ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ : ಶ್ರೀ ಮಹಾ ಶಿವಶರಣ ಹರಳಯ್ಯ ಗುರು ಪೀಠ ಹಾಗೂ ಮಹಾ ಶಿವಶರಣ ಹಳೆಯ ಶಿಕ್ಷಣ ಸಂಸ್ಥೆ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಗಿದ್ದು ಈ ಸಂದರ್ಭದಲ್ಲಿ ಮಾತನಾಡುತ್ತಾ ಸನಿಧ್ಯ ವಹಿಸಿದ ಹರಳಯ್ಯ ಸ್ವಾಮೀಜಿ ಸಂವಿಧಾನ ಸಾರ್ವಭೌಮ ಸಂಕೇತ ಸಮಾನತೆಯ ಸಂಕೇತ ಹಾಗೂ ಪ್ರಜಾಪ್ರಭುತ್ವದ ಸಂಕೇತ, ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಹಾಗೂ ಪ್ರಜೆಗಳಿಗಾಗಿ ನಿರ್ಮಾಣವಾದಂತ ಈ ಸಂವಿಧಾನವು ಸಮಾನತೆಯ ಸಿದ್ಧಾಂತದ ತಳಹದಿಯಲ್ಲಿ ನಿಂತಿದೆ.
ಈ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬುದ್ಧನ ಕರುಣೆ ಬಸವಣ್ಣನ ಸಮಾನತೆ ಹಾಗೂ ಶರಣರ ಅನುಭವದೊಂದಿಗೆ ಅನುಭವ ಮಂಟಪದ ಸಿದ್ಧಾಂತದಂತೆ ಸಂವಿಧಾನ ಪರಿಶುದ್ಧತೆಯೊಂದಿಗೆ ಪರಿಪೂರ್ಣತೆಯೊಂದಿಗೆ ನಿರ್ಮಾಣವಾಗಿದೆ ಈ ಸಂವಿಧಾನವು ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದ್ದು ಸರ್ವ ಜನಾಂಗದ ತೋಟವಾದ ಈ ಭಾರತ ದೇಶದ ಅಭಿನಯಕ್ಕೆ ಮತ್ತು ಸಂರಕ್ಷಣೆಗೆ ಉಕ್ಕಿನ ಕೋಟೆಯಾಗಿದೆ ಈ ಸಂವಿಧಾನಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ್ದಾರೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಜಾರಿಗೆ ತರುವಲ್ಲಿ ಶ್ರಮವಹಿಸಿ 1950 ಜನವರಿ 26ರಂದು ಸಂವಿಧಾನವನ್ನು ಅಂಗೀಕಾರ ಮಾಡಿಸುವಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಯಶಸ್ವಿಯಾದರು ಈ ದೇಶ ಕಂಡ ಅದ್ಭುತ ವ್ಯಕ್ತಿತ್ವದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಒಳಿತಿಗಾಗಿ ಶೋಷಿತರ ಒಳಿತಿಗಾಗಿ ಅನಾಥ ಬೋಲೇ ರಕ್ಷಣೆಗಾಗಿ ಈ ಸಂವಿಧಾನ ನ್ಯಾಯ ಸಮತವಾದ ಸಂವಿಧಾನವಾಗಿಡೆ . ಇಂಥ ಶುಭ ಸಂದರ್ಭದಲ್ಲಿ ಈ ದಿನವನ್ನು ರಾಷ್ಟ್ರೀಯ ಹಬ್ಬವಾಗಿ ಇಡೀ ದೇಶಾದ್ಯಂತ ಆಚರಿಸುತ್ತಿರುವುದು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭರಂಪರಾದ ಬಸವರಾಜ್ ಅವರ ಮಾತನಾಡುತ್ತಾ ಶಿಕ್ಷಣ ಶಕ್ತಿ ಇದ್ದಾಗೆ ಅದು ಸರ್ವರ ಶಕ್ತಿಯಾಗಬೇಕು ಎಂದರು .
ಮತ್ತೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೊಹಮ್ಮದ್ ವಸೀಮ ಅವರು ಮಾತನಾಡುತ್ತಾ ಶಾಲೆಗಳು ದೇವಾಲಯಗಳಾಗಬೇಕು ಗುರುಗಳು ದೀಪವಾಗಬೇಕು ಎಂದರು.