ಚಿತ್ರದುರ್ಗ|ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ಕಾರ್ಮಿಕರ ಕ್ಷೇಮಾಭೀವೃದ್ದಿ ಸಂಘದ ವತಿಯಿಂದ ಪ್ರತಿಭಟನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 31: ನೋಂದಾಯಿತ ಸಂಘಗಳಿಗೆ ಕಟ್ಟಡ ಕಾರ್ಮಿಕರನ್ನು ನೋಂದಣಿ ಮಾಡಲು ಆದೆೆಶಿಸಬೇಕು. ಸೆಸ್‌ವಸೂಲಿ ಪ್ರಾಧಿಕಾರ ರಚನೆ ಮಾಡಬೇಕು. ಈ ಹಿಂದೆ ರಾಜ್ಯದಲ್ಲಿ ನಿರ್ಮಾಣ ಮಾಡಿರುವ ಎಲಾ ್ಲ ಕಾಮಗಾರಿಗಳನ್ನು ಮೌಲ್ಯಮಾಪನ ಮಾಡಲು ತಕ್ಷಣ ಅಧಿಕಾರಿಗಳನ್ನು ನೇಮಕ ಮಾಡಿ ಶೇ. 2% ರಂತೆ ಬಡಿ ಸಹಿತ ಸೆಸ್ ವಸೂಲಿ ಮಾಡಬೇಕು.ಈ ಹಿಂದೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಮುಂದುವೆರೆಸುವAತೆ ಆದೇಶಿಸಬೇಕು ಸೇರಿದಂತೆ ಇತರೇ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ಕಾರ್ಮಿಕರ ಕ್ಷೇಮಾಭೀವೃದ್ದಿ ಸಂಘ ಸರ್ಕಾರವನ್ನು ಆಗ್ರಹಿಸಿದೆ.

ನಗರದ ಪ್ರವಾಸಿ ಮಂದಿರದಿAದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನೆಯನ್ನು ನಡೆಸಿದ ಕಾರ್ಮಿಕರು, ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ಕಾರ್ಮಿಕರ ಕ್ಷೇಮಾಭೀವೃದ್ದಿ ಸಂಘದ ರಾಜ್ಯ ಕಾರ್ಯದರ್ಶಿ ವೈ ಕುಮಾರ್, ನೋಂದಾಯಿತ ಕಟ್ಟಡ ಕಾರ್ಮಿಕರಿಗಾಗಿ ಹಿಂದಿನ ರಾಜ್ಯ ಸರ್ಕಾರಗಳು ಹರಸಾಹಸಪಟ್ಟು ಮಂಡಳಿಯನ್ನು ರಚನೆ ಮಾಡಿವೆ. ನಮ್ಮ ರಾಜ್ಯದಲ್ಲಿ ಕಳೆದ 13-14 ವರ್ಷಗಳಿಂದ ಮಂಡಳಿಯು ಕಾರ್ಯನಿರ್ವಹಿಸುತ್ತಿದೆ ನೊಂದಾಯಿತ ಕಟ್ಟಡ ಕಾರ್ಮಿಕರ ಭದ್ರತೆ ಮತ್ತು ಏಳಿಗೆಗಾಗಿ ಶ್ರಮಿಸುವಂತಹ, ಕೆಲಸಗಳೆನೂ ಆಗುತ್ತಿಲ್ಲ. ಕಾರಣ ಕಳೆ ಅವಧಿಗಳಲ್ಲಿ ಬಿ.ಜೆ.ಪಿ. ಮತ್ತು ಆಡಳಿತದಲ್ಲಿರುವ ಕಾಂಗ್ರೆಸ್ ಪÀಕ್ಷಗಳು ಮತ್ತು ಸರ್ಕಾರಗಳು ಕಾರ್ಮಿಕರನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿವೆ ಕಳೆದ ಬಿ.ಜೆ.ಪಿ.ಸರ್ಕಾರ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನು ತಿದ್ದುಪಡಿ ಮಾಡಿಕೊಂಡು 2019 ರಿಂದ 2022-2023 ನೇ ಸಾಲಿನ ವರೆಗೆ ಅನೇಕ ಕಾರ್ಯಕ್ರಮಗಳ ಹೆಸರಿನಲ್ಲಿ ಮಂಡಳಿಯಲ್ಲಿರುವ ಸೆಸ್ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದು ಜಗತ್‌ಜಾಹಿರವಾಗಿದೆ ಎಂದು ದೂರಿದರು.

