ಕರ್ನಾಟಕ ಖೋ-ಖೋ ಸಂಸ್ಥೆಯ ಆಶ್ರಯದಲ್ಲಿ ಕ್ರೀಡಾಪಟುಗಳು ಪ್ರತಿಭಟನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 10 ವಿಶ್ವಮಟ್ಟದ ಸ್ಪರ್ದೆಯಲ್ಲಿ ವಿಜೇತರಾದಂತಹ ಮಕ್ಕಳಿಗೆ ಪಕ್ಕದ ರಾಜ್ಯಗಳಲ್ಲಿ ನೀಡುತ್ತೀರುವವಂತೆ ಎ ಗ್ರೇಡ್ ಮತ್ತು ಬಿ ಗ್ರೇಡ್ ಹುದ್ದೆಯನ್ನು ನೀಡುವುದು ಮತ್ತು ಕನಿಷ್ಟ 50 ಲಕ್ಷ ರೂಪಾಯಿಗಳನ್ನಾದರೂ ಬಹುಮಾನದ ಹಣವಾಗಿ ಪ್ರತಿಯೂಬ್ಬ ಕ್ರೀಡಾಪಟುಗಳಿಗೆ
ಕೊಡುವಂತಹ ನಿಯಮವನ್ನು ರೂಪಿಸಬೇಕು. ಅಧೀಕೃತ ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ಈ ಹಿಂದೆ ನೀಡುತ್ತಿದ್ದಂತೆ ನೇರವಾಗಿ
ಮನವಿಯನ್ನು ಪಡೆದು ಅನುದಾನವನ್ನು ನೀಡುವ ಪದ್ದತಿಯನ್ನು ಜಾರಿಗೊಳಿಸಬೇಕು ಈಗ ಇರುವ ರಾಜ್ಯ ಒಲಂಪಿಕ್ ಸಂಸ್ಥೆಯ
ಮೂಲಕ ಅನುದಾನ ಕೇಳುವ ಪದ್ದತಿಯನ್ನು ರದ್ದುಗೂಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ
ಸೋಮವಾರ ಕರ್ನಾಟಕ ಖೋ-ಖೋ ಸಂಸ್ಥೆಯ ಆಶ್ರಯದಲ್ಲಿ ಕ್ರೀಡಾಪಟುಗಳು ಪ್ರತಿಭಟನೆಯನ್ನು ನಡೆಸಿದರು.

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆಯನ್ನು ನಡೆಸಿದ ಕ್ರೀಡಾಪಟುಗಳು, ಎಲ್ಲಾ ರಾಜ್ಯ ಅಧಿಕೃತ
(ರಾಷ್ರ್ಟೀಯ ಫೆಡರೇಷನ್ ನೋಂದಣೆಯಾದ) ರಾಜ್ಯ ಕ್ರೀಡಾ ಸಂಸ್ಥೆಗಳನ್ನು ಕಡ್ಡಾಯವಾಗಿ ಕರ್ನಾಟಕ ಒಲಂಪಿಕ್
ಅಸೋಸಿಯೇಷನ್ ಸದಸ್ಯರಾಗಿ ನೇವಿಸುವಂತೆ ಕ್ರಮ ಕೈಗೂಳ್ಳಬೇಕು ಕರ್ನಾಟಕ ರಾಜ್ಯ ಒಲಂಪಿಕ್ ಅಸೋಸಿಯೇಷನ್
ಯಾವುದೇ ರಾಜ್ಯ ಸಂಸ್ಥೆಗಳನ್ನು ಅನವಶ್ಯಕ ಕಾರಣಗಳಿಗೆ ತೊಂದರೆ ಕೊಡದಂತೆ ನೋಡಿಕೊಳ್ಳುವ ಕ್ರಮ ಕೈಗೂಳ್ಳಬೇಕು.

ರಾಷ್ರ್ಟೀಯ ಒಲಂಪಿಕ್ ಸಂಸ್ಥೆಯಲ್ಲಿರುವ ಯಾವುದೇ ಕಾನೂನುಗಳನ್ನು ರಾಜ್ಯ ಒಲಂಪಿಕ್ ಸಮಸ್ಥೆಯು ಬದಲಾಯಿಸಿದ್ದರೆ ಮತ್ತೆ
ಅದನ್ನು ಸರಿಪಡಿಸುವಂತ ಮತ್ತು ಮುಂದೆ ರಾಷ್ರ್ಟೀಯ ಒಲಂಪಿಕ್ ಸಂಸ್ಥೆಯ ಅನುಮತಿ ಇಲ್ಲದೆ ಯಾವುದೇ ಬದಲಾವಣೆಗಳನ್ನು
ಮಾಡದಂತೆ ಕ್ರಮ ಕೈಗೂಳ್ಳಬೇಕು . ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಂಸ್ಥೆಗೆನ ಈಗಾಗಲೇ ನೀಡಿರುವ ಅನುದಾನದ
ಬಗ್ಗೆ ದುರುಪಯೋಗಪಡಿಸಿಕೂಂಡಿರುವ ಆರೋಪಗಳಿದ್ದು ಅವುಗಳನ್ನು ತನಿಖೆಮಾಡಿಸಬೇಕು. ರಾಜ್ಯದ ಎಲ್ಲಾ ಕ್ರಿಡಾ ಸಂಸ್ಥೆಗಳನ್ನು
ಆಹ್ವಾನಿಸಿ ಅವರುಗಳ ಸಮಸ್ಯೆಗಳನ್ನು ಆಲಿಸಬೇಕೆಂದು ಆಗ್ರಹಿಸಲಾಯಿತು.

ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದ್ದ ಪ್ರಥಮ ವಿಶ್ವ ಖೋ-ಖೋ ಪಂದ್ಯಾವಳಿಗಳ ಚಿನ್ನದ ಪದಕ
ವಿಜೇತರಾದ ರಾಜ್ಯದ ಕು. ಚೈತ್ರ ಮತ್ತು ಚಿ. ಗೌತಮ್ ರವರಿಗೆ ಹೆಚ್ಚಿನ ಧನಸಹಾಯದ ಜೊತೆಗೆ ರಾಜ್ಯ ಸರ್ಕಾರದಲ್ಲಿ
ಉದ್ಯೋಗಾವಕಾಶವನ್ನು ನೀಡಬೇಕು,ಕರ್ನಾಟಕ ರಾಜ್ಯದ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ಹಾಗೂ ಹೆಚ್ಚಿನ ನಗದು
ಬಹುಮಾನವನ್ನು ನೀಡಬೇಕು ಮತ್ತು ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷರಾದ ಗೋವಿಂದರಾಜು ಅವರ ಸರ್ವಾಧಿಕಾರ
ಸರ್ವಾಧಿಕಾರಿ ಧೋರಣೆ ಕೊನೆಗೊಣಿಸಬೇಕೆಂದು ಒತ್ತಾಯಿಸಲಾಯಿತು.

ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯ ಸಮಸ್ಯೆಗಳ ಬಗ್ಗೆ ಹಾಗೂ ರಾಜ್ಯ ಕ್ರೀಡಾ ನೀತಿಯು ಮತ್ತು ಕರ್ನಾಟಕ ಒಲಂಪಿಕ್ಸ್
ಅಸೋಸಿಯೇಷನ್ ಸರ್ವಾಧಿಕಾರದ ಧೋರಣೆಯಿಂದ ಕರ್ನಾಟಕ ಕ್ರೀಡೆಯು ನಾಶವಾಗುತ್ತಿದೆ. ಕಳೆದ ವಾರ ಅಷ್ಟೇ ವಿಶ್ವಮಟ್ಟದ
ಪಂದ್ಯಾವಳಿಯಲ್ಲಿ ಮಹಿಳಾ ಮತ್ತು ಪುರುಷರ ತಂಡದಲ್ಲಿ ಭಾರತ ದೇಶವು ಗೆದ್ದಿದ್ದು ಈ ತಂಡಗಳಲ್ಲಿ ನಮ್ಮ ರಾಜ್ಯದ ಕುಮಾರಿ ಚೈತ್ರ

ಮತ್ತು ಕುಮಾರ್ ಗೌತಮ್ ಎಂಬ ಆಟಗಾರರು ಭಾಗವಹಿಸಿದ್ದು ಪ್ರಶಂಸೆಗೆ ಒಳಗಾಗಿದ್ದಾರೆ ಈ ವಿಶ್ವ ಸ್ಪರ್ದೆಯಲ್ಲಿ ಗೆದ್ದು ನಮ್ಮ
ಆಟಗಾರರಿಗೆ ನಮ್ಮ ರಾಜ್ಯ ಸರ್ಕಾರ ಮತ್ತು ಕಳಪೆ ಕ್ರೀಡಾ ನೀತಿಯಿಂದ ಸರಿಯಾಗಿ ಗೌರವಿಸದೆ ಅವಮಾನ ಮಾಡಿದ್ದು
ಆಟಗಾರರಿಗೆ ರಾಜ್ಯದ ಕ್ರೀಡಾಭಿಮಾನಿಗಳಿಗೆ ತುಂಬಾ ನೋವಾಗಿದೆ.

2014 ರಿಂದ 2025 ರವರೆಗೆ ನಮ್ಮ ಸಂಸ್ಥೆಯ ಕ್ರೀಡಾ ಚಟುವಟಿಕೆ ನಡೆಸಲು ಕೊಡಬೇಕಾಗಿದ್ದ ಸರ್ಕಾರದ ಅನುದಾನವನ್ನು ಸಹ
ನೀಡಿರುವುದಿಲ್ಲ. ಪ್ರತಿ ವರ್ಷ ನಮ್ಮ ರಾಜ್ಯದ ಕ್ರೀಡಾಪಟುಗಳನ್ನು ಸೀನಿಯರ್, ಜೂನಿಯರ್, ಮತ್ತು ಸಬ್ ಜೂನಿಯರ್
ವಿಭಾಗಗಳಲ್ಲಿ ಆಯ್ಕೆ ಮಾಡಿ ತರಬೇತಿ ನೀಡಿ ರಾಷ್ಟ್ರಮಟ್ಟದ ವಿವಿಧ ಮಟ್ಟದ ವಿಭಾಗಗಳಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವರಿಗೆ
ಸಂಚಾರ ಭತ್ಯೆ ಆಹಾರ ಭತ್ಯೆ ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಡಲು ಸುಮಾರು 20ರಿಂದ 25 ಲಕ್ಷ ಖರ್ಚುಗಳಿರುತ್ತದೆ
2018ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮಾಡಿದ ಕ್ರೀಡಾ ನೀತಿಯನ್ನು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಂಸ್ಥೆಯು ತಮ್ಮ
ಸರ್ವಾಧಿಕಾರಿ ಪ್ರವೃತ್ತಿಯನ್ನು ನಡೆಸಲು ಸಂಸ್ಥಯ ಅಧ್ಯಕ್ಷರಾದ ಗೋವಿಂದರಾಜು ಅವರು ರಾಜ್ಯ ಎಲ್ಲಾ ಕ್ರೀಡಾ ಸಂಸ್ಥೆಗಳ ಕ್ರೀಡಾ
ಸಂಘಗಳು ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ ಮೂಲಕವೇ ಸರ್ಕಾರದ ಅನುದಾನವನ್ನು ಕೇಳಬೇಕೆಂಬ ನಿಯಮವನ್ನು ಸೇರಿಸಿ
ನಮ್ಮ ಸಂಸ್ಥೆಗೆ ನೋಂದಣಿ ಕೊಡದೆ ಅನುದಾನ ನೀಡದೆ ಅನ್ಯಾಯ ಮಾಡಿಸಿರುತ್ತಾರೆ. ಹಾಗೂ ರಾಷ್ಟ್ರೀಯ ಫೆಡರೇಶನ್
ದಾಖಲಾಗದ ನಕಲಿ ರಾಜ್ಯ ಖೋ-ಖೋ ಸಂಸ್ಥೆ ಒಂದನ್ನು ಹುಟ್ಟುಹಾಕಿ ಅವರಿಗೆ 10 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಿ
ನಿಜವಾದ ಕ್ರೀಡಾ ಸಂಸ್ಥೆಗೆ ಮತ್ತು ಕ್ರೀಡಾಪಟುಗಳಿಗೆ ಅನ್ಯಾಯ ಮಾಡಿರುತ್ತಾರೆ ಎಂದು ದೂರಿದ್ದಾರೆ.

ಖೋ-ಖೋ ಸಂಸ್ಥೆಯು ದಿನಾಂಕ18/02/2025 ರ ಬೆಳ್ಳಿಗೆ 10 ಗಂಟೆಗೆ ಬೆಂಗಳೂರಿನ ಸಂಗೂಳ್ಳಿರಾಯಣ್ಣ ರೈಲ್ವೇ ನಿಲ್ದಾಣ
(ಕೆ.ಎಸ್.ಆರ್) ದಿಂದ ಸ್ವತಂತ್ರ್ಯ ಉದ್ಯಾನದವೆರೆಗೆ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೂಳ್ಳಲಾಗಿದೆ ಎಂದಿದ್ದಾರೆ.

ಈ ಪ್ರತಿಭಟನೆಯಲ್ಲಿ ಓ ಶ್ರೀನಿವಾಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ , ನವೀನ್, ಧನ್ಯಕುಮಾರ್, ಶ್ರೀನಿವಾಸ
ಮರವಾಯಿ, ಏಕಾಂತ, ಉಪೇಂದ್ರ, ರಜಿಂತ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *