
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಹೊಳಲ್ಕೆರೆ ಫೆ, 03: ಮಳೆಗಾಲ ಆರಂಭವಾಗುವುದರೊಳಗೆ ರಸ್ತೆ ಕಾಮಗಾರಿಯನ್ನು ಮುಗಿಸುವಂತೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ
ಗುತ್ತಿಗೆದಾರನಿಗೆ ಶಾಸಕ ಡಾ.ಎಂ.ಚಂದ್ರಪ್ಪ ಸೂಚಿಸಿದರು.
ಹೊಳಲ್ಕೆರೆ ತಾಲ್ಲೂಕಿನ ಲೋಕದೊಳಲು ಗ್ರಾಮದ ಬೆಟ್ಟದ ಮೇಲಿರುವ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇವಸ್ಥಾನಕ್ಕೆ 1.50
ಕೋಟಿ ರೂ.ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ದೊಡ್ಡಹೊಟ್ಟೆ ರಂಗನಾಥಸ್ವಾಮಿ ಹೆಸರಾಂತ ದೇವರಾಗಿರುವುದರಿಂದ ಭಕ್ತಿ ಭಾವದಿಂದ ಪೂಜಿಸಿದಾಗ ಎಲ್ಲರಿಗೂ ಆರ್ಶೀವಾದ
ಸಿಗುತ್ತದೆ. ಬರಿ ಇಂಜಿನಿಯರ್ ಕಂಟ್ರಾಕ್ಟರ್ಗಳ ಮೇಲೆ ಜವಾಬ್ದಾರಿ ಹಾಕದೆ ಊರಿನವರು ಕಾಲ ಕಾಲಕ್ಕೆ ಸರಿಯಾಗಿ ರಸ್ತೆಗೆ ನೀರಿನ
ಕ್ಯೂರಿಂಗ್ ಮಾಡಿದಾಗ ಗಟ್ಟಿಮುಟ್ಟಾಗಿರುತ್ತದೆ. ನಿಗಧಿತ ಸಮಯದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ
ಡಾ.ಎಂ.ಚಂದ್ರಪ್ಪ ತಿಳಿಸಿದರು.
ಲೋಕದೊಳಲು ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.