ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 18 : ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರರವರು ಸಿದ್ದರಾಮಯ್ಯರವರ ಬಗ್ಗೆ ವಿಚಾರ ಮಾಡುವುದು ಬಿಡಲಿ.ಅವರು ಮೊದಲು ಪೂರ್ಣಾವಧಿ ಅಧ್ಯಕ್ಷರಾಗಿ ಇರ್ತಾರ ಎಂದು ಹೇಳಲಿ.ಅವರ ಕುರ್ಚಿಯ ನಾಲ್ಕು ಕಾಲಲ್ಲಿ ಮೂರು ಹೋಗಿವೆ.ಒಂದೇ ಕಾಲಲ್ಲಿ
ವಿಜಯೇಂದ್ರ ಅವರ ಕುರ್ಚಿ ನಿಂತಿದೆ.ಅವರಿಗೆ ನಾನೇ ಕೇಳುತ್ತೇನೆ. ನೀವು ಎಷ್ಟು ದಿನ ರಾಜ್ಯಾಧ್ಯಕ್ಷರಾಗಿ ಇರುತ್ತೀರಿ.ಅದನ್ನು
ಮೊದಲು ಹೇಳಿ,ಅಮೇಲೆ ನಾನು ಸಿಎಂ ಬಗ್ಗೆ ಮಾತನಾಡೋಣ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಲಭ್ಯ
ಅಭಿವೃದ್ಧಿ ಸಚಿವರಾದ ಎಂ.ಬಿ ಪಾಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಟಾಂಗ್ ನೀಡಿದ್ದಾರೆ.
ನಗರದ ಶ್ರೀ ಮುರುಘಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಮುಖ್ಯಮಂತ್ರಿ ಯಾವಾಗ ಬೇಕಾದರೂ ರಾಜೀನಾಮೆ
ಕೊಡಬಹುದು ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ ಉತ್ತರಿಸಿದರು. ಮುಡಾ ಪ್ರಕರಣದಲ್ಲಿ ಇ.ಡಿ ವರದಿ ಸಲ್ಲಿಕೆಯಾಗಿದೆ ಸಿಎಂ
ರಾಜೀನಾಮೆಗೆ ಬಿಜೆಪಿ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ ಇ.ಡಿ, ಸಿಬಿಐ, ಐಟಿ ಮೋದಿ, ಅಮಿತ್ ಶಾ ನಿರ್ದೇಶನಕ್ಕೆ ಒಳಪಡುವ
ಸಂಸ್ಥೆಗಳು.ಕಾನೂನಾತ್ಮಕ ಹೋರಾಟ ನಡೆದಿದೆ.. ಅದರ ಬಗ್ಗೆ ಜಾಸ್ತಿ ಮಾಡನಾಡಲ್ಲ.ಸಿಎಂ ಅವರು ಯಾವುದೇ ರೀತಿಯ ತಪ್ಪನ್ನು
ಮಾಡಿಲ್ಲ.ನಮ್ಮ ಸಿಎಂ ಎಲ್ಲಾವನ್ನು ಹೆದುರಿಸಲು ಗಟ್ಟಿಯಾಗಿ ಇದ್ದಾರೆ. ಎಂದ ಅವರು, ಕಾಂಗ್ರೆಸ್ ಶಾಸಕರಿಂದ ಸರ್ಕಾರ ಬೀಳಿಸುವ
ಕೆಲಸ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಯತ್ನಾಳ್ ಬೆಳಗ್ಗೆ, ಮಧ್ಯಾಹ್ನ, ಸಂಜೆ ಒಂದೊಂದು ಹೇಳುತ್ತಾರೆ.ಪ್ರತೀ ದಿನ
ನಾಲ್ಕು ಸಲ ಹೇಳುತ್ತಾರೆ ಅದಕ್ಕೆಲ್ಲಾ ಉತ್ತರ ಕೊಡಲು ಆಗಲ್ಲ.. ಅವರು ನಮ್ಮ ಜಿಲ್ಲೆಯವರಲ್ಲ,..ಅವರನ್ನು ನಾವು ನೋಡಿದ್ದೀವಿ…
ಅದಕ್ಕೆ ನಾವು ಅವರಿಗೆ ಯಾವುದಕ್ಕೂ ಉತ್ತರವನ್ನು ಕೊಡಲ್ಲ.. ಯತ್ನಾಳ್ ರವರಿಗೆ ಹೇಳುತ್ತೇನೆ ನಮ್ಮ ಸರ್ಕಾರ
ಬೀಳೋದಿಲ್ಲ…ನಿಮ್ಮ ಪಕ್ಷದಲ್ಲಿ ಇರುವ ಹೊಲಸನ್ನು ಮೊದಲು ಶುದ್ದ ಮಾಡಿಕೊಳ್ಳಿ. ನೀವೇ ಕೊರೊನಾದಲ್ಲಿ 2000 ಕೋಟಿ ಹಗರಣ
ಆಗಿದೆ ಅಂತ ವಿಜಯೇಂದ್ರ, ಯಡಿಯೂರಪ್ಪ ರವರ ಬಗ್ಗೆ ಹೇಳಿದ್ದು ನೆನಪು ಮಾಡಿಕೊಳ್ಳಿ ಎಂದು ಟೀಕಿಸಿದರು.