ನೋಂದಣಿ ನವೀಕರಣ ಅರ್ಜಿಗಳನ್ನು ಸಲ್ಲಿಸಲು ಬೆಕಾಬಿಟ್ಟಿ ಮಾನದಂಡಗಳನ್ನು ವಿಧಿಸಿದ್ದು, ಸದರಿ ಮಾನದಂಡಗಳನ್ನು ಸರಳಿಕರಣಗೊಳಿಸಿ 3 ವರ್ಷಗಳಿಗೊಮ್ಮೆ ನವೀಕರಣ ಮಾಡುವಂತೆ ಆದೇಶಿಸಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರ ಸಹಜ ಸಾವಿಗೆ 5 ಲಕ್ಷ ನೀಡಬೇಕು. ಕಟ್ಟಡ ಕಾರ್ಮಿಕರ ಮನೆಗಳ ನಿರ್ಮಾಣಕ್ಕೆ ರೂ. 5 ಲಕ್ಷ ನೀಡಬೇಕು. ಪಿಂಚಣಿಯನ್ನು ಪ್ರತಿ ತಿಂಗಳು 5,000 ರೂಗಳಿಗೆ ಏರಿಸಬೇಕು. ಹೆರಿಗೆ ಭತ್ಯೆ ನಗದು ನೇರ ವರ್ಗಾವಣೆ 50,000 ರೂ. ಮದುವೆಗೆ ರೂ. 1 ಲಕ್ಷ ನೀಡಬೇಕು.ಪ್ರಿವೆಂಟರಿ ಹೆಲ್ತ್ಕೇರ್ ಯೋಜನೆ ಜಾರಿ ಮಾಡಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆಮಾಡಿಸಿದ್ದು, ರಕ್ತ ತಪಾಸಣೆಯಲ್ಲಿ ಕಂಡು ಬAದ ಖಾಯಿಲೆಗ ಆರೋಗ್ಯ ಭಾಗ್ಯ ಯೋಜನೆಜಾರಿ ಮಾಡಿ, ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ನೋAದಾಯಿತ ಕಟ್ಟಡ ಕಾರ್ಮಿಕರ ಅವಲಂಬಿತರಿಗೆ ನೀಡುತ್ತಿರುವ ವೈದ್ಯಕೀಯ ಮರುಪಾವತಿಯನ್ನು 2 ಚಿಕ್ಕಮಕ್ಕಳಿಗೆ ನೀಡುತ್ತಿದ್ದು ದೊಡ್ಡ ಮಕ್ಕಳಿಗೂ ಅನ್ವಯವಾಗುವಂತೆಕಾನೂನು ತಿದ್ದುಪಡಿಯಾಗಬೇಕು. ಮೇ 1 ಕಾರ್ಮಿಕರ ದಿನಾಚರಣೆಯು ಕೇವಲ ಸರ್ಕಾರಿ ರಜಕ್ಕೆ ಸೀಮಿv ವಾಗಿದ್ದು ಸರ್ಕಾರಿ ಕಛೇರಿಗಳಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸುವಂತೆ ಆದೇಶಿಸಬೇಕು. ನುರಿತ ನೋಂದಾಯಿತ ಕಟ್ಟಡ ಕಾರ್ಮಿಕರನ್ನು ಗುರುತಿಸಿ ವರ್ಷಕ್ಕೊಮ್ಮೆ ಕಾರ್ಮಿಕದಿನಾಚರಣಿಯ ದಿನದಂದು ಸರ್ಕಾರದಿದ ಸನ್ಮಾನ ಮಾಡುವಂತೆ ಆದೇಶಿಸÀಬೇಕು.ಕಿವಿ ಕೇಳದವರಿಗೆ ಶ್ರವಣ ಸಾಧನ ನೀಡಬೇಕು ಮತ್ತು ಕಣ್ಣು ಕಾಣದವರಿಗೆ ಕನ್ನಡಕ ವಿತರಣೆ ಮಾಡಬೇಕು ಎಂದು ಆಗ್ರಹಿಸಲಾಯಿತು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ 520 ಕೋಟಿ 75 ಲಕ್ಷ, ಬಸ್ ಪಾಸ್ ಎಂದು 120ಕೋಟಿ., ಶಿಶುಪಾಲನ ಕೇಂದ್ರ 15 ಕೋಟಿ, ಇಮ್ಯೂನಿಟಿ ಕಿಟ್ 110 ಕೋಟಿ, ನ್ಯೂಟ್ರಿಷಿನ್ ಕಿಟ್ 35 ಕೋಟಿ. 6 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಟ್ಯಾಬ್ ಯೋಜನೆ 18ಕೋಟಿ. ಉದ್ಯೋಗ ಖಾತರಿ ಹಾಗೂ ಇಂದಿರಾ ಕ್ಯಾಟೀನ್‌ಗೆ ಸೆಸ್ ಹಣ ಈ ರೀತಿ ಕಾರ್ಮಿಕರಿಗೆ ಬೇಕಿಲ್ಲದ ಯೋಜನೆಯನ್ನು ರೂಪಿಸಿಕೊಂಡು ಬಿ.ಜೆಪಿ. ಸರ್ಕಾರ ಬೃಹತ್ ಸೆಸ್ ಹಣವನ್ನು ಲೂಟಿಮಾಡಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಈ ರೀತಿಯ ಯೋಜನೆಗಳನ್ನು ಮುಂದುವರೆಸಬಾರದೆದು ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಮಂಜುನಾಥ್.ಜೆ ರಾಜ್ಯ ಉಪಾಧ್ಯಕ್ಷರಾದ ಕೆ.ಗೌಸ್‌ಪೀರ್, ರಾಜ್ಯ ಖಜಾಂಚಿ ಈಶ್ವರಪ್ಪ.ಡಿ. ಉಪಖಜಾಂಚಿ ಚಾದ್‌ಪೀರ್, ನಿರ್ದೇಶಕ ಇಬಾದುಲ್ಲಾ ರಾಜಪ್ಪ ರಾಜಣ್ಣ ಮುಜೀಬ್‌ವುಲ್ಲಾ ಮಾಯಣ್ಣ ರಾಜ್ಯ ಸಂಘಟನಾ ಕಾರ್ಯದರ್ಶಿ ವೈ.ಬಸವರಾಜ್ ರಾಜ್ಯ ಉಪಾಧ್ಯಕ್ಷ ನಾದಿ ಅಲಿ ರಾಜ್ಯ ನಿರ್ದೇಶಕ ಸಲಿಂರಾಜ್ಯ ಸಹ ಕಾರ್ಯದರ್ಶಿ ಇಮಾಮ್ ಮಹೀ ಮುದ್ದೀನ್ ಗೌರವಾಧ್ಯಕ್ಷರು ಮಹಂತೇಶಣ್ಣ ಗೌಸ್ ಖಾನ್ ಪ್ರಸನ್ನ ತಿಮ್ಮಯ್ಯ ಫೈರೋಜ್ ರಾಘವೇಂದ್ರ ಸಮೃದ್ದಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೆಂಕಟೇಶ್.ಎಲ್ ಪ್ರಧಾನ ಕಾರ್ಯದರ್ಶಿ ಉಮೇಶ್.ಎನ್ ಚಿತ್ರದುರ್ಗ ಜಿಲ್ಲಾ ಟೈಲ್ಸ್ ಮತ್ತು ಗ್ರಾನೈಟ್ ಕಾರ್ಮಿಕರ ಸಂಘದ ಅಧ್ಯಕ್ಷ ಚಂದ್ರಪ್ಪ.ಟಿ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *