ಭರಮಸಾಗರದಲ್ಲಿ ಫೆ.4 ರಿಂದ 12ರ ವರೆಗೆ ಅದ್ದೂರಿ ತರಳಬಾಳು ಹುಣ್ಣಿಮೆ ಮಹೋತ್ಸವ.

ರಾಜ್ಯ ಮಟ್ಟದ ಕುಸ್ತಿ ಹಾಗೂ ಕ್ರಿಡಾಕೂಟ ಸ್ಪರ್ಧೆಗಳ ಮೆರಗು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 03: ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದಿಂದ ಕಳೆದ 76 ವರ್ಷಗಳಿಂದ ನಾಡಿನ ಒಳ ಹೊರಗೆ ನಡೆಸಿಕೊಂಡು ಬಂದಿರುವ ವಾರ್ಷಿಕ ಸಮಾರಂಭ ತರ ಒಂದು ನಾಡ ಹಬ್ಬವಾಗಿ ಸರ್ವ ಜನಾದಾರಣೆಯನ್ನು ಗಳಿಸಿರುವ, ಜಾತಿ, ಮತ, ಪ್ರಾಂತ್ಯ ಪ್ರದೇಶಗಳ
ಬೇದವಿಲ್ಲದೆ ಎಲ್ಲರನ್ನ ಸದ್ಧರ್ಮದ ಬೆಸುಗೆಯಲ್ಲಿ ಒಗ್ಗೂಡಿಸುವ ತರಳಬಾಳು ಹುಣ್ಣಿಮೆ ಮಹೋತ್ಸವವು ಈ ಬಾರಿ ಚಿತ್ರದುರ್ಗ ಜಿಲ್ಲೆಯ
ಭರಮಸಾಗರದಲ್ಲಿ ಫೆ.4 ರಿಂದ 12ರ ವರೆಗೆ 9 ದಿನಗಳ ಕಾಲ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ
ಜರುಗಲಿದೆ.

ಫೆ.4ರ ಮಂಗಳವಾರ ಸಂಜೆ 6:30ಕ್ಕೆ ಶಿಕ್ಷಣ-ಕಲೆ-ಸಂಸ್ಕೃತಿ ವಿಷಯದ ಅಥಿತಿಗಳಾಗಿ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ
ಸ್ವಾಮಿಗಳು, ಎಂ.ಬಿ.ಪಾಟೀಲ್, ಮಧುಬಂಗಾರಪ್ಪ, ಡಿ.ಸುಧಾಕರ್, ಡಾ.ಎಂ.ಚಂದ್ರಪ್ಪ, ಟಿ.ವೆಂಕಟೇಶ್, ರವಿಕುಮಾರ್, ಚಿತ್ರನಟ
ಡಾಲಿ ಧನಂಜಯ್, ಕುಲಪತಿ ಬಿಡಿ ಕುಂಬಾರ ಭಾಗವಹಿಸಲಿದ್ದಾರೆ.

ಫೆ.5ರ ಬುಧವಾರ ಮಹಿಳೆ ಮತ್ತು ಸಮಾಜ ವಿಷಯದ ಅಥಿತಿಗಳಾಗಿ ಶ್ರೀ ಜಯೇಂದ್ರ ಪುರಿ ಮಹಾಸ್ವಾಮಿಗಳವರು, ಲತಾ
ಮಲ್ಲಿಕಾರ್ಜುನ್, ಉಮಾಶ್ರೀ, ನಾಗಲಕ್ಷ್ಮಿಚೌದರಿ, ಜಿ.ಆರ್.ಜೆ.ದಿವ್ಯಪ್ರಭು, ಶಾಲಿನಿ ಶ್ರೀಶೈಲ ದೊಡ್ಡಮನಿ, ಡಾ.ನಾಗಪುಷ್ಪಲತಾ
ಭಾಗವಹಿಸಲಿದ್ದು, ಡಾ.ಬಿ.ಟಿ.ಕವಿತಾ, ಎಂ.ಎಸ್.ಆಶಾದೇವಿ, ಹಾಸ್ಯ ಭಾಷಣಕಾರರಾದ ಸಂಧ್ಯಾಶೇಣೈ ಉಪನ್ಯಾಸ ನೀಡಲಿದ್ದಾರೆ.

