ಮಕ್ಕಳು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ತೆರೆಯಲು ಪೋಷಕರ ಅನುಮತಿ ಕಡ್ಡಾಯ?

ನವದೆಹಲಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು (Childrens) ಸಾಮಾಜಿಕ ಜಾಲತಾಣ (Social Media) ಖಾತೆ ತೆರೆಯಲು ಪೋಷಕರ ಅನುಮತಿ ಕಡ್ಡಾಯಗೊಳಿಸುವ ನೀತಿ ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. 2023ರಲ್ಲೇ ಸಂಸತ್ತಿನ ಅನುಮೋದನೆ ಪಡೆದುಕೊಂಡಿರುವ ಡಿಜಿಟಲ್ ಖಾಸಗಿ ಮಾಹಿತಿ ರಕ್ಷಣಾ ಕಾಯ್ದೆಗೆ (Social Media Rules) ಕೇಂದ್ರ ಸರ್ಕಾರ ಕೆಲವೊಂದು ತಿದ್ದುಪಡಿ ಮಾಡಿ ಹೊಸ ಕರಡು ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ಈ ಮಹತ್ವದ ನಿರ್ಧಾರದ ಬಗ್ಗೆ ಜನರು ಅಭಿಪ್ರಾಯಗಳನ್ನು ತಿಳಿಸಲು ಫೆ.18ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹೀಗೆ ಸಂಗ್ರಹವಾಗುವ ಅಭಿಪ್ರಾಯಗಳನ್ನು ಆಧರಿಸಿ ಅಂತಿಮ ವರದಿ ಬಿಡುಗಡೆಗೆ ಸರ್ಕಾರ ಮುಂದಾಗಿದೆ. ಕರಡು ವರದಿ ಅನ್ವಯ, ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯಬೇಕಾದರೆ ಪೋಷಕರ ಅನುಮತಿ ಕಡ್ಡಾಯವಾಗಿದೆ. ಇದರ ಜೊತೆಗೆ ಕಂಪನಿಗಳು ತಮ್ಮ ದಾಖಲೆಗಳನ್ನು ಅಳಿಸುವಂತೆ ಮತ್ತು ದಾಖಲೆಗಳನ್ನು ಏಕೆ ಕಲೆಹಾಕುತ್ತಿದ್ದೀರಿ ಎಂದು ಮಾಹಿತಿ ಪಡೆಯುವ ಮತ್ತು ಖಾಸಗಿ ಮಾಹಿತಿ ರಕ್ಷಣೆ ಮಾಡಿಕೊಳ್ಳುವ ಅಧಿಕಾರ ಬಳಕೆದಾರನಿಗೆ ಇದೆ.

ಕಂಪನಿಗಳು ಬಳಕೆದಾರನ ಡಾಟಾ ಲೀಕ್ ಮಾಡಿದರೆ ರೂ.250 ದಂಡ ಹಾಕುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ.

ಮಸೂದೆಯಲ್ಲಿರುವ ಪ್ರಮುಖ ಅಂಶಗಳು
– ಮಕ್ಕಳ ವಯೋಮಿತಿ ಪೋಷಕರು ಖಾತ್ರಿ ಪಡಿಸಬೇಕು
– ತಾವೇ ಪೋಷಕರು ಎಂಬ ಸಾಕ್ಷಿಗೆ ಸರ್ಕಾರಿ ಐಡಿ ಕಡ್ಡಾಯ
– ಆ್ಯಪ್‌ನಲ್ಲಿ ದಾಖಲೆ ಅಳಿಸಲು ಕೇಳುವ ಅಧಿಕಾರ

Source : https://publictv.in/children-below-the-age-of-18-will-now-need-parental-consent-to-open-social-media-accounts

Views: 0

Leave a Reply

Your email address will not be published. Required fields are marked *