Ranji Match: ಕೊಹ್ಲಿ ಆಡುವ ರಣಜಿ ಮ್ಯಾಚ್ ನೋಡಲು ಊಹೆಗೆ ಮೀರಿದ ಫ್ಯಾನ್ಸ್! ಕೊನೆಕ್ಷಣದಲ್ಲಿ ಪ್ರೇಕ್ಷಕರಿಗೆ ಆಧಾರ್ ಕಾರ್ಡ್ ಕಡ್ಡಾಯ.

ಕೊಹ್ಲಿ ಆಡುವ ಮ್ಯಾಚ್ ನೀಡುವ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅಭಿಮಾನಿಗಳು ತಮ್ಮ ಆಧಾರ್ ಕಾರ್ಡ್ ಅನ್ನು ತಮ್ಮೊಂದಿಗೆ ಕಡ್ಡಾಯವಾಗಿ ತರಬೇಕಾಗುತ್ತದೆ. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅಶೋಕ್ ಕುಮಾರ್ ಶರ್ಮಾ ಅವರು ಮೊದಲ ದಿನ ಕನಿಷ್ಠ 10,000 ಪ್ರೇಕ್ಷಕರು ಆಗಮಿಸಬಹುದೆಂದು ನಿರೀಕ್ಷಿಸುತ್ತಿದ್ದಾರೆ.

ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಸುದೀರ್ಘ ಸಮಯದ ನಂತರ ದೇಶೀಯ ಕ್ರಿಕೆಟ್‌ಗೆ (Domestic Cricket) ಪುನರಾಗಮನ ಮಾಡುತ್ತಿದ್ದಾರೆ. ಕಳೆದ 12 ವರ್ಷಗಳಿಂದ ಅವರು ಯಾವುದೇ ದೇಶೀಯ ಪಂದ್ಯವನ್ನು ಆಡಿಲ್ಲ. ವಿರಾಟ್ ಕೊಹ್ಲಿ 2024-25ರ ರಣಜಿ ಟ್ರೋಫಿಯಲ್ಲಿ (Ranji Trophy) ದೆಹಲಿ ಪರ ಆಡಲಿದ್ದಾರೆ. ದೆಹಲಿ ರೈಲ್ವೇಸ್ ತಂಡವನ್ನು ಎದುರಿಸಲಿದೆ. ರಣಜಿ ಟ್ರೋಫಿಯ ಗುಂಪು ಹಂತದ ಕೊನೆಯ ಪಂದ್ಯಗಳು ಜನವರಿ 30 ರಿಂದ ಪ್ರಾರಂಭವಾಗಲಿವೆ. ದೆಹಲಿ ಮತ್ತು ರೈಲ್ವೆ ತಂಡಗಳ ನಡುವಿನ ಈ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕ್ರೀಡಾಂಗಣಕ್ಕೆ ಹೋಗುವ ಮುನ್ನ ಅಭಿಮಾನಿಗಳಿಗೆ ಹೊಸ ನಿಮಯ

ವಿರಾಟ್ ದೇಶೀಯ ಕ್ರಿಕೆಟ್‌ಗೆ ಮರಳಲು ಡಿಡಿಸಿಎ ವಿಶೇಷ ತಯಾರಿ ನಡೆಸುತ್ತಿದೆ. ಈ ಪಂದ್ಯದ ವೇಳೆ ಅರುಣ್ ಜೇಟ್ಲಿ ಸ್ಟೇಡಿಯಂ 10,000 ಅಭಿಮಾನಿಗಳಿಗೆ ಆತಿಥ್ಯ ವಹಿಸಲಿದೆ. ವಿಶೇಷವೆಂದರೆ ಅಭಿಮಾನಿಗಳಿಗೆ ಉಚಿತ ಪ್ರವೇಶವನ್ನು ಇರಿಸಲಾಗಿದೆ. ಸಾಮಾನ್ಯವಾಗಿ ರಣಜಿ ಪಂದ್ಯಗಳಲ್ಲಿ ಅಭಿಮಾನಿಗಳಿಗೆ ಒಂದು ಸ್ಟ್ಯಾಂಡ್ ತೆರೆಯಲಾಗುತ್ತದೆ. ಆದರೆ ಈ ಪಂದ್ಯಕ್ಕಾಗಿ DDCA ಕ್ರೀಡಾಂಗಣದ ಕೊನೆಯಲ್ಲಿ ಮೂರು ಸ್ಟ್ಯಾಂಡ್ ಕೂಡ ತೆರೆಯುತ್ತಿದೆ. ಈ ಪಂದ್ಯದ ವೇಳೆ ಅಭಿಮಾನಿಗಳು ಗೇಟ್ ಸಂಖ್ಯೆ 16 ಮತ್ತು 17 ರಿಂದ ಕ್ರೀಡಾಂಗಣಕ್ಕೆ ಬರಲು ಸಾಧ್ಯವಾಗುತ್ತದೆ. ಆದರೂ ಅವರೆಲ್ಲರು ಭದ್ರತಾ ತಪಾಸಣೆಗೆ ಒಳಗಾಗಬೇಕಾಗುತ್ತದೆ.

ಅಧಾರ್ ಕಾರ್ಡ್ ಕಡ್ಡಾಯ

ಕೊಹ್ಲಿ ಆಡುವ ಮ್ಯಾಚ್ ನೀಡುವ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅಭಿಮಾನಿಗಳು ತಮ್ಮ ಆಧಾರ್ ಕಾರ್ಡ್ ಅನ್ನು ತಮ್ಮೊಂದಿಗೆ ಕಡ್ಡಾಯವಾಗಿ ತರಬೇಕಾಗುತ್ತದೆ. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅಶೋಕ್ ಕುಮಾರ್ ಶರ್ಮಾ ಅವರು ಮೊದಲ ದಿನ ಕನಿಷ್ಠ 10,000 ಪ್ರೇಕ್ಷಕರು ಆಗಮಿಸಬಹುದೆಂದು ನಿರೀಕ್ಷಿಸುತ್ತಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಅವರು, ‘ಗೌತಮ್ ಗಂಭೀರ್ ಸ್ಟ್ಯಾಂಡ್ ಅಭಿಮಾನಿಗಳಿಗೆ ಮುಕ್ತವಾಗಿರುತ್ತದೆ. ಅಭಿಮಾನಿಗಳು ಗೇಟ್ ಸಂಖ್ಯೆ 16 ಮತ್ತು 17 ರಿಂದ ಪ್ರವೇಶಿಸಬಹುದು. DDCA ಸದಸ್ಯರು ಮತ್ತು ಅತಿಥಿಗಳಿಗಾಗಿ ಗೇಟ್ ಸಂಖ್ಯೆ 6 ಸಹ ತೆರೆದಿರುತ್ತದೆ. ಮೊದಲ ದಿನ 10,000 ಜನ ಸೇರುವ ನಿರೀಕ್ಷೆಯಲ್ಲಿದ್ದೇವೆ. ಇದು ಉಚಿತ ಪ್ರವೇಶವಾಗಿದೆ, ಅಭಿಮಾನಿಗಳು ತಮ್ಮ ಆಧಾರ್ ಕಾರ್ಡ್ ಅಥವಾ ಅದರ ಫೋಟೋಕಾಪಿಯನ್ನು ತರಬೇಕು. ಈ ಪಂದ್ಯವು ಅಂತಾರಾಷ್ಟ್ರೀಯ ಅಥವಾ ಐಪಿಎಲ್ ಪಂದ್ಯದಂತೆ ಇರಲಿದೆ ” ಎಂದು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಭರ್ಜರಿ ತಯಾರಿ

ವಿರಾಟ್ ಕೊಹ್ಲಿ ತಮ್ಮ ಕೊನೆಯ ರಣಜಿ ಪಂದ್ಯವನ್ನು ನವೆಂಬರ್ 2012 ರಲ್ಲಿ ಆಡಿದ್ದರು. ಇದೀಗ ವಿರಾಟ್ ಕೊಹ್ಲಿ ಕೂಡ ಈ ಪಂದ್ಯಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದಾರೆ. ಕೊಹ್ಲಿ ತಮ್ಮ ಸಹ ಆಟಗಾರರೊಂದಿಗೆ ಎರಡು ದಿನಗಳ ಕಾಲ ಅಭ್ಯಾಸ ನಡೆಸಿದ್ದಾರೆ. ಈ ಅವಧಿಯಲ್ಲಿ ವಿರಾಟ್ ಕೊಹ್ಲಿ ನೆಟ್‌ನಲ್ಲಿ ಹೆಚ್ಚು ಸಮಯ ಕಳೆದಿದ್ದಾರೆ. ಅವರು ಥ್ರೋ-ಡೌನ್‌ಗಳು, ಸ್ಪಿನ್ನರ್‌ಗಳು ಮತ್ತು ನಂತರ ವೇಗದ ಬೌಲರ್‌ಗಳನ್ನು ಎದುರಿಸಿದ್ದಾರೆ.