ಫೆ.6ರ ಗುರುವಾರ ರಾಜಕಾರಣ ಮತ್ತು ಸಮಾಜದ ವಿಷಯದ ಅತಿಥಿಗಳಾಗಿ ಮೌಲಾನ ಬಿ.ಎ ಇಬ್ರಾಹಿಂ ಸಖಾಫಿ,
ಬಿ.ವೈ.ವಿಜಯೇಂದ್ರ, ಗೋವಿಂದಕಾರಜೋಳ, ಕೆ.ಆರ್.ರಮೇಶ್‍ಕುಮಾರ್, ಮುಖ್ಯಮಂತ್ರಿಚಂದ್ರು, ಬಿ.ಜಿ.ಗೋವಿಂದಪ್ಪ,
ಎಸ್.ಎಲ್.ಬೋಜೇಗೌಡ, ಕೆ.ಎಸ್.ಬಸವಂತಪ್ಪ, ಎಚ್.ಕೆ.ಸುರೇಶ್ ಭಾಗವಹಿಸಲಿದ್ದು, ಎಚ್.ಡಿ.ತಮ್ಮಯ್ಯ, ವೀರೇಂದ್ರ ಪಪ್ಪಿ,
ಬಿ.ದೇವೇಂದ್ರಪ್ಪ, ಧನಂಜಯ ಸರ್ಜಿ, ಪ್ರಕಾಶ್ ಕೋಳಿವಾಡ, ಮಿಮಿಕ್ರಿ ಗೋಪಿ ಉಪನ್ಯಾಸ ನೀಡಲಿದ್ದಾರೆ.

ಫೆ.7ರ ಶುಕ್ರವಾರ ಶರಣ ಸಾಹಿತ್ಯ ಮತ್ತು ಸಮಾಜದ ವಿಷಯದ ಅಥಿತಿಗಳಾಗಿ ಧಾರವಾಡ ಶ್ರೀ ಮುರುಘಾ ಮಠದ ಶ್ರೀ
ಮು.ನಿ.ಪ್ರ.ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಾಗೂ ಬೆಂಗಳೂರು ಬೇಲಿ ಮಠದ ಶ್ರೀ ಮ.ನಿ.ಪ.ಶಿವಾನುಭವ ಚರಮೂರ್ತಿ
ಶಿವರುದ್ರ ಸ್ವಾಮೀಜಿಯವರು, ಡಾ.ಹಂಪಾ ನಾಗರಾಜಯ್ಯ, ಗೊ.ರು.ಚನ್ನಬಸಪ್ಪ, ಡಾ.ಶಿವಾನಂದ ಕಣವಿ, ಡಾ.ಮಾಂತೇಶ್‍ಬೀಳಗಿ, ಡಾ.ಬಿ.ರಾಜಶೇಖರಪ್ಪ, ಡಾ.ರಾಜಶೇಖರ ಜಮದಂಡಿ ಆಗಮಿಸಲಿದ್ದು, ಡಾ.ಮಾಂತೇಶ್‍ಬಿರಾದಾರ ಅಶೋಕ್ ದೊಮ್ಮಲೂರು
ಉಪನ್ಯಾಸ ನೀಡಲಿದ್ದಾರೆ.

ಫೆ.8ರ ಶನಿವಾರ ನ್ಯಾಯಾಲಯ ಮತ್ತು ಸಮಾಜ ವಿಷಯದ ಮುಖ್ಯ ಅತಿಥಿಗಳಾಗಿ ಎನ್.ಸಂತೋಷ್ ಹೆಗಡೆ, ಪ್ರಭಾಕರಶಾಸ್ತ್ರಿ,
ಕೃಷ್ಣ.ಎಸ್.ದೀಕ್ಷಿತ್, ವೇದವ್ಯಾಸಾಚಾರ್‍ಶ್ರೀಶಾನಂದ ಆಗಮಿಸಲಿದ್ದಾರೆ.

