Rohit Sharma: ಇನ್ನೇರಡು ತಿಂಗಳಲ್ಲಿ ರೋಹಿತ್ ಅಂತರರಾಷ್ಟ್ರೀಯ ಕ್ರಿಕೆಟ್ ಬದುಕು ಅಂತ್ಯ?

ರೋಹಿತ್ ಶರ್ಮಾ ಇನ್ನೂ ಎಷ್ಟು ದಿನ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಾರೆ? ಪ್ರಸ್ತುತ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಮೂಡಿರುವ ಅತಿ ದೊಡ್ಡ ಪ್ರಶ್ನೆ ಇದು. ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದ್ದು, ಇನ್ನು ಕೇವಲ 2 ತಿಂಗಳಲ್ಲಿ ರೋಹಿತ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಅಂತ್ಯಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ರೋಹಿತ್ ಶರ್ಮಾ ಬಗ್ಗೆ ವರದಿಯೊಂದು ಹೊರಬಿದ್ದಿದ್ದು, ಅದರ ಪ್ರಕಾರ ಚಾಂಪಿಯನ್ಸ್ ಟ್ರೋಫಿ ನಂತರ ರೋಹಿತ್ ಅಂತರಾಷ್ಟ್ರೀಯ ಕ್ರಿಕೆಟ್ ಆಡುವುದಿಲ್ಲ ಎಂದು ಹೇಳಲಾಗುತ್ತಿದೆ.ವಾಸ್ತವವಾಗಿ ಜನವರಿ 11ರಂದು ನಡೆದ ಬಿಸಿಸಿಐ ಆಯ್ಕೆಗಾರರ ​​ಸಭೆಯಲ್ಲಿ ರೋಹಿತ್ ಶರ್ಮಾ ಕೂಡ ಭಾಗವಹಿಸಿದ್ದು, ತಂಡಕ್ಕೆ ಮತ್ತೊಬ್ಬ ನಾಯಕ ಸಿಗುವವರೆಗೂ ಅವರನ್ನೇ ನಾಯಕನಾಗಿ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪತ್ರಿಕೆಯೊಂದರ ಪ್ರಕಾರ ಚಾಂಪಿಯನ್ಸ್ ಟ್ರೋಫಿಯೇ ರೋಹಿತ್ ಅವರ ಕೊನೆಯ ಅಂತಾರಾಷ್ಟ್ರೀಯ ಟೂರ್ನಿಯಾಗಲಿದೆ ಎಂದು ವರದಿ ಮಾಡಿದೆ.

ಚಾಂಪಿಯನ್ಸ್ ಟ್ರೋಫಿ ಕೊನೆಯ ಪಂದ್ಯಾವಳಿ?

ದೈನಿಕ್ ಜಾಗರಣ್ ಸುದ್ದಿ ಪ್ರಕಾರ, ಜೂನ್- ಜುಲೈ ತಿಂಗಳಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಪ್ರವಾಸಕ್ಕೆ ರೋಹಿತ್ ಆಯ್ಕೆಯಾಗುವ ಸಾಧ್ಯತೆಗಳಿಲ್ಲ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಮುಗಿಯುವುದರೊಂದಿಗೆ ಅವರ ಅಂತರಾಷ್ಟ್ರೀಯ ವೃತ್ತಿ ಜೀವನವೂ ಅಂತ್ಯವಾಗಲಿದೆ ಎಂದಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಮೂರು ಲೀಗ್ ಪಂದ್ಯಗಳನ್ನು ಆಡಬೇಕಿದೆ. ಕೊನೆಯ ಲೀಗ್ ಪಂದ್ಯ ಮಾರ್ಚ್ 2 ರಂದು ನಡೆಯಲಿದೆ. ಒಂದು ವೇಳೆ ತಂಡವು ಸೆಮಿಫೈನಲ್ ತಲುಪದಿದ್ದರೆ, ಮಾರ್ಚ್ 2 ರೋಹಿತ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಕೊನೆಯ ದಿನವಾಗಬಹುದು. ಆದಾಗ್ಯೂ ತಂಡ ಸೆಮಿಫೈನಲ್‌ ಪ್ರವೇಶಿಸಿ, ಅಲ್ಲಿ ಸೋತರೆ, ಮಾರ್ಚ್ 4 ರೋಹಿತ್ ಶರ್ಮಾ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿರಬಹುದು. ಒಂದು ವೇಳೆ ತಂಡ ಫೈನಲ್‌ಗೆ ತಲುಪಿದರೆ, ಮಾರ್ಚ್ 9 ರೋಹಿತ್ ವೃತ್ತಿಜೀವನದ ಕೊನೆಯ ದಿನವಾಗಬಹುದು ಎಂದು ವರದಿ ಮಾಡಿದೆ.

ಇಂಗ್ಲೆಂಡ್‌ ಸರಣಿಗೆ ಆಯ್ಕೆ ಅನುಮಾನ

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ಸಿಡ್ನಿ ಟೆಸ್ಟ್‌ಗೆ ತಂಡದಲ್ಲಿ ಆಯ್ಕೆ ಮಾಡಿರಲಿಲ್ಲ. ಹೀಗಿರುವಾಗ ಇಂಗ್ಲೆಂಡ್ ಪ್ರವಾಸಕ್ಕೆ ಅವರನ್ನು ಆಯ್ಕೆ ಮಾಡುವುದು ಕಷ್ಟ. ಚಾಂಪಿಯನ್ಸ್ ಟ್ರೋಫಿ ನಂತರ, ಟೀಂ ಇಂಡಿಯಾ 2027 ರಲ್ಲಿ ವಿಶ್ವಕಪ್ ಆಡಬೇಕಾಗಿದೆ. ಪ್ರಸ್ತುತ 38 ವರ್ಷದ ರೋಹಿತ್‌ಗೆ ಆಗ 40 ವರ್ಷವಾಗಿರಲಿದೆ. ಹೀಗಾಗಿ ಆ ವಯಸ್ಸಿನಲ್ಲಿ ವಿಶ್ವಕಪ್ ಆಡುವುದು ಕೊಂಚ ಕಷ್ಟ. ಅದಕ್ಕಾಗಿಯೇ ಚಾಂಪಿಯನ್ಸ್ ಟ್ರೋಫಿ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯಾವಳಿಯಾಗಬಹುದು ಎಂದು ಹೇಳಲಾಗುತ್ತಿದೆ.

Source : https://tv9kannada.com/sports/cricket-news/rohit-sharmas-international-cricket-future-psr-963410.html

Leave a Reply

Your email address will not be published. Required fields are marked *