ಚಿತ್ರದುರ್ಗದಲ್ಲಿ ಜ.18ರಂದು ರಾಜ್ಯ ಮಟ್ಟದ ವಿಚಾರಗೋಷ್ಠಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 17 : ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್-ಕರ್ನಾಟಕ ದಿಕ್ಕೂಚಿ ಬಂಜಾರ-ಕರ್ನಾಟಕದ ವತಿಯಿಂದ ಸಂವಿಧಾನ ಗೌರವ ಅಭಿಯಾನ ಸಂವಿಧಾನೇರೋ ಮಾನ್ ಪಾನ್ ಅಭಿಯಾನದ ಅಂಗವಾಗಿ ರಾಜ್ಯ ಮಟ್ಟದ ವಿಚಾರಗೋಷ್ಠಿ ಯನ್ನು ಚಿತ್ರದುರ್ಗ ನಗರದಲ್ಲಿ ಜ. 18 ರಂದು ನಗರದ ವಿ.ಪಿ.ಬಡಾವಣೆಯ ಉಮಾಪತಿ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ವಿಚಾರ ಗೋಷ್ಟಿಯು ಬಾಬಾಸಾಹೇಬರ ಸಂವಿಧಾನ ಬದಲಾಯಿಸಿದ್ದು ಯಾರು? | ಬಲಪಡಿಸಿದ್ದು ಯಾರು? ಎಂಬ ವಿಷಯದ ಬಗ್ಗೆ ನಡೆಯಲಿದೆ. ಇದರ ಉದ್ಘಾಟನೆಯನ್ನು ಮಾಜಿ ಸಚಿವರು, ಔರಾದ್‍ನ ಶಾಸಕರಾದ ಪ್ರಭು ಚೌಹಾನ್ ನೇರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಲಬುರ್ಗಿ ಕ್ಷೇತ್ರದ ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ವಹಿಸಲಿದ್ದಾರೆ. ಕುಡುಚಿ ಕ್ಷೇತ್ರದ ಮಾಜಿ ಶಾಸಕರು, ಬಿಜೆಪಿ ಕರ್ನಾಟದ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ್ ವಿಚಾರ ಮಂಡನೆ ಮಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಾಬುರಾವ್ ಚೌಹಾಣ್, ಮಾಜಿ ಶಾಸಕರಾದ ಬಸವರಾಜ ನಾಯಕ್, ಅಶೋಕ್ ನಾಯಕ್, ಚಂದ್ರ ನಾಯಕ್, ಶಿರಹಟ್ಟಿ ಶಾಸಕರಾದ ಡಾ ಚಂದ್ರು ಲಮಾಣಿ, ಹೂವಿನ ಹಡಗಲಿ ಶಾಸಕರಾದ ಕೃಷ್ಣ ನಾಯಕ್, ಚಿಂಚೂಳ್ಳಿ ಶಾಸಕರಾದ ಡಾ. ಅವಿನಾಶ್ ಜಾಧವ್ ಆಗಮಿಸಲಿದ್ದಾರೆ ಎಂದು ಸಂಘಟಕರಾದ ಜಯಸಿಂಹ ಕಾಟ್ರೋತ್, ಸುರೇಶ್ ನಾಯಕ್ ಭೀಮಸಮುದ್ರ, ಡಾ ಜಯಸಿಂಹ ಹಾಗೂ ಗುರುಪ್ರಸಾದ್ ಬೆಂಗಳೂರು ಇವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *