ಭಾರತ ರತ್ನ, ಮಾಜಿ ಪ್ರಧಾನಿ. ಆಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವ ವರ್ಷ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 09 ಬಿಜೆಪಿ ಕರ್ನಾಟಕ-ಮಾಧ್ಯಮ ಪ್ರಕೋಷ್ಠವತಿಯಿಂದ ಅಟಲ್ ಜೀ ಜನ್ಮ ಶತಮಾನೋತ್ಸವ ವರ್ಷಾಚರಣೆಯನ್ನು ಹಮ್ಮಿಕೊಂಡಿದೆಎಂದು ಬಿಜೆಪಿ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಎ.ಮುರಳಿ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು, ಈ ವರ್ಷ ಭಾರತ ರತ್ನ, ಮಾಜಿ ಪ್ರಧಾನಿ. ಆಟಲ್ ಬಿಹಾರಿ ವಾಜಪೇಯಿ ಅವರ ಜನ್ಮ
ಶತಮಾನೋತ್ಸವ ವರ್ಷವಾಗಿರುವುದು ನಮಗೆಲ್ಲರಿಗೂ ಅತ್ಯಂತ ಸಂತೋಷದ ವಿಷಯವಾಗಿದೆ. ಅಟಲ್ ಜಿ ಅವರ ಜನ್ಮದಿನವನ್ನು
ಡಿಸೆಂಬರ್ 25 ರಂದು ‘ಸುಶಾಸನ’ ದಿನವನ್ನಾಗಿ ಆಚರಿಸಲಾಗಿದೆ. ಬೂತ್, ಮಂಡಲ, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ
ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ರವರ ನಿರ್ದೇಶನದಂತೆ ಆಟಲ್ ಜಿ ರವರ ಸ್ಮರಣಾರ್ಥ 2025ರ ಜನವರಿ 14 ರಿಂದ
ಮಾರ್ಚ್ 15 ರವರೆಗೆ ಅಟಲ್ ಸೃತಿ ಸಂಕಲನ ಮತ್ತು ಪ್ರಚಾರ ಅಭಿಯಾನ ಅಭಿಯಾನ ಸಂಬಂಧ ಪ್ರತಿ ಜಿಲ್ಲೆಯಲ್ಲಿ ಈಗಾಗಲೇ
ಒಬ್ಬರು ಹಿರಿಯರು, ಒಬ್ಬರು ಜಿಲ್ಲಾ ಪದಾಧಿಕಾರಿಗಳು, ಒಬ್ಬ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದ
ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಮಂಡಲ ಮಟ್ಟದಲ್ಲಿ ಮಂಡಲದ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರು ಸಮಿತಿಯಲ್ಲಿ
ಇದ್ದು, ಅಟಲ್ ಜಿ ಅವರಿಗೆ ಸಂಬಂಧಿಸಿದ ಫೋಟೋಗಳು, ವೀಡಿಯೊಗಳು, ಭಾಷಣಗಳು ಹಾಗೂ ಪ್ರೇರಣೀಯ ಅನುಭವಗಳ
ಸಂಕಲವನ್ನು ಜಿಲ್ಲಾ ಸಮಿತಿಯು ಸಂಗ್ರಹಿಸಲಾಗುತ್ತಿದೆ. ಅಟಲ್ ಜೀ ರವರೊಂದಿಗೆ ಕಾರ್ಯನಿರ್ವಹಿಸಿದ ಹಿರಿಯರಿಂದ
ಮಾಹಿತಿಯನ್ನು ಸಂಗ್ರಹಿಸುವ ಸಂದರ್ಭದಲ್ಲಿ ಹಿರಿಯ ನಾಯಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಮಾಜಿ
ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಜಿ ಅವರ ಬಗ್ಗೆ ಬರೆಯಲಾದ ಅನೇಕ ಲೇಖನಗಳು ಮತ್ತು ಪುಸ್ತಕಗಳನ್ನು ಸಂಗ್ರಹಿಸಿ ಪಟ್ಟಿ
ಮಾಡಲಾಗುತ್ತಿದೆ ಎಂದಿದ್ದಾರೆ.

2025ರ ಫೆಬ್ರವರಿ 15 ರಿಂದ ಮಾರ್ಚ್ 15 ರವರೆಗೆ ‘ಆಟಲ್ ವಿರಾಸತ್ ಸಮ್ಮೇಳನ’ ‘ಆಟಲ್ ವಿರಾಸತ್ ಸಮ್ಮೇಳನ’ವನ್ನು ಪ್ರತೀ
ಜಿಲ್ಲೆಯಲ್ಲಿ ಆಯೋಜಿಸಲಾಗುವುದು. ಸಮ್ಮೇಳನಕ್ಕೆ ವಿಚಾರವಾದಿಗಳು ಮತ್ತು ಗಣ್ಯರನ್ನು ಆಹ್ವಾನಿಸಿ, ಭಾರತರತ್ನ
ಅಟಲ್‍ಜಿಯವರೊಂದಿಗೆ ಕೆಲಸ ಮಾಡಿದ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಲಿದ್ದೇವೆ. ಆಟಲ್‍ಜಿಯವರ ವ್ಯಕ್ತಿತ್ವ ಮತ್ತು ಕೃತಿಗಳ
ಮೇಲೆ ಅನೇಕ ಪುಸ್ತಕಗಳನ್ನು ಹಾಗೂ ಲೇಖನಗಳನ್ನು ಬರೆದಿರುವ ಲೇಖಕರಿಗೆ ಸನ್ಮಾನಿಸಿ ಗೌರವಿಸಲಾಗುವುದು. ಆಟಲ್‍ಜಿ ಅವರ
ಅಧಿಕಾರಾವಧಿಯಲ್ಲಿನ ವಿಶೇಷ ಸಾಧನೆಗಳು ಮತ್ತು ಯೋಜನೆಗಳ ಮಾಹಿತಿಯನ್ನೊಳಗೊಂಡ ಪಿಪಿಟಿಯನ್ನು ಪ್ರದರ್ಶನ
ಮಾಡಲಿದ್ದೇವೆ. ಅಟಲ್ ಜನ್ಮಶತಮಾನೋತ್ಸವ ದಿನಾಚರಣೆಯ ರಾಜ್ಯದ ತಂಡ ರಚಿಸಲಾಗಿದೆ. ಡಾ ಎ.ಹೆಚ್. ಶಿವಯೋಗಿಸ್ವಾಮಿ
ಅವರು ಪ್ರಮುಖ್ ಆಗಿರುವ, ಜಗದೀಶ್ ಹಿರೇಮನಿ ಅವರು ರಾಜ್ಯ ಸಂಚಾಲಕರಾಗಿರುವ 12 ಜನರ ತಂಡ ರಚನೆಯಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಗೂ ಸಹಾ ಆಟಲ್‍ಜೀಯವರು ಹಲವಾರು ಬಾರಿ ಬಂದಿದ್ದಾರೆ ಈ ಸಮಯದಲ್ಲಿ ಅವರ ಜೊತೆಯಲ್ಲಿ ಇರುವ
ಭಾವಚಿತ್ರ ಹಾಗೂ ಅವರೊಂದಿಗೆ ಕಳೆದ ಸಮಯದ ಅನುಭವವನ್ನು ಯಾರಾದರೂ ಹಿರಿಯ ಕಾರ್ಯಕರ್ತರು ಅಭಿಮಾನಿಗಳು

ನಮ್ಮ ಬಳಿ ಹಂಚಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಮುಂದಿನ ದಿನದಲ್ಲಿ ಇದರ ಬಗ್ಗೆ ರಾಜ್ಯ ಮಟ್ಟದ ಸ್ಮರಣ ಸಂಚಿಕೆಯನ್ನು
ಹೂರ ತರಲಾಗುವುದಲ್ಲದೆ ಅಟಲ್ ಜೀಯವರ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಿದ ಸಮಯದಲ್ಲಿ ಇರುವ ಭಾವಚಿತ್ರಗಳ
ಛಾಯಾಚಿತ್ರಗಳ ಪ್ರದರ್ಶನವನ್ನು ಸಹಾ ಎರ್ಪಡಿಸಲಾಗುವುದು ಇದು ಜಿಲ್ಲೆಯಲ್ಲಿಯೂ ಸಹಾ ನಡೆಯಲಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *