ ನಾಡಿನಲ್ಲಿ ಇಬ್ಬರು ಮಠಾಧೀಶರಾದ ಚಿತ್ರದುರ್ಗದ ಶ್ರೀ ಜಯದೇವ
ಮುರುಘರಾಜೇಂದ್ರ ಮಹಾಸ್ವಾಮಿಗಳ ಶಿಕ್ಷಣ ಮತ್ತು ದಾಸೋಹ ಉತ್ತೇಜನಕ್ಕೆ ಅವರು ನೀಡಿದ ಕೊಡುಗೆ ಹಾಗೂ ಇನ್ನೋರ್ವದಾದ
ನಾಡಿನ ಸುತ್ತೂರಿನ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಜಿಯವರು ನೀಡಿದ ದಾಸೋಹದ ಕಲ್ಪನೆ ಅದರೊಂದಿಗೆ ಶರಣ
ಸಾಹಿತ್ಯಕ್ಕೆ ನೀಡಿದಂತಹ ಕೊಡುಗೆ ಅದರ ಉದ್ದೇಶವನ್ನು ಹೊಂದಿರುವಂತಹ ಈ ಶರಣ ಸಾಹಿತ್ಯ ಪರಿಷತ್ ವಚನ ಸಾಹಿತ್ಯವನ್ನು
ನಾಡಿನ ಉದ್ದಗಲಕ್ಕೂ ಪ್ರಸಾರ ಮಾಡುವ ಉದ್ದೇಶದಿಂದ ಸ್ಥಾಪನೆಯಾಗಿದೆ. ಅದೀಗ ತಾನು ಏರ್ಪಡಿಸಿರುವ ಹದಿಮೂರನೇ ಅಖಿಲ
ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಜನಮನ ತಲುಪಲಿ ಎಂಬ ಆಶಯ ವ್ಯಕ್ತಪಡಿಸಿದರು.
ಸಭೆಯ ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮಿಗಳು ಮಾತನಾಡಿ ಐತಿಹಾಸಿಕ
ಚಿತ್ರದುರ್ಗದಲ್ಲಿ ನಡೆಯುವಂತ ಈ ಸಮ್ಮೇಳನಕ್ಕೆ ಶ್ರೀಮಠ ಎಲ್ಲ ರೀತಿಯ ಸಹಕಾರವನ್ನು ನೀಡುತ್ತದೆ. ಅಲ್ಲದೆ ಈ ಸಮ್ಮೇಳನದಲ್ಲಿ
ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಟಕ್ಕೆ ಮತ್ತೆ ಚಾಲನೆ ನೀಡುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಪೂರ್ವಭಾವಿ ಸಭೆಯಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅಖಿಲ ಭಾರತ ಶರಣ ಸಾಹಿತ್ಯ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರೂ
ನಿವೃತ್ತ ಜಿಲ್ಲಾಧಿಕಾರಿಗಳೂ ಆದ ಡಾ.ಸಿ. ಸೋಮಶೇಖರ್ ಅವರು ಮಾತನಾಡಿ ಶರಣರ ನುಡಿ ಆಚಾರ ವಿಚಾರಗಳನ್ನು ನಾಡಿನ
ಜನತೆಯ ಮನೆ ಮನಗಳಿಗೆ ಮುಟ್ಟಬೇಕೆಂಬ ಸುದ್ದೇಶದಿಂದ ಈ ಶರಣ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಲಾಯಿತು. ಶರಣ ಸಾಹಿತ್ಯ
ಪರಿಷತ್ತಿನ ಈ ಹಿಂದಿನ ಹಲವಾರು ಸಮ್ಮೇಳನಗಳಲ್ಲಿ ನಾಡಿನ ಹೆಸರಾಂತ ಚಿಂತಕರಾದ ಚಿದಾನಂದಮೂರ್ತಿ, ಎಂ.ಎಂ.ಕಲ್ಬುರ್ಗಿ
,ಗುಂಜಾಳ್, ಸಿದ್ದಲಿಂಗಯ್ಯ ಇನ್ನು ಮುಂತಾದವರ ಅಧ್ಯಕ್ಷತೆಯಲ್ಲಿ ಅರ್ಥಪೂರ್ಣವಾಗಿ ನಡೆಯಲ್ಪಟ್ಟಿವೆ. ಅದರ ಮುಂದುವರೆದ
ಭಾಗವಾಗಿ ಐತಿಹಾಸಿಕ ಮಹತ್ವದ ಚಿತ್ರದುರ್ಗದ ನಗರದಲ್ಲಿ 13ನೇ ಸಮ್ಮೇಳನವನ್ನು ನಡೆಸುವಂತಹ ಉದ್ದೇಶವನ್ನು
ಕೈಗೊಂಡಿದ್ದೇವೆ ಎಂದರು.
ಈ ಸಮ್ಮೇಳನದಲ್ಲಿ ವಚನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ,ವೈಚಾರಿಕತೆ ಹಾಗೂ ಪ್ರಗತಿಪರ ಚಿಂತನ ಗೋಷ್ಠಿಗಳು ಮತ್ತು ಯುವ
ಜನಾಂಗವನ್ನು ಶರಣ ಸಾಹಿತ್ಯದ ಕಡೆಗೆ ಕೊಂಡೊಯ್ಯುವಂತ ಗೋಷ್ಠಿ ಹಾಗೂ ಶರಣರ ವಿಚಾರಗಳ ನಾಟಕ ಮುಂತಾದವುಗಳನ್ನು
ನಡೆಸುವ ಉದ್ದೇಶ ಸಮ್ಮೇಳನ ಹೊಂದಿದೆ ಎಂದು ತಿಳಿಸಿದರು. ಸಮ್ಮೇಳನಕ್ಕೆ ಮುರುಘಾಮಠದ ಬೆಂಬಲ ಮತ್ತು ಪ್ರೋತ್ಸಾಹ
ನೀಡುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದೆ ಎಂದು ನುಡಿದರು.
ಇತಿಹಾಸಿಕ ಸಂಶೋಧಕರಾದ ಡಾ. ಬಿ ರಾಶೇಖರಪ್ಪನವರು ಮಾತನಾಡಿ ಸಮ್ಮೇಳನದಲ್ಲಿ ಶರಣರ ವಿಚಾರಧಾರೆಗಳ ಮೇಲೆ
ಬೆಳಕು ಚೆಲ್ಲುವ ಸ್ಮರಣ ಸಂಚಿಕೆಯನ್ನು ಹೊರ ತರುವಂತ ಜವಾಬ್ದಾರಿಯನ್ನು ವಹಿಸಿದ್ದು ಅದನ್ನು ನಾನು ಮಾಡುತ್ತೇನೆ ಎಂದರು.
ಚಿಂತಕರಾದ ಡಾ. ಬಸವರಾಜ್ ನೇಲ್ಲಿಸರ,ನಾಗರಾಜ್‍ಸಂಗಮ್ ,ಆನಂದಕುಮಾರ್, ನಗರಭೆ ಮಾಜಿ ಅಧ್ಯಕ್ಷರಾದ ದೇವಿಕುಮಾರಿ
ಮತ್ತಿತರರು ತಮ್ಮ ಸಲಹೆ ನೀಡಿದರು. ಸಮ್ಮುಖವನ್ನು ಗುರುಮಟ್ಟಕಲ್ ನ ಶಾಂತವೀರ ಗುರುಮುರುಘರಾಜೇಂದ್ರಸ್ವಾಮಿಗಳು
,ತುಮಕೂರಿನ ಬಸವ ಮಹಲಿಂಗಸ್ವಾಮಿಗಳು, ಶಿರಸಿ ಹಾಗೂ ಚಿದ್ರಳ್ಳಿಯ ಮಲ್ಲಿಕಾರ್ಜುನ ಸ್ವಾಮಿಗಳು ನಿಪ್ಪಾಣಿಯ ಬಸವ
ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಘರಾಜೇಂದ್ರ ಮಠದ ಮುರುಘೇಂದ್ರ ಶ್ರೀಗಳವರು ವಹಿಸಿದ್ದರು.
ವೇದಿಕೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಅಶೋಕ್ ಮಳಲಿ, ಪ್ರಕಾಶ
ಅಂಗಡಿ ,ಸಿದ್ದಪ್ಪ ಹೊಟ್ಟಿ ,ಜಗನ್ನಾಥಪ್ಪ ಪನಸಾಲಿ, ಸೋಮಶೇಖರ್ ಗಾಂಜ, ಮಲ್ಲಿ
ಕಾರ್ಜುನ ಕಲಬುರ್ಗಿ,ಪುಷ್ಪ ಸುರೇಶ್ ಬಾಬು,ಎಸ್ ಷಣ್ಮುಖಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪೂರ್ವ ಭಾವಿ ಸಭೆಗೆ ವಿವಿಧ ಸಮಾಜದ, ಧರ್ಮದ ಮುಖಂಡರುಗಳು,ಪದಾಧಿಕಾರಿಗಳು, ಬಸವ ಕೇಂದ್ರಗಳ ಪದಾಧಿಕಾರಿಗಳು,
ಬಸವ ಸಂಘನೆಗಳವರು, ಶರಣ ತತ್ವಾಭಿಮಾನಿಗಳು, ನಗರ,ಪಟ್ಟಣ, ವಿವಿಧ ಗ್ರಾಮಗಳ ಪ್ರಮುಖರು, ಎಸ್ ಜೆ ಎಂ ವಿದ್ಯಾಪೀಠದ
ಶಾಲಾ ಕಾಲೇಜುಗಳ ಸಿಬ್ಬಂದಿ ,ಚಿತ್ರದುರ್ಗ ನಗರದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಾಹಿತಿಗಳು, ಕವಿಗಳು ವಿವಿಧ ಸಂಘ
ಸಂಸ್ಥೆಗಳವರು ಕಲಾವಿದರುಗಳು ಭಾಗವಹಿಸಿದ್ದರು.
ಕೋಕಿಲ ಎಂ.ಜೆ ವಚನ ಪ್ರಾರ್ಥನೆ ನಡೆಸಿದರು, ಶಸಾಪ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ಕೆಂ .ಎಂ ವೀರೇಶ್ ಸ್ವಾಗತಿಸಿದರು
,ಹುರುಳಿ ಬಸವರಾಜ ಕಾರ್ಯಕ್ರಮ ನಿರೂಪಿಸಿದರೆ, ಕೆ.ಪಿ.ಎಂ ಗಣೇಶಯ್ಯ. ವಂದಿಸಿದರು