ಪೊಲೀಸರಿಗೆ ಪಚೀತಿ

ವಿರಾಟ್ ಕೊಹ್ಲಿ ಮೈದಾನದಲ್ಲಿರುವುದರಿಂದ ಸಾವಿರಾರು ಅಭಿಮಾನಿಗಳು ಅವರು ಅಭ್ಯಾಸ ಮಾಡುವುದನ್ನ ನೋಡುವುದಕ್ಕೆ ಮೈದಾನಕ್ಕೆ ಬರುತ್ತಿದ್ದಾರೆ. ಅಭಿಮಾನಿಗಳ ಸಂಖ್ಯೆ ನೋಡಿ ತಮ್ಮಿಂದ ಕಂಟ್ರೋಲ್ ಮಾಡಲು ಸಾಧ್ಯವಾಗುತ್ತಿಲ್ಲ ಹೆಚ್ಚುವರಿ ಪೊಲೀಸರನ್ನ ನಿಯೋಜನೆ ಮಾಡಿ ಎಂದು ಅಧಿಕಾರಿಯೊಬ್ಬರು ಮಾತನಾಡುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ.

ಪಂದ್ಯಕ್ಕೆ ಎರಡು ದಿನ ಮೊದಲು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಕೊಹ್ಲಿ ಅಭ್ಯಾಸ ನಡೆಸುತ್ತಿರುವುದು ಪೊಲೀಸ್ ಅಧಿಕಾರಿಗೆ ತಿಳಿದಿತ್ತು. ವಿರಾಟ್ ನೋಡಲು ಅನೇಕ ಪತ್ರಕರ್ತರು ಮತ್ತು ಕ್ಯಾಮೆರಾಮೆನ್ ಕೂಡ ಅಲ್ಲಿಗೆ ಆಗಮಿಸಿ ವಿರಾಟ್ ಅವರನ್ನು ಕ್ಲಿಕ್ಕಿಸಿದರು. ಈ ಕ್ರಮದಲ್ಲಿ ಮೈದಾನದ ಗೇಟ್ ಬಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಜಮಾಯಿಸಿದ್ದರು. ಇದರಿಂದ ಬಂದೋಬಸ್ತ್ ಗೆ ಬಂದಿದ್ದ ದೆಹಲಿಯ ಸಬ್ ಇನ್ಸ್ ಪೆಕ್ಟರ್ ಆಫ್ ಪೊಲೀಸ್ ಪ್ರದೀಪ್ ರಾಣಾಗೆ ಕರೆ ಮಾಡಿ ಅಲರ್ಟ್ ಆಗಿದ್ದಾರೆ. ಕೊಹ್ಲಿಗಾಗಿ ಬಂದ ಅಭಿಮಾನಿಗಳಿಂದ ಗೊಂದಲಕ್ಕೀಡಾದ ಅವರು, ಅವರನ್ನು ನಿಯಂತ್ರಿಸಲು ಹೆಚ್ಚಿನ ಭದ್ರತಾ ಪಡೆಗಳನ್ನು ಹೊಂದಿರಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಇದೀಗ ಆ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉಚಿತ ಪ್ರವೇಶ-ಲೈವ್ ಪಂದ್ಯ

ದೆಹಲಿ ಕ್ರಿಕೆಟ್ ಅಸೋಸಿಯೇಷನ್ ​​ಈಗಾಗಲೇ ಪಂದ್ಯಕ್ಕೆ ಬರುವ ಅಭಿಮಾನಿಗಳಿಗೆ ಟಿಕೆಟ್‌ಗಳ ಅಗತ್ಯವಿಲ್ಲದೆ ಎಲ್ಲರಿಗೂ ಉಚಿತ ಪ್ರವೇಶವನ್ನು ಏರ್ಪಡಿಸಿದೆ. ನಾರ್ತ್ ಎಂಡ್, ಓಲ್ಡ್ ಕ್ಲಬ್ ಹೌಸ್ ಕೂಡ ತೆರೆಯಲಿದೆ ಎಂದು ತಿಳಿದುಬಂದಿದೆ. ಹೆಚ್ಚುವರಿ ಆಸನಗಳನ್ನು ಸಿದ್ಧಪಡಿಸಲಾಗುವುದು ಎಂದು ಮಾಹಿತಿ ಲಭಿಸಿದೆ. ಈ ಪಂದ್ಯದ ನೇರ ಪ್ರಸಾರವನ್ನು Jio ಸಿನಿಮಾ OTT ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ. ಇತ್ತೀಚೆಗಷ್ಟೇ ಬಿಸಿಸಿಐ ಈ ಕುರಿತು ಘೋಷಣೆ ಮಾಡಿದೆ.

Source:https://kannada.news18.com/news/sports/ranji-trophy-2025-free-entry-for-spectators-to-watch-virat-kohli-but-aadhar-card-mbr-1981651.html

Leave a Reply

Your email address will not be published. Required fields are marked *