ಫೆ.9ರ ಭಾನುವಾರ ಆರೋಗ್ಯ ಮತ್ತು ಸಮಾಜದ ವಿಷಯದ ಅಥಿತಿಗಳಾಗಿ ಹರಿಹರದ ಶ್ರೀ ವಚನಾನಂದ ಸ್ವಾಮೀಜಿಯವರು,
ಡಾ.ಶರಣಪ್ರಕಾಶ್‍ರುದ್ರಪ್ಪಪಾಟೀಲ್, ಡಾ.ಸಿ.ಎನ್.ಮಂಜುನಾಥ್, ಡಾ.ಪ್ರಭಾಮಲ್ಲಿಕಾರ್ಜುನ್, ಡಾ.ಶರಣ್‍ಪಾಟೀಲ್,
ಎಂ.ಎಸ್.ದಿವಾಕರ್, ಡಾ.ಅಬ್ದುಲ್‍ಬಷೀರ್, ಕೊಗಳಿಕೊಟ್ರೇಶ್ ಆಗಮಿಸಲಿದ್ದಾರೆ.

ಫೆ.10ರ ಸೋಮವಾರ ಸಮೂಹ ಮಾಧ್ಯಮ ಮತ್ತು ಸಮಾಜ ವಿಷಯದ ಅಥಿತಿಗಳಾಗಿ ವಾಲ್ಮೀಕಿ ಗುರುಪೀಠದ ಶ್ರೀ
ಪ್ರಸನ್ನಾನಂದಪುರಿ ಸ್ವಾಮೀಜಿ, ಪಬ್ಲಿಕ್ ಟಿ.ವಿಯ ಎಚ್.ಆರ್.ರಂಗನಾಥ್, ವಿಜಯ ಕರ್ನಾಟಕ ದಿನಪತ್ರಿಕೆ ಸಂಪಾದಕರಾದ
ಸುದರ್ಶನ್ ಚನ್ನಂಗಿಹಳ್ಳಿ, ಡಾ.ಬಿ.ಆರ್.ರವಿಕಾಂತ್‍ಗೌಡ, ಡಾ.ಜಿ.ಎಂ.ಗಂಗಾಧರಸ್ವಾಮಿ, ಬಿ.ಪಿ.ಹರೀಶ್, ಕೆ.ಎಸ್.ನವೀನ್,
ಬೆಳ್ಳಿಪ್ರಕಾಶ್, ಎಚ್.ಪಿ.ರಾಜೇಶ್, ಆಗಮಿಸಲಿದ್ದು, ಟಿ.ವಿ.9ನ ರಂಗನಾಥ್ ಭಾರಧ್ವಜ್, ಎಂ.ಎಸ್.ರಾಘವೇಂದ್ರ, ಯತೀಶ್‍ಚಂದ್ರ,
ಎಂ.ಎಸ್.ಶರತ್ ಉಪನ್ಯಾಸ ನೀಡಲಿದ್ದಾರೆ.

ಫೆ.11ರ ಮಂಗಳವಾರ ಕೃಷಿ ಮತ್ತು ಜಲ ಸಂರಕ್ಷಣೆ ವಿಷಯದ ಅಥಿತಿಗಳಾಗಿ ಮಹಾರಾಷ್ಟ್ರ ಕನ್ನೆರಿ ಅದೃಶ್ಯ ಕಾಡುಸಿದ್ದೇಶ್ವರ
ಸ್ವಾಮೀಜಿ ಹಾಗೂ ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿಯವರು, ಬಿ.ಎಸ್.ಯಡಿಯೂರಪ್ಪ,
ಎನ್.ಚೆಲುವರಾಯಸ್ವಾಮಿ, ಡಾ.ರಾಜೇಂದ್ರಸಿಂಗ್, ಎಚ್.ಆರ್.ಬಸವರಾಜಪ್ಪ, ಎಚ್.ಆಂಜನೇಯ, ಟಿ.ರಘುಮೂರ್ತಿ,
ಎಸ್.ವಿ.ರಾಮಚಂದ್ರಪ್ಪ, ಮಲ್ಲಿಕಾರ್ಜುನ ಗುಂಗೆ ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭ.

ಫೆ.12ರ ಸಮಾರೋಪ ಸಮಾರಂಭದಲ್ಲಿ ಧರ್ಮ-ವಿಜ್ಞಾನ-ಸಮಾಜ ವಿಷಯದ ಮುಖ್ಯ ಅತಿಥಿಗಳಾಗಿ ಯದುವೀರ್ ಕೃಷ್ಣದತ್ತ
ಚಾಮರಾಜ ಒಡೆಯರ್, ಡಿ.ಕೆ.ಶಿವಕುಮಾರ್, ಬಸವರಾಜ ಬೊಮ್ಮಾಯಿ, ಎಸ್.ಎಸ್.ಮಲ್ಲಿಕಾರ್ಜುನ್, ಜಿ.ಎಂ.ಸಿದ್ದೇಶ್ವರ,
ಜೆ.ಸಿ.ಮಾಧುಸ್ವಾಮಿ, ಡಿ.ಜಿ.ಶಾಂತನಗೌಡ, ಯು.ಬಿ.ಬಣಕಾರ್, ಶಿವಗಂಗಾ ಬಸವರಾಜ್ ಆಗಮಿಸಲಿದ್ದು, ಡಾ. ಬಿ.ಎನ್.ಸುರೇಶ್,
ಪ್ರೊ.ಎಂ.ಕೃಷ್ಣೇಗೌಡ, ಅಜಿತ್ ಹನುಮಕ್ಕನವರ್, ಡಾ.ಎಚ್.ಎಸ್.ಹರಿಶಂಕರ್, ವಿದೇಶದ ವಿದ್ವಾಂಸಕರು ಭಾಗವಹಿಸಲಿದ್ದಾರೆ.

ರಾಜ್ಯಮಟ್ಟದ ಕುಸ್ತಿ ಹಾಗೂ ಕ್ರಿಡಾಕೂಟ ಸ್ಪರ್ಧೆಗಳ ಮೆರಗು.

ಹುಣ್ಣಿಮೆ ಮಹೋತ್ಸವದಲ್ಲಿ ರಾಜ್ಯಮಟ್ಟದ ಕುಸ್ತಿ, ಕ್ರಿಡಾಕೂಟ ಸ್ಪರ್ಧೆಗಳು, ಹಾಗೂ ಪ್ರತಿಭಾನ್ವೇಷಣೆಗಳನ್ನು ಏರ್ಪಡಿಸಿದ್ದು,
ಶ್ರೀಮಠದಿಂದ ಬಹುಮಾನಗಳನ್ನು ನಿಗದಿಪಡಿಸಲಾಗಿದೆ. ಜೊತೆಗೆ ಶಾಲೆ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸ್ಪರ್ಧೆಗಳು,
ಕರ್ನಾಟಕದ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನಗಳು, ವಿಜ್ಞಾನ ವಸ್ತು ಪ್ರದರ್ಶನ ಇನ್ನು ಮುಂತಾದ ಕಾರ್ಯಕ್ರಮಗಳು
ಸಹ ಪ್ರತಿನಿತ್ಯ ಜರುಗಲಿವೆ.

ಸಾಮಾಜಿಕ ನೆರವು ಕಾರ್ಯಕ್ರಮಗಳು
ಪುಸ್ತಕ ಮಳಿಗೆಗಳು, ವಸ್ತು ಪ್ರದರ್ಶನ ಮಳಿಗೆಗಳು, ಯುವ ಪ್ರತಿಭೆಗಳ ವಿಷಯ ಮಂತನದ ಜೊತೆಗೆ ಹುತಾತ್ಮ ಸೈನಿಕರ 10
ಕುಟುಂಬಗಳಿಗೆ ಆರ್ಥಿಕ ನೆರವು, ವಿಶ್ವಬಂಧು ಮರಳಸಿದ್ದ, ಬಿಸಿಲುಬೆಳದಿಂಗಳ ಕೃತಿಗಳು ಸಹ ಲೋಕಾರ್ಪಣೆಗೊಳಲಿವೆ.

ಭರಮಸಾಗರ ಕೆರೆಯಲ್ಲಿ ದೋಣಿ ವಿಹಾರ, ಮುರುಡೇಶ್ವರದಿಂದ ಬರಲಿವೆ ಯಾಂತ್ರಿಕೃತ ಬೋಟ್,
ಭರಮಸಾಗರದ ಐತಿಹಾಸಿಕ ಭರಮಣ್ಣ ನಾಯಕನ ಕೆರೆಯಲ್ಲಿ ದೋಣಿ ವಿಹಾರ ಏರ್ಪಡಿಸಲಾಗಿದ್ದು, ಮುರುಡೇಶ್ವರದಿಂದ
ಯಾಂತ್ರಿಕೃತ ದೋಣಿಗಳನ್ನು ತರಿಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವ ಭಕ್ತಾಗಳು ವಿಶಾಲವಾದ ಕೆರೆಯಲ್ಲಿ
ದೋಣಿ/ಬೋಟ್‍ನಲ್ಲಿ ಕುಳಿತು ಸಂಚರಿಸಬಹುದಾಗಿದೆ.

ಹುಣ್ಣಿಮೆ ನಿಮಿತ್ತ ಮುರುಡೇಶ್ವರದಿಂದ 20 ಹಾಗೂ 10 ಜನರನ್ನು ಒಳಗೊಂಡ ಎರಡು ವಿಶೇಷ ಬೋಟ್‍ಗಳು ಬರಲಿದ್ದು, 9 ದಿನಗಳ
ಕಾಲ ಭರಮಸಾಗರ ಕೆರೆಯಲ್ಲಿ ನೋಡುಗರ ಮನ ಸೆಳೆಯಲಿದೆ. ಜಿಲ್ಲಾ ರಕ್ಷಣಾಕಾರಿಗಳಿಂದ ಇದಕ್ಕೆ ಅನುಮತಿ ಪಡೆದಿದ್ದು,
ವಯಸ್ಕರೊಬ್ಬರಿಗೆ 100 ರೂಗಳ ಹಣ ನಿಗದಿ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಮಕ್ಕಳಿಗೆ ಪ್ರವೇಶವನ್ನು ನಿಷೇಸಲಾಗಿದೆ.

ಭರಮಸಾಗರ ಕೆರೆಯಲ್ಲಿ ತೆಪ್ಪೋತ್ಸವ – ಶ್ರೀಗಳಿಂದ ಚಾಲನೆ

ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಫೆ.4ರ ಮಂಗಳವಾರ ಸಂಜೆ 4.30ಕ್ಕೆ ಭರಮಸಾಗರ ದೊಡ್ಡ
ಕೆರೆಯಲ್ಲಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿ ದೋಣಿ ವಿಹಾರ ಮಾಡಲಿದ್ದಾರೆ. ಇದಕ್ಕಾಗಿ ಬೊಟ್‍ಗಳನ್ನು ಹೂವುಗಳಿಂದ ವಿಶೇಷವಾಗಿ
ಸಿಂಗರಿಸಲಾಗುತ್ತಿದ್ದು, ಬಲೂನ್ ಡೆಕೋರೇಷನ್ ಸಹ ಇರಲಿದೆ. ತೆಪ್ಪೋತ್ಸವ ಉದ್ಘಾಟನೆಯಾದ ನಂತರ ಭಕ್ತಾದಿಗಳು 9 ದಿನಗಳ
ಕಾಲ 1000 ಎಕರೆ ವಿಸ್ತೀರ್ಣದ ವಿಶಾಲ ಕೆರೆಯಲ್ಲಿ ದೋಣಿ ಸಂಚಾರದ ಅನುಭವವನ್ನು ಪಡೆಯಬಹುದಾಗಿದೆ.

ಶ್ರೀಗಳು ಸಂಚರಿಸುವ ಮಾರ್ಗ.

ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಫೆ.4ರ ಸೋಮವಾರ ಬೆಳಗ್ಗೆ 10 ಗಂಟೆಗೆ
ಐಕ್ಯಮಂಟಪಕ್ಕೆ ಆಗಮಿಸಿ ಲಿಂ.ಶಿವಕುಮಾರ ಶ್ರೀಗಳ ಹಾಗೂ ಗುರುಶಾಂತೇಶ್ವರ ಶ್ರೀಗಳ ಕರ್ತೃ ಗದ್ದಿಗೆಗೆ ಪುಷ್ಪ ನಮನ ಸಲ್ಲಿಸಿ,
ನಂತರ ಒಬ್ಬವ್ವನಾಗತಿಹಳ್ಳಿ, ಸಿರಿಗೆರೆ ಸರ್ಕಲ್, ಚಿಕ್ಕಬೆನ್ನೂರು, ಕೊಳಹಾಳ್, ಬೇಡರಶಿವನಕೆರೆ, ಬಸವನಶಿವನಕೆರೆ,
ಹಿರೇಕಬ್ಬಿಗೆರೆ, ಚಿಕ್ಕಕಬ್ಬಿಗೆರೆ, ಮುದ್ದಾಪುರ, ಮುದ್ದಾಪುರಮ್ಯಾಸರಹಟ್ಟಿ, ಯಳಗೋಡು, ಬಸ್ತಿಹಳ್ಳಿ, ನೆಲ್ಲಿಕಟ್ಟೆ, ಹೊಸಹಟ್ಟಿ,
ಇಸಾಮುದ್ರ, ಕಾಲಗೆರೆ ಕೋಡಿಹಳ್ಳಿ, ಕೊಗುಂಡೆ, ಬಹದ್ದೂರ್‍ಗಟ್ಟ, ಯಮ್ಮನಘಟ್ಟ, ಪಂಜಯ್ಯನಹಟ್ಟಿ, ನಂದಿಹಳ್ಳಿ, ದ್ಯಾಪನಹಳ್ಳಿ,
ಚೌಲಿಹಳ್ಳಿ, ಚೌಲಿಹಳ್ಳಿ ಗೊಲ್ಲರಹಟ್ಟಿ, ಕೋಡಿರಂಗವನಹಳ್ಳಿ, ವಡ್ಡರಹಟ್ಟಿ, ಹೆಗಡೆಹಾಳು, ಕಸವನಹಳ್ಳಿ ಬಿ.ಗೊಲ್ಲರಹಟ್ಟಿ,
ಭರಮಸಾಗರ ಭರಮಣ್ಣನಾಯಕ ತೆಪ್ಪೋತ್ಸವದ ನಂತರ ಬಿಚ್ಚುಗತ್ತಿ ಭರಮನಾಯಕ ಮಹಾಮಂಟಪಕ್ಕೆ ಆಗಮಿಸಲಿದ್ದಾರೆ.

ವಾಹನ ನಿಲುಗಡೆ ಮತ್ತು ಸಂಚಾರ ನಿರ್ವಾಹಣೆ ವ್ಯವಸ್ಥೆ

ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಆಗಮಿಸುವ ವಾಹನ ಸವಾರರಿಗೆ ಕಾರ್ಯಕ್ರಮ ಸ್ಥಳದ ಎರಡೂ ಭಾಗದಲ್ಲೂ ಹುಣ್ಣಿಮೆ
ಸಮಿತಿಯು ಸೂಚನಾ ಫಲಕಗಳ ವ್ಯವಸ್ಥೆಯೊಂದಿಗೆ ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆಯನ್ನು ಹಾಗೂ ನಿಲುಗಡೆ ಸ್ಥಳದಲ್ಲಿ
ಬೆಳಕಿನ ವ್ಯವಸ್ಥೆಯನ್ನೂ ಸಹ ಕಲ್ಪಿಸಲಾಗಿದೆ.

ತರಳಬಾಳು ಹುಣ್ಣಿಮೆ – ಅಂಚೆ ಇಲಾಖೆಯಿಂದ ವಿಶೇಷ ಲಕೋಟೆ.

ತರಳಬಾಳು ಹುಣ್ಣಿಮೆಯ ನೆನಪಿಗಾಗಿ ಭಾರತೀಯ ಅಂಚೆ ಇಲಾಖೆಯು ವಿಶೇಷ ಅಂಚೆ ಲಕೋಟೆಯನ್ನು ದೇಶದ ಎಲ್ಲಾ ಅಂಚೆ
ಕಚೇರಿಗಳಲ್ಲಿ ಬಿಡುಗಡೆ ಮಾಡಿದೆ. ಭರಮಣ್ಣನಾಯಕನ ಕೆರೆಯಲ್ಲಿ ನೀರು ಚಿಮ್ಮುವ ಕಾರಂಜಿಯ ಹಿನ್ನೆಲೆಯ ವಿನ್ಯಾಸದ ಮೇಲೆ
ಲಿಂ.ಶಿವಕುಮಾರ ಸ್ವಾಮೀಜಿ ಹಾಗೂ ಶಿವಮೂರ್ತಿ ಸ್ವಾಮಿಜಿ ಅವರ ಚಿತ್ರಗಳನ್ನು ಮುದ್ರಿಸಲಾಗಿದೆ. ವಿಶ್ವಬಂಧು ಮರುಳಸಿದ್ದರು
ತೆಲುಗುಬಾಳುಸಿದ್ದನಿಗೆ ಆಶೀರ್ವದಿಸುವ ಸುಂದರ ಚಿತ್ರವನ್ನು ಲಕೋಟೆಯ ಮೇಲೆ ಮುದ್ರಿಸಲಾಗಿದೆ. ಹುಣ್ಣಿಮೆಗೆ ಆಗಮಿಸುವ
ಭಕ್ತಾದಿಗಳಿಗೆ ಭಾರತೀಯ ಅಂಚೆ ಇಲಾಖೆಯು ಸ್ಮರಣೀಯ ಕೊಡುಗೆ ನೀಡಿದೆ.

ಲಕೋಟೆಯಲ್ಲಿ 12ನೇ ಶತಮಾನದಲ್ಲಿ ಸ್ಥಾಪಿತಗೊಂಡ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮಾನವೀಯತೆಯ
ತಳಹದಿಯ ಮೇಲೆ ಸರ್ವ ಜನಾಂಗದ ಉನ್ನತಿಗಾಗಿ ಸ್ವಾತಂತ್ರ್ಯ ಪೂರ್ವದಿಂದಲೂ ಸೇವೆ ಸಲ್ಲಿಸುತ್ತಾ ಬಂದಿರುವ ದಕ್ಷಿಣ ಭಾರತದ
ಒಂದು ಪ್ರಮುಖ ಮಠವಾಗಿದೆ. ಇದರ ಮೂಲ ಸಂಸ್ಥಾಪಕರಾದ ವಿಶ್ವಬಂಧು ಮರುಳಸಿದ್ದರು ಬಸವಣ್ಣನವರ ಹಿರಿಯ
ಸಮಕಾಲೀನವರು. ಮಾಘ ಶುದ್ಧ ಹುಣ್ಣಿಮೆಯಂದು ತಮ್ಮ ಶಿಷ್ಯ ತೆಲುಗುಬಾಳುಸಿದ್ಧನಿಗೆ ತರಳ ಬಾಳು ಎಂದು ಹರಸಿದರು. ಈ
ನೆಲೆಯಲ್ಲಿ ನಾಡಿನಾದ್ಯಂತ ಪ್ರತಿವರ್ಷ ಆಚರಿಸಿಕೊಂಡು ಬಂದಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಸಾಮಾಜಿಕ ಸಮಾನತೆ,
ಶಾಂತಿ, ಸಹೋದರತ್ವ, ಭಾವೈಕ್ಯತೆ ಮತ್ತು ಜಾತ್ಯಾತೀತ ಭಾವನೆಯನ್ನು ಬೆಳೆಸುತ್ತಾ ಬಂದಿರುವ ಸರ್ವ ಜನಾದಾರಣೇಯ ನಾಡ
ಹಬ್ಬವಾಗಿದೆ ಎಂದು ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *