RCB New Captain Announced: ಐಪಿಎಲ್ 2025 ಆರಂಭಕ್ಕೆ ಒಂದು ತಿಂಗಳು ಮುಂಚಿತವಾಗಿಯೇ ಆರ್ಸಿಬಿ ಹೊಸ ನಾಯಕನನ್ನು ಘೋಷಣೆ ಮಾಡಲಾಗಿದೆ.

RCB New Captain Announced: ಮುಂದಿನ ತಿಂಗಳಿನಿಂದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪ್ರಾರಂಭವಾಗಲಿದೆ. ಇದಕ್ಕೂ ಮುನ್ನವೆ RCB ಹೊಸ ಜೆರ್ಸಿ, ವೆಬ್ಸೈಟ್ ಜೊತೆಗೆ ನೂತನ ಕ್ಯಾಪ್ಟನ್ ಘೋಷಣೆ ಮಾಡಿದೆ.
ಕಳೆದ 17 ಆವೃತ್ತಿಗಳಲ್ಲಿ ಮೂರು ಬಾರಿ (2009, 2011, 2016) ಫೈನಲ್ ಪ್ರವೇಶಿಸಿದ್ದರೂ ಆರ್ಸಿಬಿಗೆ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಹೊಸ ತಂಡದೊಂದಿಗೆ ಅಖಾಡಕ್ಕಿಳಿಯಲು ಸಿದ್ಧವಾಗಿರುವ ಬೆಂಗಳೂರು ಶತಾಯಗತ ಕಪ್ ಗೆಲ್ಲಲೇಬೇಕು ಎಂದು ಪಣತೊಟ್ಟಿದೆ. ಇದೇ ಉದ್ದೇಶದಿಂದಾಗಿ ಕಳೆದ ವರ್ಷ ಡಿಸೆಂಬರ್ ಕೊನೆಯಲ್ಲಿ ಜೆಡ್ಡಾದಲ್ಲಿ ನಡೆದಿದ್ದ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಆರ್ಸಿಬಿ ಅಳೆದು ತೂಗಿ ಬಲಿಷ್ಠ ಸೈನ್ಯವನ್ನು ಕಟ್ಟಿದೆ.
https://twitter.com/RCBTweets/status/1889924777151963287
ಈ ಬಾರಿ ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಯಶ ದಯಾಳ್ ಹರತು ಪಡಿಸಿ ಹಳಬರನ್ನೆಲ್ಲ ಕೈಬಿಟ್ಟಿರುವ ಬೆಂಗಳೂರು ಫ್ರಾಂಚೈಸಿ ಹೊಸ ಪ್ರತಿಭೆಗಳಿಗೆ ಮಣೆ ಹಾಕಿ, ಅದೃಷ್ಟದ ಪರೀಕ್ಷೆಗಿಳಿದಿದೆ. ಈ ಬಾರಿ ಟಿ-20ಯಲ್ಲಿ ಸ್ಫೋಟಕ ಪ್ರದರ್ಶನದೊಂದಿಗೆ ಮಿಂಚುವಂತಹ ಬಲಿಷ್ಠ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಅದರಲ್ಲೂ ಭುವನೇಶ್ವರ್ ಕುಮಾರ್, ಫಿಲ್ ಸಾಲ್ಟ್, ಜೇಕಬ್ ಬೆಥೆಲ್, ಟಿಮ್ ಡೇವಿಡ್ ಲಿವಿಂಗ್‌ಸ್ಟೋನ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಡಲಾಗಿದೆ. ಈ ಆಟಗಾರರು ಸಿಡಿದೆದ್ದರೇ ಈ ಸಲ ಕಪ್ ಆರ್ಸಿಬಿಯದ್ದಾಗಲಿದೆ.
ನೂತನ ನಾಯಕ ಯಾರು?: ಈ ಬಾರಿ ಬಲಿಷ್ಠ ತಂಡವನ್ನು ಕಟ್ಟಿರುವ ಆರ್ಸಿಬಿಗೆ ಯಾರು ನಾಯಕನಾಗಲಿದ್ದಾರೆ ಎಂಬ ಬಗ್ಗೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗಳು ನಡೆದಿದ್ದವು. ಅಭಿಮಾನಿಗಳು ಕಾಯುವಿಕೆ ಇಂದು ಕೊನೆಗೊಂಡಿದೆ. ಆರ್ಸಿಬಿಯ ನೂತ ನಾಯಕನಾಗಿ ರಜತ್ ಪಾಟಿದಾರ್ ಆಯ್ಕೆ ಆಗಿದ್ದಾರೆ.
ನಾಯಕತ್ವದ ಅನುಭವ: 2021ರಿಂದಲೂ ಆರ್ಸಿಬಿ ಭಾಗವಾಗಿರುವ 31 ವರ್ಷದ ಪಾಟಿದಾರ್, 2024-2025ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯ ಪ್ರದೇಶ ತಂಡವನ್ನು ಮುನ್ನಡೆಸಿರುವ ಅನುಭವಹೊಂದಿದ್ದಾರೆ. ಅಲ್ಲದೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಂಡವನ್ನು ಫೈನಲ್ಗೆ ಕೊಂಡೊಯ್ಯುವಲ್ಲಿ ಪಾಟಿದಾರ್ ಯಶಸ್ವಿಯಾಗಿದ್ದರು.
ಆದರೆ ಅಲ್ಲಿ ಮುಂಬೈ ವಿರುದ್ಧ ಸೋಲನುಭವಿಸ ಬೇಕಾಯಿತು. ಆರ್ಸಿಬಿ ತಂಡಕ್ಕೆ ನೂತನ ಸಾರಥಿಯಾಗಿರುವ ರಜತ್ ಪಾಟಿದರ್ ಒಟ್ಟಾರೆಯಾಗಿ 8ನೇ ನಾಯಕರಾಗಿದ್ದಾರೆ.
ಕಳೆದ ವರ್ಷ ಫಾಪ್ ಡು ಪ್ಲೆಸಿಸ್ ತಂಡದ ನಾಯಕತ್ವ ವಹಸಿಕೊಂಡಿದ್ದರು. ಇವರ ನಾಯಕತ್ವದಲ್ಲಿ ಆರ್ಸಿಬಿ ಸೆಮಿಫೈನಲ್ಗೆ ಪ್ರವೇಶ ಪಡೆದಿತ್ತು. ಆದರೆ ಅಲ್ಲಿ ರಾಜಸ್ತಾನ್ ರಾಯಲ್ ವಿರುದ್ಧ ಸೋಲನ್ನು ಕಂಡು ಹೊರ ಬಿದ್ದಿತ್ತು.
ಆರ್ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಯಶ್ ದಯಾಳ್, ರಸಿಕ್ ದಾರ್, ಜೋಶ್ ಹ್ಯಾಜಲ್‌ವುಡ್, ಕೃನಾಲ್ ಪಾಂಡ್ಯ, ಸುಯಾಶ್ ಶರ್ಮಾ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಂಡಗೆ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಛಿಕರಾ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಥೀ.