ವಿಜಯ್ ಹಜಾರೆ ನಾಕೌಟ್ ನಿಯಮಗಳ ಪ್ರಕಾರ 5 ಗುಂಪಿನ್ ಟಾಪ್ 10 ತಂಡಗಳಲ್ಲಿ 6 ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಉಳಿದ 2 ಸ್ಥಾನಕ್ಕಾಗಿ ನಾಲ್ಕು ತಂಡಗಳು ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಸೆಣಸಾಡಲಿವೆ. ಈ ಪಂದ್ಯಗಳಲ್ಲಿ ಗೆದ್ದ ಎರಡು ತಂಡಗಳು ಕ್ವಾರ್ಟರ್‌ಗೆ ಪ್ರವೇಶಿಸಲಿವೆ.
ಭಾನುವಾರ ನಡೆದ ವಿಜಯ್ ಹಜಾರೆ ಟ್ರೋಫಿಯ (Vijay Hazare Trophy) ಏಳನೇ ಸುತ್ತಿನ ಪಂದ್ಯಗಳೊಂದಿಗೆ ಗುಂಪು ಹಂತವು ಮುಕ್ತಾಯಗೊಂಡಿದೆ. ಲೀಗ್ ಹಂತದಲ್ಲಿ ಐದು ಗುಂಪುಗಳಲ್ಲಿ ಅಗ್ರ 10 ತಂಡಗಳು ನಾಕೌಟ್ ಹಂತಕ್ಕೆ (Knockout Matches) ಅರ್ಹತೆ ಪಡೆಯುತ್ತವೆ. ಗುಜರಾತ್, ಮಹಾರಾಷ್ಟ್ರ, ವಿದರ್ಭ, ಕರ್ನಾಟಕ, ಬರೋಡಾ ಮತ್ತು ಪಂಜಾಬ್ ತಂಡಗಳು ಅದ್ಭುತ ಪ್ರದರ್ಶನದೊಂದಿಗೆ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿವೆ. ಹರಿಯಾಣ, ರಾಜಸ್ಥಾನ, ತಮಿಳುನಾಡು ಮತ್ತು ಬಂಗಾಳ ತಂಡಗಳು ಪ್ರೀ ಕ್ವಾರ್ಟರ್ ಹಂತದಲ್ಲಿ ಆಡಲಿದೆ.
ಕ್ವಾರ್ಟರ್ ಫೈನಲ್ ಲೆಕ್ಕಾಚಾರ
ವಿಜಯ್ ಹಜಾರೆ ನಾಕೌಟ್ ನಿಯಮಗಳ ಪ್ರಕಾರ 5 ಗುಂಪಿನ್ ಟಾಪ್ 10 ತಂಡಗಳಲ್ಲಿ 6 ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಉಳಿದ 2 ಸ್ಥಾನಕ್ಕಾಗಿ ನಾಲ್ಕು ತಂಡಗಳು ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಸೆಣಸಾಡಲಿವೆ. ಈ ಪಂದ್ಯಗಳಲ್ಲಿ ಗೆದ್ದ ಎರಡು ತಂಡಗಳು ಕ್ವಾರ್ಟರ್‌ಗೆ ಪ್ರವೇಶಿಸಲಿವೆ.
ನಾಕೌಟ್ ಪಂದ್ಯಗಳು ಎಲ್ಲಿ ನಡೆಯಲಿವೆ?
ಎಲ್ಲಾ ಫೈನಲ್ ಸೇರಿ ಎಲ್ಲಾ ನೌಕೌಟ್ ಪಂದ್ಯಗಳು ವಡೋದರದ ಕೊಟಂಬಿ ಕ್ರೀಡಾಂಗಣ, ಮೋತಿಬಾಗ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ. ಜನವರಿ 9 ರಂದು ಪ್ರೀಕ್ವಾರ್ಟರ್ ಫೈನಲ್, 11 ಮತ್ತು 12 ರಂದು ಕ್ವಾರ್ಟರ್ ಫೈನಲ್ ನಡೆಯಲಿದೆ, 15 ಮತ್ತು 16 ರಂದು ಸೆಮಿಫೈನಲ್ ನಡೆಯಲಿದೆ. ಇದೇ ತಿಂಗಳ 18ರಂದು ಟ್ರೋಫಿಗಾಗಿ ಫೈಟ್ ನಡೆಯಲಿದೆ.
ವಿಜಯ್ ಹಜಾರೆ ಟ್ರೋಫಿ 2024-25 ನಾಕೌಟ್‌ಗೆ ಅರ್ಹತೆ ಪಡೆದ ತಂಡಗಳು
1. ಗುಜರಾತ್ – 28 ಅಂಕಗಳು – ಗ್ರೂಪ್ ಎ ಟಾಪರ್
2. ಮಹಾರಾಷ್ಟ್ರ – 24 ಅಂಕಗಳು (+1.75) – ಗ್ರೂಪ್ ಬಿ ಟಾಪರ್
3. ವಿದರ್ಭ – 24 ಅಂಕಗಳು (+1.55) – ಗ್ರೂಪ್ ಡಿ ಟಾಪರ್
4. ಕರ್ನಾಟಕ – 24 ಅಂಕಗಳು (+1.37) – ಸಿ ಗುಂಪಿನ ಟಾಪರ್
5. ಬರೋಡಾ – 20 ಅಂಕಗಳು – ಗ್ರೂಪ್ ಇ ಟಾಪರ್
6. ಪಂಜಾಬ್ – 24 ಅಂಕಗಳು (+2.167) – ಸಿ ಗುಂಪಿನಲ್ಲಿ 2ನೇ ಸ್ಥಾನ
7. ಹರಿಯಾಣ – 24 ಅಂಕಗಳು (0.726) – ಎ ಗುಂಪಿನಲ್ಲಿ 2ನೇ ಸ್ಥಾನ
8. ರಾಜಸ್ಥಾನ – 20 ಅಂಕಗಳು – ಬಿ ಗುಂಪಿನಲ್ಲಿ 2ನೇ ಸ್ಥಾನ
9. ತಮಿಳುನಾಡು – 18 ಅಂಕಗಳು – ಡಿ ಗುಂಪಿನಲ್ಲಿ 2ನೇ ಸ್ಥಾನ
ನಾಕೌಟ್ ಪಂದ್ಯಗಳ ವೇಳಾ ಪಟ್ಟಿ
ಫ್ರೀ ಕ್ವಾರ್ಟರ್ ಫೈನಲ್
ಜನವರಿ 9- ಹರಿಯಾಣ vs ಬೆಂಗಾಲ್ – ಬೆಳಗ್ಗೆ 9 ಗಂಟೆ
ಜನವರಿ -9 – ರಾಜಸ್ಥಾನ್ vs ತಮಿಳುನಾಡು – ಬೆಳಗ್ಗೆ 9 ಗಂಟೆ
ಕ್ವಾರ್ಟರ್ ಫೈನಲ್ ವೇಳಾಪಟ್ಟಿ
ಜನವರಿ 11- ಕ್ವಾರ್ಟರ್ ಫೈನಲ್ 1- ಮಹಾರಾಷ್ಟ್ರ vs ಪಂಜಾಬ್ – ಬೆಳಗ್ಗೆ 9 ಗಂಟೆ
ಜನವರಿ 11- ಕ್ವಾರ್ಟರ್ ಫೈನಲ್ 2 ಕರ್ನಾಟಕ vs ಬರೋಡ – ಬೆಳಗ್ಗೆ 9 ಗಂಟೆ
ಜನವರಿ 12-ಕ್ವಾರ್ಟರ್ ಫೈನಲ್ 3- 1ಗುಜರಾತ್ vs ಪ್ರಿ ಕ್ವಾರ್ಟ್ನಲ್ಲಿ ಗೆದ್ದ ತಂಡ – ಬೆಳಗ್ಗೆ 9 ಗಂಟೆ
ಜನವರಿ 12-ಕ್ವಾರ್ಟರ್ ಫೈನಲ್ 4- ವಿದರ್ಭ vs ಪ್ರಿ ಕ್ವಾರ್ಟ್ನಲ್ಲಿ ಗೆದ್ದ ತಂಡ – ಬೆಳಗ್ಗೆ 9 ಗಂಟೆ
ಸೆಮಿಫೈನಲ್ ಪಂದ್ಯಗಳು
ಜನವರಿ 15 – ಕ್ವಾರ್ಟರ್ ಫೈನಲ್ 1 ವಿನ್ನರ್ vs ಕ್ವಾರ್ಟರ್ ಫೈನಲ್ 4 ವಿನ್ನರ್ – ಮಧ್ಯಾಹ್ನ 1:30
ಜನವರಿ 16- ಕ್ವಾರ್ಟರ್ ಫೈನಲ್ 2 ವಿನ್ನರ್ vs ಕ್ವಾರ್ಟರ್ ಫೈನಲ್ 3 ವಿನ್ನರ್- ಮಧ್ಯಾಹ್ನ 1:30
ಫೈನಲ್ ಪಂದ್ಯ ಜನವರಿ 18 – ಮಧ್ಯಾಹ್ನ 1:30