ನಮ್ಮ ಪಕ್ಷದ ಯಾವ ಒಬ್ಬ ಶಾಸಕನೂ ಬೇರೆ ಪಕ್ಷಕ್ಕೆ ಹೋಗೋದಿಲ್ಲ… ಬಿಜೆಪಿ ಕೆಲ ಶಾಸಕರು ನಮ್ಮಜೊತೆ
ಗುರುತಿಸಿಕೊಂಡಿರೋದನ್ನು ನೀವೇ ನೋಡಿದ್ದೀರಿ…ಜೆಡಿಎಸ್ ನಿಂದ ಒಂದು ದೊಡ್ಡ ಟೀಮ್ ಹೊರಗೆ ಬರಲಿಕ್ಕೆ ರೆಡಿ ಆಗಿದೆ.ಜೆಡಿಎಸ್,
ಬಿಜೆಪಿಯಿಂದ ಕನಿಷ್ಠ 25 ಜನ ಶಾಸಕರು ಸೂಕ್ತ ಸಂದರ್ಭದಲ್ಲಿ ನಮ್ಮ ಕಡೆ ಬರುತ್ತಾರೆ..ಯತ್ನಾಳ್ ರವರೇ ನಮ್ಮ ಸರ್ಕಾರ ಹೇಗೆ
ಬೀಳುತ್ತದೆ.60 ಕಾಂಗ್ರೆಸ್ ಶಾಸಕರನ್ನು ರಮೇಶ್ ಜಾರಕಿಹೊಳಿ ಕರೆ ತರುತ್ತಾರೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ
ಓ., ಓ.., ಅದೇನು ಹುಣಸೇ ಕೊಪ್ಪಾ ಅಥವಾ ಕವಡಿನಾ ಎಂದು ವ್ಯಂಗವಾಡಿದರು.
ಬಿಜೆಪಿ ಶಾಸಕರ ಸಂಪರ್ಕ ಯಾಕೆ ಅವರೇ ನಮ್ಮ ಬಳಿ ಗುರುತಿಸಿಕೊಂಡಿದ್ದಾರೆ… ಅವರ ಹೆಸರು ಹೇಳಲ್ಲ.. ಅದು ನಿಮಗೂ
ಗೊತ್ತಿದೆ.. ಸೂಕ್ತ ಸಂದರ್ಭದಲ್ಲಿ ಅವರನ್ನು ಪಕ್ಷಕ್ಕೆ ಕರೆತರಲು ಮಹೂರ್ತ ಫಿಕ್ಸ್ ಮಾಡುತ್ತೇವೆ.ಅದಕ್ಕೂ ಒಂದು ಸಮಯ, ಸಂದರ್ಭ
ಇರುತ್ತದೆ ಹೇಳುತ್ತೇವೆ.. ನಾವು ಆಪರೇಷನ್ ಹಸ್ತ ಮಾಡಲ್ಲ ಇವರು ಮುಳುಗ್ತಿರೋ ಹಡಗು.ಅವರೇ ಬೇಸತ್ತು ಬಿಜೆಪಿಯಲ್ಲಿ ಆರು
ಬಾಗಿಲು ಆಗಿವೆ… ಯತ್ನಾಳ್, ವಿಜಯೇಂದ್ರ, ಬಿಎಸ್ ವೈ, ಅಶೋಕ್ ಹೀಗೆ ಆರು ಬಾಗಿಲುಗಳಿವೆ. ಇವರ ದೋಸೆ ತುಂಬಾ ತೂತುಗಳೇ ಇವೆ.. ಬೇರೆಯವರ ದೋಸೆಯಲ್ಲಿ ತೂತು ಹುಡುಕುತ್ತಿದ್ದಾರೆ… ಮೊದಲು ನಿಮ್ಮದು ಶುದ್ದ ಮಾಡಿಕೊಳ್ಳಿ… ನಮ್ಮ ಬಗ್ಗೆ
ಯಾಕೆ ಚಿಂತನೆ ಮಾಡುತ್ತೀರಿ..
ಕೆಐಡಿಬಿಐ ಯಲ್ಲಿ ಭ್ರಷ್ಟಾಚಾರ ನಡೀತಿದೆ ಎಂಬ ರಾಜೀವ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಎಸ್.ಸಿ/ಎಸ್.ಟಿ ಅಧ್ಯಕ್ಷರನ್ನು ಕರೆದು
ಕೇಳಿ ಯಾರಾದರೂ ಒಂದು ಪೈಸೆ ತೆಗೆದುಕೊಳ್ಳುತ್ತಿದ್ದಾರಾ ಅಂತ.ಸುಮ್ಮನೆ ಇಲ್ಲ ಸಲ್ಲದ ಆರೋಪ ಮಾಡೋಕೆ
ಹೋಗಬೇಡಿ.ಲಘುವಾಗಿ ಮಾತನಾಡುವ ಕೆಲಸವನ್ನು ಯಾರೂ ಮಾಡಬಾರದು. ಎಂದು ಕಿವಿ ಮಾತು ಹೇಳಿದರು.