ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 05 ಶ್ರೀ ಸದ್ಗುರು ಕಬೀರಾನಂದಾಶ್ರಮದವತಿಯಿಂದ 2025ರ ಫ್ರೆಬವರಿಯಲ್ಲಿ ನಡೆಯಲಿರುವ 95ನೇ ಶಿವನಾಮ ಸಪ್ತಾಹವನ್ನು
ಆಶ್ರಮಕ್ಕೆ ಹೊರೆಯಾಗದಂತೆ ಮಾಡಬೇಕಿದೆ ಎಂದು ಭಕ್ತ ಸಮೂಹ ತೀರ್ಮಾನ ಮಾಡಲಾಯಿತು.
2025ರ ಫೆ. 20 ರಿಂದ 26ರವರೆಗೆ ಶ್ರೀ ಸದ್ಗುರು ಕಬೀರಾನಂದಾಶ್ರಮದಲ್ಲಿ ನಡೆಯಲಿರುವ 95ನೇ ಶಿವನಾಮ ಸಪ್ತಾಹ
ಕಾರ್ಯಕ್ರಮದ ರೂಪು ರೇಷೆಗಳನ್ನು ಸಿದ್ದಪಡಿಸುವ ಹಿನ್ನಲೆಯಲ್ಲಿ ಕರೆದಿದ್ದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ
ವಿವಿಧ ರೀತಿಯ ಸಲಹೆಯನ್ನು ನೀಡಿದರು.

ಶ್ರೀ ಗುರು ಕಬೀರಾನಂದಾಶ್ರಮದ ಕಾರ್ಯದರ್ಶಿಗಳಾದ ವಿ.ಎಲ್ ಪ್ರಶಾಂತ್ ಪ್ರಸ್ತಾವಿಕವಾಗಿ ಮಾತನಾಡಿ, ವರ್ಷದಿಂದ ವರ್ಷಕ್ಕೆ
ಶಿವರಾತ್ರಿ ಮಹೋತ್ಸವ ಅದ್ದೂರಿಯಾಗಿ ಅಚರಣೆಯಾಗುತ್ತಿದೆ. ಇದರಲ್ಲಿ ಎಲ್ಲರ ಸಹಕಾರ ಸಹಾಯ ದೊರೆತ್ತಿದೆ. ಕಳೆದ ವರ್ಷದ
ಶಿವರಾತ್ರಿ ಮಹೋತ್ಸವದಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ ಇದರಿಂದ ಮಠದ ಮೇಲೆ ಹೆಚ್ಚಿನ ಹೊರೆಯಾಗಿದೆ, 94ನೇ
ಶಿವರಾತ್ರಿ ಮಹೋತ್ಸವದಲ್ಲಿ ಆದ ಖರ್ಚು 24,27,272 ರೂಗಳಾದರೆ ಭಕ್ತಾಧಿಗಳಿಂದ ಬಂದ ಹಣ 14 ಲಕ್ಷ ಮಾತ್ರ 10,27,272
ರೂಗಳು ಮಠಕ್ಕೆ ಹೊರೆಯಾಗಿದೆ. ಈ ಸಲದಿಂದಾದರೂ ಖರ್ಚಿನ ಹೊರೆಯನ್ನು ಕಡಿಮೆ ಮಾಡುವ ಕಾರ್ಯ ಭಕ್ತಾಧಿಗಳಿಂದ
ಆಗಬೇಕಿದೆ. ಭಕ್ತಾಧಿಗಳು ತಾವು ಮಾತ್ರವಲ್ಲದೆ ಬೇರೆಯವರಿಂದ ಸಹಾ ಕಾಣಿಕೆಯನ್ನು ಕೊಡಿಸುವಂತ ಕಾರ್ಯವಾಗಬೇಕಿದೆ
ಎಂದರು.
ಜೆಡಿಎಸ್ನ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್ ಮಾತನಾಡಿ, ಈ ಕಾರ್ಯಕ್ರಮಕ್ಕೆ ನಾಡಿನ ವಿವಿಧ
ಮಠಾಧೀಶರು, ಕಲಾವಿದರನ್ನು ಕರೆಯಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕಿದೆ, ಹಣಕಾಸು ವಿಷಯದಲ್ಲಿ
ಸಮಿತಿಯನ್ನು ರಚನೆ ಮಾಡುವುದರ ಮೂಲಕ ಈ ಭಾರಿ ಅತಿ ಹೆಚ್ಚಿನ ವಸೂಲಾತಿಯನ್ನು ಮಾಡಬೇಕಿದೆ ಕಬೀರಾನಂದಾಶ್ರಮ
ಜಾತ್ಯಾತೀತವಾಗಿ ಇದೆ ಇಲ್ಲಿ ಎಲ್ಲಾ ಜನಾಂಗದವರು ಬರುತ್ತಾರೆ ಶ್ರೀಗಳ ಆರ್ಶೀವಾದವನ್ನು ಪಡೆಯುತ್ತಾರೆ ಇಂತಹ ಗುರುಗಳು
ನಮಗೆ ಸಿಗುವುದು ಕಡಿಮೆ ಭಕ್ತರು ಸಹಕಾರ ಇದ್ದರೆ ಆಶ್ರಮಕ್ಕೆ ಹೊರೆಯಾಗುವುದಿಲ್ಲ ಎಂದರು.
ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದರಿನಾಥ್ ಮಾತನಾಡಿ, ಶಿವರಾತ್ರಿ ಮಹೋತ್ಸವ ಯಶಸ್ವಿಗೆ ಎಲ್ಲರ ಸಹಕಾರ
ಅಗತ್ಯವಾಗಿದೆ. ಇದಕ್ಕಾಗಿ ಕಾರ್ಯಕ್ರಮವನ್ನು ರೂಪಿಸಬೇಕಿದೆ. ಜೊತೆಗೆ ಸಹಕಾರವನ್ನು ಸಹಾ ನೀಡಬೇಕಿದೆ. ನಮ್ಮ ನಮ್ಮ
ಜವಾಬ್ದಾರಿ ಹಾಗೂ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ಮಾಡಬೇಕಿದೆ. ವರ್ಷದಿಂದ ವರ್ಷಕ್ಕೆ ಹಣಕಾಸು ಸಂಗ್ರಹ
ಹೆಚ್ಚಾಗಬೇಕಿದೆ ನಮ್ಮ ಮನೆಯಲ್ಲಿ ಏನಾದರೂ ಕಾರ್ಯಕ್ರಮ ಆದರೆ ಯಾವ ರೀತಿ ಕಾಳಜಿಯಿಂದ ಮಾಡುತ್ತೇವೆ ಅದೇ ರೀತಿ
ಶಿವರಾತ್ರಿ ಮಹೋತ್ಸವವನ್ನು ಮಾಡಬೇಕಿದೆ ಮಠದಿಂದ ಯಾವ ರೀತಿಯಿಂದಲೂ ಹಣವನ್ನು ಹಾಕುವಂತೆ ಆಗಬಾರದು ಎಂದರು.
ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ತಾಜ್ಪೀರ್ ಮಾತನಾಡಿ, ಈ ಕಾರ್ಯಕ್ರಮಕ್ಕೆ ಯುವ ಜನಾಂಗ ಬರುವಂತೆ
ಮಾಡಬೇಕಿದೆ ಅವರಲ್ಲಿ ಧಾರ್ಮಿಕವಾಗಿ ಭೋಧನೆಯನ್ನು ತಿಳಿಸುವಂತ ಕಾರ್ಯವಾಗಬೇಕಿದೆ. ಭಕ್ತಾಧಿಗಳು ತಮ್ಮ ದುಡಿಮೆಯಲ್ಲಿ
ಒಂದು ದಿನದ ದುಡಿಮೆಯನ್ನು ಆಶ್ರಮಕ್ಕೆ ನೀಡುವುದರ ಮೂಲಕ ನೆರವಾಗಬೇಕಿದೆ ಎಂದು ಸಲಹೆ ನೀಡಿದ ಅವರು, ಶಿವರಾತ್ರಿ
ಮಹೋತ್ಸವದ ಅಂಗವಾಗಿ ಬಡಾವಣೆಗಳಲ್ಲಿ ಪಾದಯಾತ್ರೆಯನ್ನು ಮಾಡುವುದರ ಮೂಲಕ ಹಣವನ್ನು ಸಂಗ್ರಹ ಮಾಡಬೇಕಿದೆ.
ಇದ್ದಲ್ಲದೆ ಪಾದಯಾತ್ರೆಯ ಮೂಲಕ ಕಾರ್ಯಕ್ರಮಕ್ಕೆ ಜನತೆ ಬರುವಂತೆ ಆಹ್ವಾನ ನೀಡಬೇಕಿದೆ. ಇದ್ದಲ್ಲದೆ ಪಾದಯಾತ್ರೆಯಲ್ಲಿ
ಯುವ ಜನತೆ ಗುಟ್ಕಾ ಸೇವನೆ ಹೆಚ್ಚಾಗಿದೆ ಇದನ್ನು ಬಿಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಗುಟ್ಕಾ ಬಿಡಿ ಹಾಲು ಕುಡಿಯಿರಿ ಎಂಬ
ಸಂದೇಶವನ್ನು ಅವರಿಗೆ ತಿಳಿಸಬೇಕಿದೆ ಎಂದರು.
ಮದೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿಜಯಕುಮಾರ್ ಮಾತನಾಡಿ, ಈ ಮಹೋತ್ಸವದಲ್ಲಿ ಶ್ರೀಗಳು ತಿಳಿಸಿದ
ಕಾರ್ಯವನ್ನು ಚಾಚು ತಪ್ಪದೆ ನಿಷ್ಠೆಯಿಂದ ಮಾಡಲಾಗುವುದು ಎಂದರು.
ಸಾನಿಧ್ಯವಹಿಸಿದ್ದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಮಾತನಾಡಿ, ಚಿತ್ರದುರ್ಗ
ಬೃಹನ್ಮಠದಲ್ಲಿ ನಡೆಯುವ ಶರಣಸಂಸ್ಕತಿ ಉತ್ಸವ, ಸಿರಿಗೆರೆ ಮಠದಿಂದ ನಡೆಯುವ ತರಳಬಾಳು ಉತ್ಸವದ ರೀತಿಯಲ್ಲಿ
ಕಬೀರಾನಂದಾಶ್ರಮದಲ್ಲಿ ನಡೆಯುವ ಶಿವರಾತ್ರಿ ಮಹೋತ್ಸವ ಮಧ್ಯ ಕರ್ನಾಟಕದ ನಾಡಹಬ್ಬವಾಗಿ ಮಾಡಬೇಕಾದ ಚಿಂತನೆಯನ್ನು
ಮಾಡಬೇಕಿದೆ. ಈ ಶಿವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ ಶಿವಲಿಂಗಾನಂದ ಶ್ರೀಗಳು ಉತ್ಸವಮೂರ್ತಿಯಾಗಬೇಕಿದೆ ಇಲ್ಲಿ
ನಾವುಗಳು ಎಲ್ಲಾ ಸೇರಿ ಈ ಕಾರ್ಯಕ್ರಮವನ್ನು ಮಾಡಬೇಕಿದೆ. ಇದಕ್ಕಾಗಿ ಭಕ್ತರು ಸಹಾಯ ಮತ್ತು ಸಹಕಾರವನ್ನು ನೀಡಬೇಕಿದೆ
ಎಂದ ಶ್ರೀಗಳು, ಈ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಅಂತರಾಜ್ಯ ಮಟ್ಟದ ಕಲಾವಿದರನ್ನು ಕರೆಯಿಸುವ ಚಿಂತನೆ ನಡೆಯುತ್ತಿದೆ.
ಇದರೊಂದಿಗೆ ಶಿವರಾತ್ರಿ ಮಹೋತ್ಸವದಲ್ಲಿ ಇದುವರೆವಿಗೂ ಕಾರ್ಯವನ್ನು ಮಾಡಿದ ಅಧ್ಯಕ್ಷರನ್ನು ಕರೆಯಿಸಿ ಅವರನ್ನು
ಸನ್ಮಾನಿಸುವ ಕಾರ್ಯವನ್ನು ಮಾಡಲಾಗುವುದು. ಮಹಿಳೆಯರನ್ನು ಈ ಕಾರ್ಯದಲ್ಲಿ ಹೆಚ್ಚಿನದಾಗಿ ಸಂಘಟಿಸುವ ಕಾರ್ಯವನ್ನು
ಮಾಡಬೇಕಿದೆ. ಶ್ರೀಗಳಿಗೆ ಹೆಚ್ಚಿನ ಭಾರವನ್ನು ನೀಡದೇ ಅವರಿಗೆ ದೇವರ ಪೂಜೆ, ಆರ್ಶೀವಾದವನ್ನು ಮಾಡಲು ಬಿಡಬೇಕಿದೆ
ಎಂದರು.
ಸಮಾರಂಭದ ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳ
ಮಾತನಾಡಿ, ಹಿಂದೂ ಮಹಾ ಗಣಪತಿಯಿಂದ ಚಿತ್ರದುರ್ಗ ದೇಶದಲ್ಲಿಯೇ ಹೆಸರುವಾಸಿಯಾಗಿದೆ. ಭಕ್ತಾಧಿಗಳ ಸಹಕಾರ,
ನೆರವಿನಿಂದ ಏನನ್ನಾದರೂ ಸಹಾ ಮಾಡಬಹುದಾಗಿದೆ. ಎಲ್ಲರ ಸಹಾಯದಿಂದ ಮಹಾ ಶಿವರಾತ್ರಿಯನ್ನು ವಿಜೃಂಭಣೆಯಿಂದ
ನಡೆಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಉಜ್ಜನಪ್ಪ, ಮಂಜುನಾಥ ಗುಪ್ತ, ನಗರಸಭಾ ಸದಸ್ಯರಾದ ವೆಂಕಟೇಶ್, ನಗರಾಭೀವೃದ್ದಿ
ಪ್ರಾಧಿಕಾರದ ಮಾಜಿ ಸದಸ್ಯರಾದ ಶ್ರೀಮತಿ ರೇಖಾ, ವರ್ತಕರಾದ ವೆಂಕಟೇಶ್, ರಾಮಮೂರ್ತಿ ಶಿವರಾತ್ರಿ ಮಹೋತ್ಸವಕ್ಕೆ ವಿವಿಧ
ರೀತಿಯ ಸಲಹೆಯನ್ನು ನೀಡಿದರು.
ಈ ಸಮಾರಂಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷರಾದ ರಘುನಾಥ್, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ, ನಿರಂಜನ ಮೂರ್ತಿ, ತಿಪ್ಪೇಶಯ್ಯ,
ಧರ್ಮ ಪ್ರಸಾದ್, ಸುರೇಂದ್ರ ಭಾಗವಹಿಸಿದ್ದರು. ಸುಬ್ರಾಯ್ ಭಟ್ಟರು ವೇದಘೋಷ ಮಾಡಿದ, ಶ್ರೀಮತಿ ಸುಮನ ಪ್ರಾರ್ಥಿಸಿದರು,
ಪ್ರಶಾಂತ್ ಸ್ವಾಗತಿಸಿದರು, ಮುರುಗೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.