
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 4: ತನ್ನ ಕಷ್ಟ ಕಾಲದಲ್ಲಿಯೂ ಮಗಳ ಸುಂದರ ಭವಿಷ್ಯಕ್ಕಾಗಿ ಹಗಲಿರುಳು ಬೀದಿ ಬದಿಯಲ್ಲಿ ಪಾನಿಪೂರಿ ವ್ಯಾಪರ ಮಾಡಿಕೊಂಡು,ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದ ಸೇವೆಯನ್ನು ಮಾಡುತ್ತಿರುವ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕ್ಕಾಪಟ್ಟಣ್ಣ
ಹೋಬಳಿಯ ಗಿಣ್ಣಪ್ಪನಹಟ್ಟಿ ಗ್ರಾಮದ ಭೂತೇಶ ಹಾಗೂ ಭಾಗ್ಯ ದಂಪತಿಗಳ ಸುಪುತ್ರಿ ಪ್ರಿಯಾ ಬಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ
ಶೇಖಡ 90% ಅಂಕ ಪಡೆದು ಎಂಜಿನಿಯರ್ ಪದವಿಗೆ ನೋಂದಣಿಯಾಗಿದ್ದು, ಸರ್ಕಾರ ಸ್ಕಾಲರ್‍ರ್ಶಿಪ್ ನೀಡುವ ವಿಚಾರದಲ್ಲಿ
ತಡವಾಗುತ್ತಿರುವುದಕ್ಕೆ ಖಾಸಗಿ ಶಿಕ್ಷಣ ಸಂಸ್ಥೆ ಇವರ ವಿದ್ಯಾಭ್ಯಾಸಕ್ಕೆ ತಡೆವೊಡ್ಡುತ್ತಿದೆ.
ಈ ಸಂಕಷ್ಟ ಸಂದರ್ಭವನ್ನು ಕುಟುಂಬವು ಶ್ರೀ ಪೀಠಕ್ಕೆ ನಿವೇದಿಸಿಕೊಂಡಾಗ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರು ಕಾಲೇಜಿಗೆ 1.10.000 ರೂ. (ಒಂದು ಲಕ್ಷದ ಹತ್ತು ಸಾವಿರ) ರೂಪಾಯಿಗಳನ್ನು ನೀಡುವುದರ ಮೂಲಕ ಬಡಕುಟುಂಬದ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ.
Views: 0